News

ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಮೊಯ್ಲಿ, ನಿಜವಾದ ಬ್ರಾಹ್ಮಣರು, ಸ್ವಾಮೀಜಿಗಳು ಮೋದಿಯನ್ನು ಗರ್ಭಗುಡಿಗೆ ಬಿಡಬಾರದಿತ್ತು ಎಂದ್ರು…..!

ಜ.22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿದ್ದು, ರಾಮಲಲ್ಲಾನ ಪ್ರಾಣ ಪ್ರತಿಷ್ಟೆ ನಡೆದಿದೆ. ಈ ಮಹತ್ತರ ಕ್ಷಣವನ್ನು ಇಡೀ ದೇಶದ ರಾಮಭಕ್ತರು ಸಂಭ್ರಮಿಸಿದ್ದರು. ಇನ್ನೂ ಮಂದಿರದ ಉದ್ಘಾಟನೆ ದಿನಾಂಕ ಘೋಷಣೆಯಾದಾಗಿನಿಂದ ಪರ ಹಾಗೂ ವಿರೋಧ ಹೇಳಿಕೆಗಳು ಕೇಳಿಬರುತ್ತಲೇ ಇತ್ತು. ಇದೀಗ ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಪ್ರಧಾನಿ ಮೋದಿಯವರ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಅಸ್ಸಾಂನಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ವೀರಪ್ಪ ಮೊಯ್ಲಿ ಮೋದಿ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮ ಮಂದಿರ ಅಪೂರ್ಣವಾಗಿದೆ. ಕೇವಲ ರಾಮಲಲ್ಲಾ ಪ್ರಾಣಪ್ರತಿಷ್ಟೆ ಮಾಡಿದರೇ ಸಾಲದು, ಅಲ್ಲಿ ರಾಮ, ಲಕ್ಷ್ಮಣ, ಸೀತಾ ಹಾಗೂ ಆಂಜೇನಯನ ವಿಗ್ರಹಗಳೂ ಇರಬೇಕು. ಆಗ ಮಾತ್ರ ರಾಮಮಂದಿರ ಪೂರ್ಣ ಆಗುತ್ತದೆ. ನಿಜವಾದ ಬ್ರಾಹ್ಮಣರು, ಸ್ವಾಮೀಜಿಗಳು ರಾಮಮಂದಿರ ಲೋಕಾರ್ಪಣೆ ನಿಮಿತ್ತ ರಾಮಲಲ್ಲಾ ಪ್ರಾಣ ಪ್ರತಿಷ್ಪಾಪನೆಯ ವೇಳೆ ಮೋದಿಯನ್ನು ಗರ್ಭಗುಡಿಗೆ ಬಿಡಬಾರದಾಗಿತ್ತು ಎಂದು ಹೇಳಿದರು.

ಇನ್ನೂ ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಮೋದಿಯವರೇ ಮುಖ್ಯಮಂತ್ರಿಗಳಾಗಿದ್ದರು. ಆ ಸಮಯದಲ್ಲಿ ರಾಜಧರ್ಮ, ಕಾನೂನು ಪಾಲನೆ ಮಾಡಲಿಲ್ಲ. ಅಂತಹ ವ್ಯಕ್ತಿಯಿಂದ ರಾಮಲಲ್ಲಾ ಪ್ರತಿಷ್ಟಾಪನೆ ಮಾಡಿಸಿದ್ದು ಎಷ್ಟರ ಮಟ್ಟಿಗೆ ಸರಿ. ಅವರಿಂದ ದೇವಾಲಯಕ್ಕೆ ಎಷ್ಟರ ಮಟ್ಟಿಗೆ ಪಾವಿತ್ರತ್ಯತೆ ಬರಲಿದೆ ಎಂಬೆಲ್ಲಾ ಕಾಮೆಂಟ್ ಗಳನ್ನು ಮಾಡಿದ್ದಾರೆ. ಇನ್ನೂ ಮೋದಿ ನೀಡಿದ ಹೇಳಿಕೆಗಳು ಬಿಜೆಪಿ ಮುಖಂಡರನ್ನು ಕೆರಳಿಸಿದೆ. ತಮ್ಮದೇ ಆದ ಶೈಲಿಯಲ್ಲಿ ಮೊಯ್ಲಿಯವರಿಗೆ ಕೌಂಟರ್‍ ಸಹ ಕೊಡುತ್ತಿದ್ದಾರೆ.

Most Popular

To Top