Film News

ಸ್ಟಾರ್ ನಟಿ ರಶ್ಮಿಕಾಗೆ ದೃಷ್ಟಿ ತೆಗೆದ ಕಾಲಿವುಡ್ ಸ್ಟಾರ್ ನಟ ವಿಜಯ್, ವೈರಲ್ ಆದ ವಿಡಿಯೋ…!

ಸೌತ್ ಅಂಡ್ ನಾರ್ತ್ ನಲ್ಲಿ ಕಡಿಮೆ ಸಮಯದಲ್ಲೇ ಹೆಚ್ಚು ಬೇಡಿಕೆಯುಳ್ಳ ನಟಿಯಾಗಿ ರಶ್ಮಿಕಾ ಮಂದಣ್ಣ ಸ್ಥಾನ ಪಡೆದುಕೊಂಡಿದ್ದಾರೆ. ಕಾಲಿವುಡ್ ನಲ್ಲಿ ಆಕೆ ಸ್ಟಾರ್‍ ನಟ ದಳಪತಿ ವಿಜಯ್ ಜೊತೆಗೆ ವಾರಿಸು ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ತೆಲುಗಿನಲ್ಲಿ ವಾರಸುಡು ಎಂಬ ಟೈಟಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಸಿನೆಮಾವನ್ನು ವಂಶಿ ಪೈಡಿಪಲ್ಲಿ ನಿರ್ದೇಶನದಲ್ಲಿ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನೆಮಾ ಸಂಕ್ರಾಂತಿ ಹಬ್ಬಕ್ಕೆ ಕೊಡುಗೆಯಾಗಿ ಬಿಡುಗಡೆಯಾಗಲಿದೆ. ಇನ್ನೂ ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ನಡೆಯುತ್ತಿದೆ.

ಕಾಲಿವುಡ್ ಸ್ಟಾರ್‍ ನಟ ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದ ವಾರಿಸು ಸಿನೆಮಾ ಇದೇ ಜನವರಿ 12 ರಂದು ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಬಿಡುಗಡೆಯಾಗಲಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳು ಭರದಿಂದ ಸಾಗುತ್ತಿದೆ. ಇತ್ತೀಚಿಗಷ್ಟೆ ಈ ಸಿನೆಮಾದ ಪ್ರಮೋಷನ್ ಭಾಗವಾಗಿ ಅದ್ದೂರಿಯಾಗಿ ಚೆನೈನಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ವಿಜಯ್  ರಶ್ಮಿಕಾಗೆ ದೃಷ್ಟಿ ತೆಗೆದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ರಶ್ಮಿಕಾ ಡ್ಯಾನ್ಸ್ ಕಂಡ ವಿಜಯ್ ಸೇರಿದಂತೆ ಎಲ್ಲರೂ ಫಿದಾ ಆದರು. ಈ ವೇಳೆ ವಿಜಯ್ ರಶ್ಮಿಕಾರನ್ನು ಮನಸಾರೆ ಹೊಗಳಿದ್ದಾರೆ.

ನಟಿ ರಶ್ಮಿಕಾ ಡ್ಯಾನ್ಸ್ ನೋಡಿ ಫಿದಾ ಆದ ವಿಜಯ್ ಆಕೆಯನ್ನು ಮನಸಾರೆ ಹೊಗಳಿದ್ದಾರೆ. ಆಕೆಯ ಕುರಿತು ಮಾತನಾಡುತ್ತಾ ರಶ್ಮಿಕಾ ಒಳ್ಳೆಯ ನಟಿ, ರೀಲ್ ಅಂಡ್ ರೀಯಲ್ ಲೈಫ್ ನಲ್ಲೂ ಆಕೆ ಒಂದೇ ರೀತಿಯಲ್ಲಿರುತ್ತಾರೆ. ಸ್ಟಾರ್‍ ನಟಿಯಾದರೂ ಸಹ ಸರಳವಾಗಿಯೇ ಇರುತ್ತಾರೆ. ಈಗಲೂ ಸಹ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಾ ಎಲ್ಲರನ್ನೂ ರಂಜಿಸಿದ್ದಾರೆ. ಆಕೆಯ ಮೇಲೆ ಯಾರ ದೃಷ್ಟಿ ಬೀಳಬಾರದು ಎಂದು ದೃಷ್ಟಿ ತೆಗೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಬಿಡುಗಡೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಇನ್ನೂ ರಶ್ಮಿಕಾ ಫ್ಯಾನ್ಸ್ ಸಹ ವಿಭಿನ್ನ ರೀತಿಯ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ವಾರಸುಡು ಸಿನೆಮಾ ಮೂಹೂರ್ತ ಕಾರ್ಯಕ್ರಮದಲ್ಲಿ ರಶ್ಮಿಕಾ ಸಹ ವಿಜಯ್ ರವರಿಗೆ ದೃಷ್ಟಿ ತೆಗೆದಿದ್ದರು.

ಇನ್ನೂ ವಾರಿಸು ಸಿನೆಮಾದಲ್ಲಿನ ರಂಜಿತಮೇ ರಂಜಿತಮೇ ಹಾಡು ಸುಮಾರು ದಿನಗಳಿಂದ ಸೋಷಿಯಲ್ ಮಿಡಿಯಾವನ್ನು ಶೇಕ್ ಮಾಡಿದೆ. ಈ ಹಾಡು ಎಲ್ಲಾ ಕಡೆ ಹರಿದಾಡುತ್ತಿದೆ. ಈ ಹಾಡಿಗೆ ಸಂಬಂಧಿಸಿದ ವಿಡಿಯೋಗಳು, ರೀಲ್ಸ್ ಗಳೂ ಸಹ ಹರಿದಾಡುತ್ತಲೇ ಇದೆ. ಇನ್ನೂ ಈ ಸಿನೆಮಾ ಯಾವ ರೀತಿಯಲ್ಲಿ ಸಕ್ಸಸ್ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top