ದೆಹಲಿಯಲ್ಲಿ ಚಿರಂಜೀವಿಯವರ ಮೊಣಕಾಲಿನ ಸರ್ಜರಿ, 45 ದಿನಗಳ ವಿಶ್ರಾಂತಿ ಪಡೆಯಲಿದ್ದಾರಂತೆ ಮೆಗಾಸ್ಟಾರ್………..!

ತೆಲುಗು ರಾಷ್ಟ್ರಗಳಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಮೆಗಾಸ್ಟಾರ್‍ ಚಿರಂಜೀವಿಯವರು 67 ವರ್ಷ ವಯಸ್ಸಾದರೂ ಸಹ ಸಿನೆಮಾಗಳಲ್ಲಿ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಮೆಗಾಸ್ಟಾರ್‍ ಚಿರು…

ತೆಲುಗು ರಾಷ್ಟ್ರಗಳಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಮೆಗಾಸ್ಟಾರ್‍ ಚಿರಂಜೀವಿಯವರು 67 ವರ್ಷ ವಯಸ್ಸಾದರೂ ಸಹ ಸಿನೆಮಾಗಳಲ್ಲಿ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಮೆಗಾಸ್ಟಾರ್‍ ಚಿರು ಭೋಳಾ ಶಂಕರ್‍ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಅವರ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದು, ದೆಹಲಿಯಲ್ಲಿ ಸರ್ಜರಿ ನಡೆದಿದೆ. ಅವರು 45 ದಿನಗಳ ವಿಶ್ರಾಂತಿ ಸಹ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

ಮೆಗಾಸ್ಟಾರ್‍ ಚಿರಂಜೀವಿಯವರಿಗೆ ಸದ್ಯ 67 ವರ್ಷ ವಯಸ್ಸಾಗಿದೆ. ವಯಸ್ಸಾದರೂ ಸಹ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಾ ಯಂಗ್ ಹಿರೋಗಳನ್ನು ಸಹ ನಾಚಿಸುವಂತಹ ಮಾದರಿಯಲ್ಲಿ ನೃತ್ಯ ಸಹ ಮಾಡುತ್ತಾರೆ. ಸುಮಾರು ದಿನಗಳಿಂದ ಅವರು ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರು ಸರ್ಜರಿ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರಂತೆ. ವೈದ್ಯರ ಸಲಹೆಯ ಮೇರೆಗೆ ಚಿರಂಜೀವಿಯವರು ದೆಹಲಿಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಆರ್ಥೋಸ್ಕೋಪಿ ನೀ ವಾಷ್ ಮಾಡಿಸಿಕೊಳ್ಳಳಿದ್ದಾರಂತೆ. ನೀ ವಾಷ್ ಎಂದರೆ ಮೊಣಕಾಲಿನ ಚಿಪ್ಪಿಗೆ ಮಾಡುವಂತಹ ಸರ್ಜರಿಯಾಗಿದೆ. ಸರ್ಜರಿ ಮುಗಿಸಿಕೊಂಡು ಚಿರು ಹೈದರಾಬಾದ್ ಗೆ ವಾಪಾಸ್ಸಾಗಿದ್ದು, ರೆಸ್ಟ್ ಮೋಡ್ ಗೆ ತಲುಪಿದ್ದಾರೆ. 45 ದಿನಗಳ ಮಟ್ಟಿಗೆ ವಿಶ್ರಾಂತಿ ಪಡೆದುಕೊಳ್ಳಲಿದ್ದು, ವಿಶ್ರಾಂತಿ ಬಳಿಕ ಸಿನೆಮಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಇನ್ನೂ ಚಿರಂಜೀವಿಯವರು ಕೆಲವೊಂದು ಸಿನೆಮಾಗಳನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸರ್ಜರಿಯಿಂದ ಪೂರ್ಣವಾಗಿ ಗುಣಮುಖರಾದ ಬಳಿಕ ಸಿನೆಮಾಗಳನ್ನು ಸ್ಟಾರ್ಟ್ ಮಾಡಲಿದ್ದಾರಂತೆ. ನಿರ್ದೇಶಕ ಕಲ್ಯಾಣ್ ಕೃಷ್ಣ ಜೊತೆಗೆ ಸಿನೆಮಾ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ. ಈ ಸಿನೆಮಾ ಮಲಯಾಳಂ ಸಿನೆಮಾದ ರಿಮೇಕ್ ಆಗಿದ್ದು, ಚಿರು ಹಿರಿಯ ಪುತ್ರಿ ಸುಸ್ಮಿತಾ ರವರೇ ನಿರ್ಮಾಣ ಮಾಡಲಿದ್ದಾರಂತೆ. ಇನ್ನೂ ಮೆಗಾಸ್ಟಾರ್‍ ಚಿರಂಜೀವಿಯವರ ಭೋಳಾ ಶಂಕರ್‍ ಸಿನೆಮಾ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಸೋಲನ್ನು ಕಂಡಿದೆ. ಇತ್ತೀಚಿಗೆ ತೆರೆಕಂಡ ಚಿರಂಜೀವಿಯವರ ಸಿನೆಮಾಗಳ ಪೈಕಿ ಭೋಳಾ ಶಂಕರ್‍ ಕಳಪೆ ಒಪೆನಿಂಗ್ಸ್ ಕಂಡಿದೆ ಎಂದು ಹೇಳಬಹುದಾಗಿದೆ.