ಭಾರತದ ಬಗ್ಗೆ ಎಮೋಷನಲ್ ಕಾಮೆಂಟ್ಸ್ ಮಾಡಿ ಅನೇಕರ ಹೃದಯ ಕದ್ದ ಬ್ರಿಟೀಷ್ ಬ್ಯೂಟಿ ಅಮಿ ಜಾಕ್ಸನ್…….!

Follow Us :

ಬ್ರಿಟನ್ ಮೂಲದ ಅಮಿ ಜಾಕ್ಸನ್ ಸೌತ್ ಸಿನಿರಂಗದ ಪ್ರೇಕ್ಷಕರಿಗೆ ತುಂಬಾನೆ ಪರಿಚಯ ಎಂದು ಹೇಳಬಹುದು. ಆಕೆಯನ್ನು ಅಷ್ಟು ಬೇಗ ಮರೆಯಲು ಸಾಧ್ಯವಿಲ್ಲ ಎನ್ನಬಹುದಾಗಿದೆ. ಮೈಂಡ್ ಬ್ಲಾಕ್ ಆಗುವಂತಹ ಸೌಂದರ್ಯ, ಕ್ಯೂಟ್ ನೆಸ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಎವಡು, ರೊಬೊ 2.o, ಐ ಎಂಬ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಈಕೆ ಕೊನೆಯದಾಗಿ ರಜನಿಕಾಂತ್ ಜೊತೆಗೆ ರೋಬೊ 2.o ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಯಾವುದೇ ಸಿನೆಮಾದಲ್ಲಿ ನಟಿಸದೇ ಇದ್ದರೂ ಸಹ ಆಕೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಲೇ ಇದ್ದಾರೆ.

ವಿದೇಶಿ ಮೂಲದ ನಟಿ ಅಮಿ ಜಾಕ್ಸನ್ ಇದೀಗ ಸಿನೆಮಾಗಳಿಂದ ಕೊಂಚ ದೂರವೇ ಉಳಿದರೂ ಸಹ ಆಕೆ ತನ್ನ ವೈಯುಕ್ತಿಕ ವಿಚಾರಗಳ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಇನ್ನೂ ತನ್ನ ಕೆರಿಯರ್‍ ಯಶಸ್ವಿಯಾಗಿ ಸಾಗುತ್ತಿದ್ದ ಸಮಯದಲ್ಲೇ ಆಕೆ ದೊಡ್ಡ ಉದ್ಯಮಿ ಜಾರ್ಜ್ ಪನಿಯಾಟೌತ್ ಎಂಬಾತನೊಂದಿಗೆ ಎಫೈರ್‍ ಇಟ್ಟುಕೊಂಡಿದ್ದರು. ಸುಮಾರು ದಿನಗಳ ಕಾಲ ಡೇಟಿಂಗ್ ಮಾಡಿದರು. ಜೊತೆಗೆ ಒಂದು ಮಗುವಿಗೂ ಸಹ ಜನ್ಮ ನೀಡಿದರು. ಲಂಡನ್ ಮೂಲದ ಉದ್ಯಮಿ ಜಾರ್ಜ್ ಜೊತೆಗೆ ಕೆಲವು ದಿನಗಳ ಕಾಲ ಡೇಟಿಂಗ್ ನಡೆಸಿ ಮದುವೆಗೂ ಮುಂಚೆ ಮಗುವನ್ನು ಹೆತ್ತರು. ಈಗಲೂ ಸಹ ಅಮಿ ಜಾಕ್ಸನ್ ತನ್ನ ಮಗನೊಂದಿಗೆ ಪೊಟೋಗಳನ್ನು ಶೇರ್‍ ಮಾಡುತ್ತಲೇ ಇರುತ್ತಾರೆ. ಸದ್ಯ ಆಕೆ ಸದ್ಯ ಅಮಿ ಜಾಕ್ಸನ್ ಬ್ರೀಟಿಷ್ ನಟ ಎಡ್ ವೆಸ್ವಿಕ್ ಎಂಬಾತನೊಂದಿಗೆ ಡೇಟಿಂಗ್ ನಲ್ಲಿದ್ದಾರೆ.

ಇನ್ನೂ ಅಮಿ ಜಾಕ್ಸನ್ 1947 ಎ ಲವ್ ಸ್ಟೋರಿ (ಮದರಾಸು ಪಟ್ಟಣಂ) ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದಲ್ಲಿ ಆಕೆ ತುಂಬಾನೆ ಚೆನ್ನಾಗಿ ನಟಿಸಿ ಅನೇಕರ ಹೃದಯ ಕದ್ದರು. ಇದೀಗ ಭಾರತ ಸ್ವತಂತ್ರ ದಿನಾಚರಣೆಯ ಅಂಗವಾಗಿ ಅಮಿ ಜಾಕ್ಸನ್ ಎಮೋಷನಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹ್ಯಾಪಿ ಇಂಡಿಪೆಂಡೆನ್ಸ್ ಡೇ ಇಂಕ್ರೀಡಿಬುಲ್ ಇಂಡಿಯಾ, ನನ್ನ ಮೊದಲ ಸಿನೆಮಾ ಮದರಾಸು ಪಟ್ಟಣಂ ಸಿನೆಮಾದ ಮೂಲಕ ಈ ದೇಶದಲ್ಲಿ ತಿರುಗುವ ಅವಕಾಶ ಬಂತು. ಈ ಅವಕಾಶ ಕಲ್ಪಿಸಿದ ನಿರ್ದೇಶಕ ಎ.ಎಲ್.ವಿಜಯ್ ರವರಿಗೆ ನನ್ನ ಜೀವನ ಪರ್ಯಂತ ಋಣಿಯಾಗಿರುತ್ತೇನೆ. ಅಂದಿನಿಂದ ನನಗೆ ಎರಡನೇ ಮನೆ ಭಾರತವಾಗಿದೆ. ಭಾರತದಲ್ಲಿ ನನಗೆ ಅನೇಕ ಸ್ನೇಹಿತರು ಕುಟುಂಬಸ್ಥರಂತೆ ಬದಲಾದರು.

ನಾನು ಒರ್ವ ವ್ಯಕ್ತಿಯಾಗಿ ಬದಲಾಗಲು ಇಂಡಿಯಾದಲ್ಲಿ ಅನೇಕ ಮಧುರವಾದ ಅನುಭವಗಳಿವೆ. ನಿಕ್ಕೂ ಇಂಡಿಯಾ ದಂತಹ ಪ್ರದೇಶ ಇನ್ನೆಲ್ಲೂ ಇಲ್ಲ ಎಂದು ಎಮೋಷನಲ್ ಪೋಸ್ಟ್ ಮಾಡಿದ್ದಾರೆ. ಇನ್ನೂ ಆಕೆಯ ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿದೇಶಿ ಮೂಲದ ನಟಿ ಅಮಿ ಜಾಕ್ಸನ್ ರವರಿಗೆ ಭಾರತದ ಮೇಲಿನ ಪ್ರೀತಿಗೆ ಎಲ್ಲರೂ ಫಿದಾ ಆಗಿದ್ದು. ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.