ತನ್ನ ಮುದ್ದಿನ ಕಿರಿಯ ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ, ಶ್ರೀಜಾ ಪಡೆದುಕೊಂಡ್ರು ಕಾಸ್ಟ್ಲಿ ಗಿಫ್ಟ್…!

Follow Us :

ತೆಲುಗು ಸಿನಿರಂಗದ ದೊಡ್ಡ ಕುಟುಂಬಗಳಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಕುಟುಂಬ ಒಂದಾಗಿದೆ. ಚಿರು ಕಿರಿಯ ಮಗಳಾದ ಶ್ರೀಜಾ ಇತ್ತೀಚಿಗೆ ಸದಾ ಸುದ್ದಿಯಲ್ಲಿರುತ್ತಾರೆ. ಆಕೆ ತನ್ನ ಪತಿ ಕಲ್ಯಾಣ್ ದೇವ್ ಜೊತೆಗೆ ಬೇರೆಯಾಗುವ ಬಗ್ಗೆ ಸದಾ ಸುದ್ದಿಯಾಗುತ್ತಿರುತ್ತಾರೆ. ಇನ್ನೂ ಅವರಿಬ್ಬರೂ ಬೇರೆಯಾಗುವುದು ಖಚಿತ ಎನ್ನಲಾಗುತ್ತಿದ್ದು, ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಎಮೋಷನಲ್ ಪೋಸ್ಟ್ ಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಂದೆಯಿಂದ ಶ್ರೀಜಾ ದುಬಾರಿ ಗಿಫ್ಟ್ ಪಡೆದುಕೊಂಡ ವಿಚಾರಕ್ಕಾಗಿ ಸುದ್ದಿಯಾಗಿದ್ದಾರೆ.

ಮೆಗಾಸ್ಟಾರ್‍ ಚಿರಂಜೀವಿ ಸಿನೆಮಾಗಳಲ್ಲಿ ರಾಜಕೀಯದಲ್ಲಿ ಎಷ್ಟೆ ಬ್ಯುಸಿಯಾಗಿದ್ದರೂ ಸಹ ಕುಟುಂಬಕ್ಕೆ ತುಂಬಾನೆ ಪ್ರಾಶಸ್ತ್ಯ ಕೊಡುತ್ತಿರುತ್ತಾರೆ. ಸದಾ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿರುತ್ತಾರೆ. ಜೊತೆಗೆ ಮೊಮ್ಮಕ್ಕಳೊಂದಿಗೆ ಸಹ ಸಂತೋಷದಿಂದ ಕಳೆಯುವ ಪೊಟೋಗಳು ವಿಡಿಯೋಗಳು ಸಹ ವೈರಲ್ ಆಗುತ್ತಿರುತ್ತವೆ. ಇನ್ನೂ ಶ್ರೀಜಾ ಸಹ ಕಲ್ಯಾಣ್ ದೇವ್ ನಿಂದ ಬೇರೆಯಾದ ಹಿನ್ನೆಲೆಯಲ್ಲಿ ಆಕೆ ಸಿಂಗಲ್ ಆಗಿದ್ದಾರೆ. ಆದರೆ ಚಿರು ಕುಟುಂಬ ಶ್ರೀಜಾಗೆ ಸಂಪೂರ್ಣವಾದ ಬೆಂಬಲ ನೀಡುತ್ತಿದೆ. ಇನ್ನೂ ಶ್ರೀಜಾ ಸಹ ಕಲ್ಯಾಣ್ ದೇವ್ ಜೊತೆಗೆ ಬಹುತೇಕ ಬೇರೆಯಾಗಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಆಕೆ ಮೂರನೇ ಮದುವೆ ಸಹ ಆಗಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಇದೀಗ ಮೆಗಾಸ್ಟಾರ್‍ ಚಿರಂಜೀವಿ ಶ್ರೀಜಾ ಗಾಗಿ ತುಂಬಾ ದುಬಾರಿ ಬೆಲೆಯ ಉಡುಗೊರೆ ಕೊಟ್ಟಿದ್ದಾರೆ ಎಂಬ ಸುದ್ದಿ ಸಿನಿರಂಗದಲ್ಲಿ ಕೇಳಿಬರುತ್ತಿದೆ. ಬರೊಬ್ಬರಿ 35 ಕೋಟಿ ಬೆಲೆಬಾಳುವ ಗಿಫ್ಟ್ ಅದಾಗಿದೆ. ಆದರೆ ಇದು ಕಾರು ಅಥವಾ ಬಂಗಾರವಲ್ಲ. ಹೈದರಾಬಾದ್ ಎಂ.ಎಲ್.ಎ ಕಾಲೋನಿಯಲ್ಲಿ ಚಿರಂಜೀವಿ ಸಕಲ ಸೌಲಭ್ಯಗಳಿರುವ ವಿಲಾಸವಂತವಾದ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮನೆಯನ್ನು ಚಿರಂಜೀವಿ ತಾನು ಮಾಡುವ ಸಿನೆಮಾಗಳ ಸಂಭಾವನೆಯಿಂದ ಖರೀದಿ ಮಾಡಿದ್ದಂತೆ. ಇದೀಗ ಈ ಸುದ್ದಿ ತೆಲುಗು ಸಿನಿರಂಗದಲ್ಲಿ ಎಲ್ಲಡೆ ಕೇಳಿಬರುತ್ತಿದೆ. ಚಿರಂಜೀವಿಗೆ ತನ್ನ ಮಕ್ಕಳು ಎಂದರೇ ಎಷ್ಟು ಪ್ರೀತಿ ಎಂಬುದನ್ನು ಇದರಿಂದ ತಿಳಿಯಬಹುದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನೂ ಚಿರಂಜೀವಿ ಮಗ ರಾಮ್ ಚರಣ್ ಸಹ ತಮ್ಮ ಅಕ್ಕ ತಂಗಿಯರ ಮೇಲೆ ತುಂಬಾನೆ ಪ್ರೀತಿ ತೋರಿಸುತ್ತಿರುತ್ತಾರೆ. ವೈಯುಕ್ತಿಕ ಕಾರಣಗಳಿಂದ ಶ್ರೀಜಾ ಡಿಪ್ರೆಷನ್ ನಲ್ಲಿದ್ದಾಗ ಆಕೆಯನ್ನು ವೆಕೇಷನ್ ಗೆ ಕರೆದುಕೊಂಡು ಹೋಗಿದ್ದರು ರಾಮ್ ಚರಣ್. ಇನ್ನೂ ಚಿರು ದೊಡ್ಡ ಪುತ್ರಿ ಸುಷ್ಮಿತಾ ಚಿರಂಜೀವಿ ಸಿನೆಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್‍ ಆಗಿದ್ದಾರೆ. ಚಿರಂಜೀವಿ ಹಬ್ಬ ಹರಿದಿನಗಳು ಸೇರಿದಂತೆ ವಿಶೇಷ ದಿನಗಳಂದು ಎಲ್ಲ ಕುಟುಂಬಸ್ಥರೊಂದಿಗೆ ಸಂಭ್ರಮದಿಂದ ಆಚರಿಸುತ್ತಿರುತ್ತಾರೆ.