Film News

ಆ ಯುವತಿಯ ಕಾರಣದಿಂದ ವರುಣ್ ಹಾಗೂ ಲಾವಣ್ಯ ಜೋಡಿಯ ವಿಚ್ಚೇದನವಾಗಲಿದೆ ಎಂದ ಸ್ವಾಮಿ, ವೈರಲ್ ಆದ ಹೇಳಿಕೆಗಳು….!

ಟಾಲಿವುಡ್ ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಸುಮಾರು ವರ್ಷಗಳಿಂದ ಪ್ರೀತಿಸಿ ಪೋಷಕರ ಒಪ್ಪಿಗೆಯ ಮೇರೆಗೆ ಮದುವೆಯಾದರು. ನ.1 ರಂದು ಈ ಜೋಡಿಯ ಮದುವೆ ಇಟಲಿಯಲ್ಲಿ ಅದ್ದೂರಿಯಾಗಿ ನೆರವೇರಿದೆ. ಸುಮಾರು ದಿನಗಳಿಂದ ಯಾರಿಗೂ ತಿಳಿಯದಂತೆ ಪ್ರೇಮ ಪಯಣ ಸಾಗಿಸಿದ್ದ ಈ ಜೋಡಿ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಮದುವೆಯಾದರು. ಇದೀಗ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಈ ಜೋಡಿಯ ಕುರಿತು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದು, ಅವು ಸಖತ್ ವೈರಲ್ ಆಗುತ್ತಿವೆ.

ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಸೆಲೆಬ್ರೆಟಿ ಜ್ಯೋತಿಷಿಗಳಲ್ಲಿ ವೇಣು ಸ್ವಾಮಿ ಒಬ್ಬರಾಗಿದ್ದಾರೆ. ಸಿನೆಮಾ ಸೆಲಬ್ರೆಟಿಗಳನ್ನು ಟಾರ್ಗೆಟ್ ಮಾಡಿ ಅವರ ಜಾತಕವನ್ನು ಹೇಳುತ್ತಾ ಸುದ್ದಿಯಾಗುತ್ತಿರುತ್ತಾರೆ. ಆ ಮೂಲಕ ತಾನೂ ಸಹ ಸೆಲಬ್ರೆಟಿಯಾಗಿದ್ದಾರೆ. ಟಾಲಿವುಡ್ ಸೆಲಬ್ರೆಟಿ ಜೋಡಿಯೊಂದು ವಿಚ್ಚೇದನ ಪಡೆದುಕೊಳ್ಳುತ್ತದೆ ಎಂದಿದ್ದರು. ರೆಬೆಲ್ ಸ್ಟಾರ್‍ ಪ್ರಭಾಸ್ ರವರ ಜಾತಕ ಸಹ ಹೇಳುವ ಮೂಲಕ ಮತಷ್ಟು ಸುದ್ದಿಯಾದರು. ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಮೆಗಾ ಕುಟುಂಬದ ಲಾವಣ್ಯ ಹಾಗೂ ವರುಣ್ ತೇಜ್ ಜೋಡಿಯ ಬಗ್ಗೆ ಶಾಕಿಂಗ್ ವಿಚಾರವೊಂದನ್ನು ಹೊರಹಾಕಿದ್ದಾರೆ. ಹೊಸದಾಗಿ ಮದುವೆಯಾದ ಈ ಜೋಡಿ ತುಂಬಾ ದಿನಗಳು ಇರಲ್ಲ. ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ. ಈ ಹೇಳಿಕೆಗಳು ಇದೀಗ ಟಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ.

ಜ್ಯೋತಿಷಿ ವೇಣು ಸ್ವಾಮಿ ಲಾವಣ್ಯ ಹಾಗೂ ವರುಣ್ ತೇಜ್ ಕುರಿತು ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ವರುಣ್ ಹಾಗೂ ಲಾವಣ್ಯ ರವರ ಜಾತಕದ ಪ್ರಕಾರ ಅವರಿಬ್ಬರು ಒಂದಾಗುವ ಅವಕಾಶವಿಲ್ಲ. ಮದುವೆ ಯೋಗವಿಲ್ಲ. ಅವರಿಬ್ಬರು ಜೊತೆಗೆ ಇರೋದೆ ದೊಡ್ಡ ಮಿರಾಕಲ್ . ನಾನು ಹೀಗೆ ಹೇಳುತ್ತಿದ್ದೀನಿ ಅಂತಾ ಎಲ್ಲರೂ ನನ್ನ ಮೇಲೆ ಬಿದ್ದು ಅಳುತ್ತಿದ್ದಾರೆ. ವಿಮರ್ಶೆಗಳು ಮಾಡುತ್ತಿದ್ದಾರೆ ಎಂದು ಕೋಪ ಮಾಡಿಕೊಳ್ಳುತ್ತಿರುತ್ತಾರೆ. ನಾನು ಜಾತಕದ ಪ್ರಕಾರವೇ ಹೇಳುತ್ತೇನೆ. ವೈಯುಕ್ತಿಕವಾಗಿ ನನಗೆ ಅವರ ಜೊತೆಗೆ ಯಾವುದೆ ಗಲಾಟೆ ಇಲ್ಲ. ಸಂಬಂಧ ಸಹ ಇಲ್ಲ. ವರುಣ್-ಲಾವಣ್ಯ ರವರ ಜಾತಕದಲ್ಲಿ ಗುರು ಹಾಗೂ ಶುಕ್ರ ತುಂಬಾ ಕೆಟ್ಟದಾಗಿದೆ. ಲಾವಣ್ಯಗೆ ಗುರು ದೋಷ, ವರುಣ್ ಗೆ ನಾಗದೋಷ ಇದೆ. ಇದರ ಜೊತೆಗೆ ನಾಗದೋಷ, ಕುಜದೋಷ ಲಾವಣ್ಯರನ್ನು ಕಾಡುತ್ತಿದೆ. ಈ ದೋಷಗಳ ನಡುವೆ ಅವರಿಬ್ಬರು ಜೊತೆಯಾಗಿರೋದು ಮಿರಾಕಲ್ ಎನ್ನಬಹುದಾಗಿದೆ.

ಇನ್ನೂ ಅವರ ವಿಚ್ಚೇದನಕ್ಕೆ ಕಾರಣವೊಂದನ್ನು ಸಹ ಹೇಳಿದ್ದಾರೆ. ಅವರಿಬ್ಬರಿಗೆ ಸಂಬಂಧಿಸಿದ ಕುಟುಂಬದಲ್ಲಿನ ಮಹಿಳೆಯ ಕಾರಣದಿಂದ ಅವರಿಬ್ಬರು ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂದು ಶಾಕ್ ಕೊಟ್ಟಿದ್ದಾರೆ. ನಾನು ಹೇಳೋದು ನಿಜ ಆಗುತ್ತದೆ. ಆದರೆ ಕೊಂಚ ಲೇಟ್ ಆಗಬಹುದು ಅಷ್ಟೆ ಎಂದು ಹೇಳಿದ್ದಾರೆ. ಈ ವಿಚಾರವನ್ನು ಅವರು ಕ್ಯೂಬ್ ಟಿವಿ ಎಂಬ ಯೂಟ್ಯೂಬ್ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ವೇಣುಸ್ವಾಮಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಅಂದಹಾಗೆ ಈ ಸಂದರ್ಶನ ನಡೆದು ಸುಮಾರು ಮೂರು ತಿಂಗಳಾಗಿದೆ ಎಂದು ತಿಳಿದುಬಂದಿದೆ.

Most Popular

To Top