Film News

ಪ್ರೇಮಿಗಳ ದಿನದಂದು ಸ್ಪೇಷಲ್ ಸೆಲ್ಫಿ ಹಂಚಿಕೊಂಡ ಮೆಗಾಸ್ಟಾರ್ ದಂಪತಿ, ಪತ್ನಿಯೊಂದಿಗೆ ತೆಗೆದುಕೊಂಡ ಕ್ಯೂಟ್ ಸೆಲ್ಫಿ ವೈರಲ್…..!

ಸ್ವಂತ ಪ್ರತಿಭೆ ಹಾಗೂ ಕಠಿಣ ಪರಿಶ್ರಮದಿಂದ ತೆಲುಗು ಸಿನಿರಂಗದಲ್ಲಿ ಮೆಗಾಸ್ಟಾರ್‍ ಆಗಿರುವ ಚಿರಂಜೀವಿ ಇಂದಿಗೂ ಸಹ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆತ ಕುಟುಂಬಕ್ಕೂ ತುಂಬಾನೆ ಸಮಯ ಮೀಸಲಿಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಸಂಕ್ರಾಂತಿ ಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಅದ್ದೂರಿಯಾಗಿ ಆಚರಿಸಿದ್ದರು. ಸದ್ಯ ಚಿರಂಜೀವಿ ಹಾಗೂ ಅವರ ಪತ್ನಿಯ ಸೆಲ್ಫಿ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಪ್ರೇಮಿಗಳ ದಿನದಂದು ಸ್ಪೇಷಲ್ ಸೆಲ್ಫಿ ಹಂಚಿಕೊಂಡು ಸ್ಪೇಷಲ್ ನ್ಯೂಸ್ ಸಹ ನೀಡಿದ್ದಾರೆ.

ಟಾಲಿವುಡ್ ನ ಮೆಗಾಸ್ಟಾರ್‍ ಚಿರಂಜೀವಿ ಸಿನೆಮಾಗಳ ಜೊತೆಗೆ ಕುಟುಂಬದೊಂದಿಗೆ ಸಹ ಸಮಯ ಕಳೆಯುತ್ತಿರುತ್ತಾರೆ. ಆತ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ಕುಟುಂಬಕ್ಕೆ ಸಮಯ ಕೊಡುತ್ತಾರೆ. ಮೆಗಾ ಕುಟುಂಬದಲ್ಲಿ ನಡೆಯುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಮುಂದೆ ನಿಂತು ಮಾಡುತ್ತಿರುತ್ತಾರೆ. ಜೊತೆಗೆ ಈ ಸುದ್ದಿಯನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಪ್ರೇಮಿಗಳ ದಿನದಂದು ಮೆಗಾಸ್ಟಾರ್‍ ಸ್ಪೇಷಲ್ ಸೆಲ್ಫಿ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಚಿರು ನನ್ನ ಬೆಟರ್‍ ಹಾಫ್ ಸುರೇಖ ಜೊತೆಗೆ ಸಣ್ಣ ಟ್ರಿಪ್ ಗಾಗಿ ಯು.ಎಸ್.ಎ ಗೆ ಹೋಗುತ್ತಿದ್ದೇನೆ. ನಾನು ವಾಪಸ್ಸು ಬಂದ ಕೂಡಲೇ ವಿಶ್ವಂಭರ ಸಿನೆಮಾ ಶೂಟಿಂಗ್ ಮತ್ತೆ ಆರಂಭಿಸುತ್ತೇನೆ. ಎಲ್ಲರನ್ನೂ ಶೀಘ್ರವೇ ಭೇಟಿಯಾಗುತ್ತೇನೆ. ಎಲ್ಲರಿಗೂ ವಾಲೆಂಟೈನ್ ಡೇ ಶುಭಾಷಯಗಳು ಎಂದು ವಿಮಾನದಲ್ಲಿ ಪ್ರಯಾಣಿಸುತ್ತಿರುವ ಕ್ಯೂಟ್ ಸೆಲ್ಫಿಯೊಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಮೆಗಾಸ್ಟಾರ್‍ ಚಿರಂಜೀವಿ ಯವರು ಕೊನೆಯದಾಗಿ ಭೋಳಾ ಶಂಕರ್‍ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ ಸಹ ಒಳ್ಳೆಯ ಪ್ರದರ್ಶನ ಪಡೆದುಕೊಂಡಿತ್ತು. ಸದ್ಯ ವಶಿಷ್ಟ ನಿರ್ದೇಶನದಲ್ಲಿ ವಿಶ್ವಂಭರ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಫ್ಯಾಂಟಸಿ ಕಥೆಯಾದರಿತ ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ. ಸುಮಾರು ವರ್ಷಗಳ ಬಳಿಕ ಚಿರಂಜೀವಿ ಈ ರೀತಿಯ ಕಥೆಯ ಸಿನೆಮಾದಲ್ಲಿ ನಟಿಸುತ್ತಿದ್ದು, ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿದೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಟೀಸರ್‍ ಸಹ ರಿಲೀಸ್ ಆಗಿದ್ದು, ತುಂಬಾನೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಈ ಸಿನೆಮಾದಲ್ಲಿ ಸ್ಟಾರ್‍ ನಟಿ ತ್ರಿಷಾ ನಾಯಕಿಯಾಗಿ ನಟಿಸಲಿದ್ದಾರೆ. ಯುವಿ ಕ್ರಿಯೇಷನ್ಸ್ ಬ್ಯಾನರ್‍ ನಡಿ ಈ ಸಿನೆಮಾ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷ ಜ.10 ರಂದು ವಿಶ್ವದಾದ್ಯಂತ ತೆರೆಕಾಣಲಿದೆ ಎಂದು ಹೇಳಲಾಗಿದೆ.

Most Popular

To Top