ಐದು ದಿನಗಳ ಮಗು ಕಳ್ಳತನ, ಕೋಲಾರದ ಜಿಲ್ಲಾ ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಘಟನೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ……!

ಕೋಲಾರದಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಐದು ದಿನಗಳ ಗಂಡು ಮಗುವನ್ನು ಕಳ್ಳತನ ಮಾಡಿರುವ ಪ್ರಕರಣ ನಡೆದಿದೆ. ಪೂವರಸನ್-ನಂದಿನಿ ಎಂಬ ದಂಪತಿಯ ಐದು ದಿನದ ಗಂಡು ಮಗು ಕಳ್ಳತನವಾಗಿದೆ. ಮೂವರು ಮಹಿಳೆಯರು ಮಗುವನ್ನು ಕಳ್ಳತನ ಮಾಡಿ ಎಸ್ಕೇಪ್…

ಕೋಲಾರದಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಐದು ದಿನಗಳ ಗಂಡು ಮಗುವನ್ನು ಕಳ್ಳತನ ಮಾಡಿರುವ ಪ್ರಕರಣ ನಡೆದಿದೆ. ಪೂವರಸನ್-ನಂದಿನಿ ಎಂಬ ದಂಪತಿಯ ಐದು ದಿನದ ಗಂಡು ಮಗು ಕಳ್ಳತನವಾಗಿದೆ. ಮೂವರು ಮಹಿಳೆಯರು ಮಗುವನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದು, ಈ ದೃಶ್ಯಗಳು ಆಸ್ಪತ್ರೆಯ ಸಿ.ಸಿ.ಟಿ.ವಿ ಯಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.

ಮಾಲೂರು ಪಟ್ಟಣದ ಪಟೇಲ್ ಬೀದಿಯ ನಿವಾಸಿಗಳಾದ ಪೂವರಸನ್ ಹಾಗೂ ನಂದಿನಿ ದಂಪತಿ ಹೆರಿಗೆಗಾಗಿ ಕೋಲಾರದ ಜಿಲ್ಲಾ ಸರ್ಕಾರಿ ಮಕ್ಕಳ ಆಸ್ಪತ್ರೆಗೆ ಬಂದಿದ್ದು, ಹೆರಿಗೆ ಸಹ ಆಗಿದೆ. ನಂದಿನಿ ಹೆರಿಗೆಯಾದ ಬಳಿಕ ವಾರ್ಡ್‌ನಲ್ಲಿ ಬಾಣಂತಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಳು. ನಂದಿನಿ 7 ತಿಂಗಳಲ್ಲೇ ಮಗುವಿಗೆ ಜನ್ಮ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿದ್ದರು. ಈ ವೇಳೆ ಮಗುವನ್ನು ಆಡಿಸುವ ನೆಪದಲ್ಲಿ ಬಂದಂತಹ ಮಹಿಳೆಯರು ಮಗುವನ್ನು ಕಳ್ಳತನ ಮಾಡಿದ್ದಾರೆ. ಅಷ್ಟೇಅಲ್ಲದೇ ಮಗುವಿಗೆ ಹೃದಯ ಸಂಬಂಧಿ ಕಾಯಿಲೆಯಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಹ ದಂಪತಿ ಹೋಗಬೇಕಿತ್ತು. ಆದರೆ ಮೂರು ಮಹಿಳೆಯರು ಮಗುವನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ.

ಇನ್ನೂ ಕೋಲಾರದ ಮಕ್ಕಳ ಆಸ್ಪತ್ರೆಯಲ್ಲಿ  ಭದ್ರತೆಯ ಲೋಪದಿಂದ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕೋಲಾರ ನಗರದ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿನ ಸಿಸಿಟಿವಿ ವಿಡಿಯೋ ಪರಿಶೀಲನೆ ಮಾಡಿದ್ದು, ಈ ವೇಳೆ ಮೂರು ಮಹಿಳೆಯರು ಮಗುವನ್ನು ಕದ್ದು ಪರಾರಿಯಾಗುವಂತಹ ದೃಶ್ಯಗಳು ಕಂಡಿದೆ. ಮಗುವನ್ನು ಬ್ಯಾಗ್ ವೋಂದರಲ್ಲಿ ಇಟ್ಟುಕೊಂಡ ಕಳ್ಳಿಯರು ಎಸ್ಕೇಪ್ ಆಗಿದ್ದಾರೆ. ಇತ್ತ ಮಗುವನ್ನು ಕಳೆದುಕೊಂಡ ನಂದಿನಿ ಆಕ್ರಂದನ ಮುಗಿಲು ಮುಟ್ಟಿದೆ ಎನ್ನಲಾಗಿದೆ.