ತನಗಿಂತ ಐದು ವರ್ಷ ದೊಡ್ಡ ನಟಿಯೊಂದಿಗೆ ಮೆಗಾ ಕುಟುಂಬದ ವೈಷ್ಣವ್ ಡೇಟಿಂಗ್, ಈ ಬಗ್ಗೆ ವೈಷ್ಣವ್ ರಿಯಾಕ್ಷನ್ ಏನು ಗೊತ್ತಾ?

ಸಿನಿರಂಗದ ಸೆಲೆಬ್ರೆಟಿಗಳ ಬಗ್ಗೆ ಏನೆ ವಿಚಾರ ಬಂದರೂ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ನಟ-ನಟಿಯರ ಲವ್, ಡೇಟಿಂಗ್, ಬ್ರೇಕಪ್, ಮದುವೆ ಗಳಂತಹ ವೈಯುಕ್ತಿಕ ವಿಚಾರಗಳ ಕಾರಣದಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮೆಗಾ ಕುಟುಂಬದ…

ಸಿನಿರಂಗದ ಸೆಲೆಬ್ರೆಟಿಗಳ ಬಗ್ಗೆ ಏನೆ ವಿಚಾರ ಬಂದರೂ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ನಟ-ನಟಿಯರ ಲವ್, ಡೇಟಿಂಗ್, ಬ್ರೇಕಪ್, ಮದುವೆ ಗಳಂತಹ ವೈಯುಕ್ತಿಕ ವಿಚಾರಗಳ ಕಾರಣದಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮೆಗಾ ಕುಟುಂಬದ ವೈಷ್ಣವ್ ತೇಜ್ ತನಗಿಂತ ಐದು ವರ್ಷ ಹಿರಿಯ ನಟಿಯೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ವೈಷ್ಣವ್ ಸಹ ಕ್ಲಾರಿಟಿ ಕೊಟ್ಟಿದ್ದಾರೆ. ವೈಷ್ಣವ್ ನೀಡಿದ ಕ್ಲಾರಿಟಿ ಏನು ಎಂಬ ವಿಚಾರಕ್ಕೆ ಬಂದರೇ,

ಕೆಲವು ದಿನಗಳ ಹಿಂದೆಯಷ್ಟೆ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಮೆಗಾ ಕುಟುಂಬ, ಅಲ್ಲು ಕುಟುಂಬದ ಜತೆಗೆ ಲಾವಣ್ಯ ಕುಟುಂಬ ಸೇರಿದಂತೆ ಅನೇಕರು ಈ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ಮದುವೆಗೂ ಮುಂಚೆಯಿಂದಲೂ ವೈಷ್ಣವ್ ತೇಜ್ ಕುರಿತು ಒಂದು ರೂಮರ್‍ ಜೋರಾಗಿ ಹರಿದಾಡಿತ್ತು. ವೈಷ್ಣವ್ ತೇಜ್ ತನಗಿಂದ ಐದು ವರ್ಷ ಸೀನಿಯರ್‍ ನಟಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ರೂಮರ್‍ ಬಿರುಗಾಳಿಯಂತೆ ಹರಿದಾಡಿತ್ತು. ವರುಣ್ ತೇಜ್ ಮದುವೆಯಲ್ಲಿ ಸೌತ್ ನಟಿ ರಿತೂ ವರ್ಮಾ ಸಹ ಭಾಗಿಯಾಗಿದ್ದರು. ಇಟಲಿಯಲ್ಲಿ ನಡೆದ ವರುಣ್ ಲಾವಣ್ಯ ಮದುವೆಗೆ ಕೆಲವೇ ಮಂದಿಗೆ ಆಹ್ವಾನ ಇತ್ತು. ಅವರಲ್ಲಿ ರಿತೂ ಸಹ ಒಬ್ಬರಾಗಿದ್ದರು. ರಿತೂ ವರ್ಮಾ ಸಹ ಮದುವೆಯಲ್ಲಿ ಜೋರಾಗಿಯೆ ಸದ್ದು ಮಾಡಿದ್ದರು. ಅದರಲ್ಲೂ ವೈಷ್ಣವ್ ತೇಜ್ ಜೊತೆಗೆ ತೆಗೆಸಿಕೊಂಡ ಸೆಲ್ಫಿ ಮಾತ್ರ ಇಂಟರ್‍ ನೆಟ್ ನಲ್ಲಿ ಬಿರುಗಾಳಿಯನ್ನೆ ಸೃಷ್ಟಿಸಿತ್ತು. ಶೀಘ್ರದಲ್ಲೇ ರೀತೂ ವರ್ಮಾ ಮೆಗಾ ಕುಟುಂಬದ ಸೊಸೆಯಾಗಲಿದ್ದಾರೆ ಎಂಬ ಕಾಮೆಂಟ್ ಗಳು ಹರಿದಾಡಿದವು.

ರಿತೂ ವರ್ಮಾ ಜೊತೆಗೆ ಯಾವುದೇ ಸಂಬಂಧ ಇಲ್ಲದೇ ವರುಣ್ ತೇಜ್ ಮದುವೆಗೆ ಹೇಗೆ ಹೋದರು ಎಂಬೆಲ್ಲಾ ರೂಮರ್‍ ಗಳೂ ಜೋರಾಗಿಯೇ ಕೇಳಿಬಂದವು. ಇನ್ನೂ ಈ ಕಾಮೆಂಟ್ ಗಳು ವೈರಲ್ ಆಗುತ್ತಿದ್ದಂತೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ವೈಷ್ಣವ್ ತೇಜ್ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಮೆಗಾ ಕುಟುಂಬಕ್ಕೂ ರಿತೂ ವರ್ಮಾಗೂ ಯಾವುದೇ ಸಂಬಂಧವಿಲ್ಲ. ಆಕೆಯೊಂದಿಗೆ ಡೇಟಿಂಗ್ ಸಂಪೂರ್ಣವಾಗಿ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ರಿತೂ ವರ್ಮಾ ಲಾವಣ್ಯ ತ್ರಿಪಾಠಿಗೆ ಕ್ಲೋಜ್ ಫ್ರೆಂಡ್ ಆದ್ದರಿಂದ ಆಕೆ ಮದುವೆ ಬಂದಿದೆ ಎಂದು ಹೇಳಿದ್ದಾರೆ. ಈ ಕಾಮೆಂಟ್ ನಿಂದಾಗಿ ರಿತೂ ವರ್ಮಾ ಹಾಗೂ ವೈಷ್ಣವ್ ತೇಜ್ ಡೇಟಿಂಗ್ ರೂಮರ್‍ ಗೆ ಪುಲ್ ಸ್ಟಾಪ್ ಬಿದ್ದಿದೆ ಎನ್ನಲಾಗಿದೆ.

ಸದ್ಯ ವೈಷ್ಣವ್ ತೇಜ್ ಆದಿಕೇಶವ ಎಂಬ ಸಿನೆಮಾದಲ್ಲಿ ನಟಿಸಿದ್ದು ಈ ಸಿನೆಮಾ ನ.24 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ವೈಷ್ಣವ್ ಜೊತೆಗೆ ನಟಿ ಶ್ರೀಲೀಲಾ  ನಟಿಸಿದ್ದಾರೆ. ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಮೂಡಿದೆ ಎನ್ನಲಾಗಿದೆ.