ತ್ರಿಷಾ ಬಗ್ಗೆ ಅಸಭ್ಯಕರ ಕಾಮೆಂಟ್ಸ್ ಗೆ ಫೈರ್ ಆದ ತ್ರಿಷಾ, ಮನ್ಸೂರ್ ನಂತವರು ಮನುಕುಲಕ್ಕೆ ಕೆಟ್ಟ ಕಳಂಕ ಎಂದ ನಟಿ…..!

Follow Us :

ಸೌತ್ ಸ್ಟಾರ್‍ ನಟಿ ತ್ರಿಷಾ ವಯಸ್ಸಾದರೂ ಸಹ ಯಂಗ್ ನಟಿಯರಿಗೂ ಪೈಪೋಟಿ ಕೊಡುತ್ತಾ ಸಿನಿರಂಗದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಮತಷ್ಟು ಕ್ರೇಜ್ ಪಡೆದುಕೊಳ್ಳುತ್ತಿರುವ ತ್ರಿಷಾ ಬಗ್ಗೆ ಖಳನಟ ಮನ್ಸೂರ್‍ ಆಲಿಖಾನ್ ಕೆಟ್ಟದಾಗಿ ಮಾತನಾಡಿದ್ದು, ಈ ಬಗ್ಗೆ ತ್ರಿಷಾ ಫೈರ್‍ ಆಗಿದ್ದಾರೆ. ಮನ್ಸೂರ್‍ ಅಲಿಖಾನ್ ಕೀಳು ದರ್ಜೆಯ ವ್ಯಕ್ತಿತ್ವ ಹೊಂದಿದವರು ಎಂದು ಆತನ ವಿರುದ್ದ ಕಿಡಿ ಕಾರಿದ್ದಾರೆ.

ಕಳೆದೆರಡು ದಿನಗಳ ಹಿಂದೆಯಷ್ಟೆ ಮನ್ಸೂರ್‍ ಆಲಿಖಾನ್ ತ್ರಿಷಾ ರವರ ಬಗ್ಗೆ ಕೀಳಾಗಿ ಮಾತನಾಡಿದ್ದರು. ನಾನು ಲಿಯೋ ಸಿನೆಮಾದಲ್ಲಿ ನಟಿಸುತ್ತಿದ್ದೇನೆ ಎಂದು ನನಗೆ ತಿಳಿದಾಗ ತ್ರಿಷಾ ಜೊತೆ ಅತ್ಯಚಾರದಂತಹ ದೃಶ್ಯಗಳು ಇರಬಹುದೆಂಬ ನಿರೀಕ್ಷೆಯಲ್ಲಿದ್ದೆ. ತ್ರಿಷಾಳನ್ನು ನನ್ನ ತೋಳುಗಳಲ್ಲಿ ಎತ್ತಿಕೊಂಡು ಬರುವ ದೃಶ್ಯವೂ ಸಹ ಬರಬಹುದೆಂದು ಊಹೆ ಮಾಡಿದ್ದೆ. ಆಕೆಯ ಜೊತೆಗೆ ಬೆಡ್ ರೂಂ ದೃಶ್ಯಗಳಲ್ಲಿ ನಟಿಸುಬಹುದೆಂದು ಅಂದುಕೊಂಡಿದ್ದೆ. ಆದರೆ ನಿರ್ದೇಶಕ ಲೋಕೇರ್ಶ ಕನಕರಾಜ್  ಕನಿಷ್ಟ ಪಕ್ಷ ತ್ರಿಷಾ ರವರನ್ನೂ ಸಹ ತೋರಿಸಲಿಲ್ಲ. ಈಗಾಗಲೇ ನಾನು ಅನೇಕ ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಆದರೆ ತ್ರಿಷಾ ಜೊತೆಗೆ ಇದು ನನಗೆ ಹೊಸದು ಎಂದು ಭಾವಿಸಿದ್ದೇ ಎಂದು ಮನ್ಸೂರ್‍ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈ ಹೇಳಿಕೆಗಳು ಎಲ್ಲಾ ಕಡೆ ಭಾರಿ ವೈರಲ್ ಆಗಿತ್ತು. ಅನೇಕರು ಆತನ ಹೇಳಿಕೆಗಳ ವಿರುದ್ದ ಕಿಡಿಕಾರಿದ್ದರು.

ಇದೀಗ ನಟಿ ತ್ರಿಷಾ ಸಹ ಮನ್ಸೂರ್‍ ಹೇಳಿಕೆಗಳ ಬಗ್ಗೆ ಕಿಡಿಕಾರಿದ್ದಾರೆ. ಇನ್ನೂ ಮನ್ಸೂರ್‍ ಇರುವಂತಹ ಸಿನೆಮಾಗಳಲ್ಲಿ ನಟಿಸುವುದೇ ಇಲ್ಲ. ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಆಕ್ರೋಷವನ್ನು ಹೊರಹಾಕಿದ್ದಾರೆ. ಮನ್ಸೂರ್‍ ಆಲಿಖಾನ್ ನನ್ನ ಬಗ್ಗೆ ಅಸಹ್ಯವಾಗಿ ಹಾಗೂ ಕೆಟ್ಟದಾಗಿ ಮಾತನಾಡಿರುವಂತಹ ವಿಡಿಯೋ ನೋಡಿದ್ದು, ತುಂಬಾ ಬೇಸರವಾಗಿದೆ. ಅವರು ಆಡಿದ ಮಾತುಗಳನ್ನು ನಾನು ಖಂಡಿಸುತ್ತೇನೆ. ಇದೊಂದು ಕೆಟ್ಟತನದ ಪರಮಾವಧಿಯಾಗಿದೆ, ಸ್ತ್ರೀದ್ವೇಷ, ಅಗೌರವಕರವಾದ ಹೇಳಿಕೆಗಳಾಗಿವೆ. ಇನ್ನು ಮುಂದೆ ಆ ನೀಚ ವ್ಯಕ್ತಿಯೊಂದಿಗೆ ನಾನು ನಟಿಸುವುದಿಲ್ಲ. ಅಂತಹ ವ್ಯಕ್ತಿಗಳು ಇಡೀ ಮನುಕುಲಕ್ಕೆ ಕಳಂಕ ಎಂದು ಆಕ್ರೋಷ ಹೊರಹಾಕಿದ್ದಾರೆ. ಇನ್ನೂ ತ್ರಿಷಾ ಕಾಮೆಂಟ್ಸ್ ಗಳಿಗೆ ಸೋಷಿಯಲ್ ಮಿಡಿಯಾದಲ್ಲಿ ಎಲ್ಲಾ ಕಡೆಯಿಂದ ಒಳ್ಳೆಯ ಬೆಂಬಲ ಸಹ ದೊರೆಯುತ್ತಿದೆ.

ಇನ್ನೂ ಮನ್ಸೂರ್‍ ವಿವಾದಾತ್ಮಕ ಹೇಳಿಕೆಗಳು ವೈರಲ್ ಆಗುತ್ತಿದ್ದಂತೆ, ಈ ಬಗ್ಗೆ ರಿಯಾಕ್ಟ್ ಆದ ಮನ್ಸೂರ್‍ ನಾನು ಆ ರೀತಿಯಲ್ಲಿ ಮಾತನಾಡಿಯೇ ಇಲ್ಲ. ನಾನು ನನ್ನ ಮಹಿಳಾ ಕಲಾವಿದರನ್ನು ಗೌರವದಿಂದ ಕಾಣುತ್ತೇನೆ. ತ್ರಿಷಾ ರವರು ನೋಡಿದಂತಹ ವಿಡಿಯೋ ಎಡಿಟ್ ಮಾಡಿದ ವಿಡಿಯೋ ಆಗಿದೆ. ನಾನು ಆ ರೀತಿಯಲ್ಲಿ ಮಾತನಾಡೊಲ್ಲ. ನನ್ನ ಮಗಳೂ ಸಹ ತ್ರಿಷಾ ರವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.