News

ಗೃಹಲಕ್ಷ್ಮೀ ಯೋಜನೆಯ ನೊಂದಣಿಗೆ ಹಣ ಪಡೆದರೇ ಹುಷಾರ್, ಕ್ರಿಮಿನಲ್ ಕೇಸ್ ಹಾಕುತ್ತೇವೆ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ ಕರ್….!

ಕರ್ನಾಟಕ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದೊಂದೇ ಗ್ಯಾರಂಟಿಯನ್ನು ಈಡೇರಿಸುತ್ತಾ ಬರುತ್ತಿದ್ದು, ಇದೀಗ ಗೃಹ ಲಕ್ಷ್ಮೀ ಯೋಜನೆ ಸಹ ಆರಂಭವಾಗಿದೆ. ಇನ್ನೂ ಈ ಯೋಜನೆಯ ನೊಂದಣಿಗಾಗಿ ಹಲವು ಕಡೆ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಲೇ ಇದ್ದು, ಆ ರೀತಿ ಈ ಯೋಜನೆಯ ನೊಂದಣಿಗೆ ಹೆಚ್ಚು ಹಣ ಪಡೆದುಕೊಂಡರೇ ಅಂತಹವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ ಕರ್‍ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ ಕರ್‍, ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಗೃಹ ಲಕ್ಷ್ಮೀ ಸಹ ಒಂದಾಗಿದೆ. ಈ ಯೋಜನೆಯಿಂದ ಅನೇಕ ಕುಟುಂಬಗಳಿಗೆ ನೆರವಾಗಲಿದೆ. ಈ ಯೋಜನೆಯನ್ನು ಮಹಿಳೆಯರಿಗೆ ಉಚಿತವಾಗಿ ನೀಡಲು ಸರ್ಕಾರ ಸಹ ನಿರ್ಧಾರ ತೆಗೆದುಕೊಂಡಿದೆ. ಅದಕ್ಕಾಗಿ ಸರ್ಕಾರ ಸಹ ತುಂಬಾನೆ ಕಷ್ಟಪಟ್ಟಿದೆ. ಈ ಯೋಜನೆಯ ನೊಂದಣಿಗೆ ಯಾರಾದರೂ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದರೇ ಅಂತಹವರ ಲಾಗಿನ್ ಐಡಿಯನ್ನು ವಾಪಸ್ಸು ಪಡೆಯಲಾಗುತ್ತಿದೆ. ಈ ಯೋಜನೆಗೆ ಹಣ ಪಡೆಯುವ ಬಗ್ಗೆ ಖಚಿತ ಮಾಹಿತಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಬೇಕು. ಜೊತೆಗೆ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು. ಅವರೂ ಸಹ ನಿರ್ಲಕ್ಷ್ಯ ತೋರಿದರೇ ಅವರ ಮೇಲೂ ಸಹ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಇನ್ನೂ ನಾವು ಉಚಿತವಾಗಿ ಆ ಕೆಲಸ ಮಾಡಿಸಿಕೊಳ್ಳುತ್ತಿಲ್ಲ. ಅರ್ಜಿ ಹಾಕುವವರಿಗೆ ಸರ್ಕಾರದಿಂದಲೇ ಪ್ರತಿ ಅರ್ಜಿಗೆ 12 ರೂಪಾಯಿ ನೀಡಲಾಗುತ್ತಿದೆ. 10 ರೂಪಾಯಿ ಅಪ್ಲೋಡ್ ಮಾಡಲು ಹಾಗೂ 2 ರೂಪಾಯಿ ಪ್ರಿಂಟ್ ಗೆ. ಆದ್ದರಿಂದ ಜನರು ಅವರಿಗೆ ಹಣ ನೀಡುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನೂ ರಾಜ್ಯದಾದ್ಯಂತ ಗೃಹಲಕ್ಷ್ಮೀ ಯೋಜನೆಯ ನೊಂದಣಿ ಕಾರ್ಯ ಆರಂಭವಾಗಿದ್ದು, ಅನೇಕ ಕಡೆ ಸರ್ವರ್‍ ಸಮಸ್ಯೆ ತುಂಬಾನೆ ಕಾಟ ಕೊಡುತ್ತಿದೆ. ಮಹಿಳೆಯರು ನೊಂದಣಿ ಕೇಂದ್ರ ಗಳ ಮುಂದೆ ಕ್ಯೂ ಕಟ್ಟಿ ನಿಲ್ಲುತ್ತಿದ್ದಾರೆ. ಇನ್ನೂ ಈ ಯೋಜನೆಗೆ ಹಣ ಪಡೆದ ಜಮಖಂಡಿ ತಾಲೂಕಿನ ಶೂರ್ಪಾಲಿ ಎಂಬ ಗ್ರಾಮದ ಗ್ರಾಮ ಒನ್ ಕೇಂದ್ರದ ಲಾಂಗಿನ್ ಸಹ ರದ್ದು ಮಾಡಿದ್ದಾರೆ. ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ ಕರ್‍ ರವರೇ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿದ್ದರು.

Most Popular

To Top