ಬ್ಲೌಜ್ ಲೆಸ್ ಆಗಿ ಕಾಣಿಸಿಕೊಂಡ ನಿಹಾರಿಕಾ, ಟ್ರೈಬಲ್ ಲುಕ್ಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ನಿಹಾರಿಕಾ, ವೈರಲ್ ಆದ ಪೊಟೋಸ್…..!

Follow Us :

ಟಾಲಿವುಡ್ ನಟಿ ಮೆಗಾ ಕುಟುಂಬದ ನಿಹಾರಿಕಾ ಕೊಣಿದೆಲಾ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟು ನಟಿಯಾಗಿ ಕೆಲವೊಂದು ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣದೆ ವಿಫಲರಾದರು. ಬಳಿಕ ವೆಬ್ ಸಿರೀಸ್ ಹಾಗೂ ನಿರ್ಮಾಣದತ್ತ ಮುಖ ಮಾಡಿದರು. ವಿಚ್ಚೇದನದ ಬಳಿಕ ನಿಹಾರಿಕಾ ಬ್ಯಾಕ್ ಟು ಬ್ಯಾಕ್ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಬ್ಲೌಜ್ ಇಲ್ಲದೇ ಸೀರೆಯನ್ನು ಧರಿಸಿ ಹಾಟ್ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಹಾಗೂ ಚೈತನ್ಯ ಜೊನ್ನಲಗಡ್ಡ ಜೊತೆಗೆ ವಿಚ್ಚೇದನ ಪಡೆದುಕೊಂಡು ಸದ್ಯ ಸಿಂಗಲ್ ಆಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಕೂಕಟ್ ಪಲ್ಲಿ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಚೇದನಕ್ಕೆ ಪಿರ್ಯಾದು ಮಾಡಿ ವಿಚ್ಚೇದನ ಸಹ ಪಡೆದುಕೊಂಡಿದ್ದಾರೆ. ಇಬ್ಬರೂ ಒಪ್ಪಿಗೆಯ ಮೇರೆಗೆ ವಿಚ್ಚೇದನ ಪಡೆದುಕೊಂಡಿದ್ದಾಗಿ ನಿಹಾರಿಕಾ ಸಹ ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿದ್ದರು. ಈ ಸಮಯದಲ್ಲಿ ನನಗೆ ಕೊಂಚ ಪ್ರೈವೆಸಿ ಬೇಕು, ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಪೋಸ್ಟ್ ಮಾಡಿದ್ದರು. ಇನ್ನೂ ವಿಚ್ಚೇದನದ ಸುದ್ದಿ ಶುರುವಾದಾಗಿನಿಂದ ನಿಹಾರಿಕಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳ ಮೂಲಕ ಸದ್ದು ಮಾಡುತ್ತಿದ್ದಾರೆ.

ನಿಹಾರಿಕಾ ವಿಚ್ಚೇದನ ಪಡೆದುಕೊಂಡ ಬಳಿಕ ನಿಹಾರಿಕಾ ಸಿನೆಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಮತಷ್ಟು ಸದ್ದು ಮಾಡುತ್ತಿದ್ದಾರೆ. ಮದುವೆಗಿಂತ ಮುಂಚೆ ಅಷ್ಟೊಂದು ಸ್ಕಿನ್ ಶೋ ಮಾಡದ ನಿಹಾರಿಕಾ ಇದೀಗ ಗ್ಲಾಮರ್‍ ಡೋಸ್ ಏರಿಸಿದ್ದಾರೆ ಎನ್ನಲಾಗಿದೆ. ಇದೀಗ ಆಕೆ ಬ್ಲೂ ಕಲರ್‍ ಸೀರೆಯನ್ನು ಧರಿಸಿ ಸಂಪ್ರದಾಯ ಬದ್ದವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಬ್ಲೌಜ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಮೆಗಾ ಕುಟುಂಬದಲ್ಲಿ ಮದುವೆ ಸಂಭ್ರಮ ನೆರವೇರಲಿದೆ. ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಮದುವೆ ನವೆಂಬರ್‍ 1 ರಂದು ನಡೆಯಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಈ ಜೋಡಿಯ ಮದುವೆ ಇಟಲಿಯಲ್ಲಿ ನಡೆಯಲಿದೆ ಎನ್ನಲಾಗುತ್ತಿದ್ದು, ಮೆಗಾ ಫ್ಯಾಮಿಲಿ ಶೀಘ್ರದಲ್ಲೇ ಇಟಲಿಗೆ ತೆರಳಿದೆ ಎನ್ನಲಾಗುತ್ತಿದೆ.