News

ಸೌಜನ್ಯ 28ನೇ ಹುಟ್ಟುಹಬ್ಬದ ಆಚರಣೆಯಂದು ಸೌಜನ್ಯಾ ಪ್ರತಿಮೆ ಸ್ಥಾಪನೆ….!

ಇಡೀ ರಾಜ್ಯದಲ್ಲೇ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದಂತಹ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಪ್ರಕರಣ ಇಂದಿಗೂ ಸಹ ಸುದ್ದಿಯಲ್ಲೇ ಇದೆ. ಕಳೆದ 2012 ರಲ್ಲಿ ಧರ್ಮಸ್ಥಳದಲ್ಲಿ ಕಾಮಾಂದರ ಅಟ್ಟಹಾಸಕ್ಕೆ ಬಲಿಯಾದ ಸೌಜನ್ಯ ರವರ 28ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದು, ಈ ವೇಳೆ ಸೌಜನ್ಯ ಕುಟುಂಬದ ಸದಸ್ಯರು ಆಕೆಯ ಸಮಾಧಿ ಬಳಿ ಆಕೆಯ ಪ್ರತಿಮೆ ಪ್ರತಿಷ್ಟಾಪನೆ ಮಾಡಿದ್ದಾರೆ.

ಕರ್ನಾಟಕದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ರಾಜ್ಯ ಮಾತ್ರವಲ್ಲದೇ ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಇತ್ತೀಚಿಗಷ್ಟೆ ಈ ಪ್ರಕರಣದ ಆರೋಪಿ ಸಂತೋಷ್ ರಾವ್ ವಿರುದ್ದ ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಕಾರಣ ಆತನನ್ನು ದೋಷ ಮುಕ್ತಗೊಳಿಸಿತ್ತು ಸಿಬಿಐ ಕೋರ್ಟ್. ಈ ತೀರ್ಪಿನ ಬಳಿಕ ಈ ಪ್ರಕರಣ ಮತ್ತೆ ಬುಗಿಲೆದ್ದಿದೆ. ನ್ಯಾಯಕ್ಕಾಗಿ ಸೌಜನ್ಯ ಪೋಷಕರು ಹಾಗೂ ಕೆಲವೊಂದು ಸಂಘ ಸಂಸ್ಥೆಗಳು ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಈ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಸಿನೆಮಾ ಒಂದು ತೆರೆಗೆ ಬರಲಿದೆಯಂತೆ. ಸ್ಟೋರಿ ಆಫ್ ಸೌಜನ್ಯ ಎಂಬ ಹೆಸರನ್ನು ಕರ್ನಾಟಕ ಫಿಲಂ ಚೇಂಬರ್‍ ನಲ್ಲಿ ನೊಂದಣಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸೌಜನ್ಯ ಅತ್ಯಾಚಾರ ಪ್ರಕರಣ ನಡೆದು 11 ವರ್ಷಗಳು ಕಳೆದರೂ ಸಹ ಇನ್ನೂ ಅತ್ಯಾಚಾರವೆಸಗಿದ ಆರೋಪಿ ಯಾರು ಎಂಬುದು ಪತ್ತೆಯಾಗಿಲ್ಲ ಎಂಬುದು ದೊಡ್ಡ ನೋವಿನ ಸಂಗತಿಯಾಗಿದೆ ಎನ್ನಬಹುದಾಗಿದೆ. ಸೌಜನ್ಯಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಅವರು ಕುಟುಂಬಸ್ಥರೂ ಸಹ ಶಪಥ ಮಾಡಿದ್ದಾರೆ. ಅ.18 ಸೌಜನ್ಯ ಹುಟ್ಟುಹಬ್ಬವಾಗಿದೆ. ಆಕೆ ಬದುಕಿದ್ದರೇ 28ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆಕೆಯ ಹುಟ್ಟುಹಬ್ಬದಂದು 1.5 ಅಡಿ ಎತ್ತರದ ಕಲ್ಲಿನ ಪ್ರತಿಮೆಯನ್ನು ಆಕೆಯ ಸಮಾಧಿಯ ಬಳಿ ಪ್ರತಿಷ್ಟಾಪಿಸಿ ಪೂಜೆಯನ್ನು ಮಾಡುತ್ತಾರೆ. ಸೌಜನ್ಯ ಕುಳಿತಿರುವಂತಹ ರೂಪದಲ್ಲಿಇದ್ದು, ನವರಾತ್ರಿ ನಿಮಿತ್ತ ಭಜನೆಯನ್ನು ಸಹ ಮಾಡಲಾಗಿದೆ.

Most Popular

To Top