Film News

ಬಾಳೆಹಣ್ಣಿನ ಸಿಪ್ಪೆಯಿಂದ ಮೈ ಮುಚ್ಚಿಕೊಂಡ ಉರ್ಫಿ, ಕ್ರೇಜಿ ಕಾಮೇಂಟ್ ಗಳನ್ನು ಹರಿಬಿಟ್ಟ ನೆಟ್ಟಿಗರು…..!

ಬಾಲಿವುಡ್ ಸಿನಿರಂಗದಲ್ಲಿ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಸುದ್ದಿಯಾಗುತ್ತಿರುವ ನಟಿಯರಲ್ಲಿ ಉರ್ಫಿ ಜಾವೇದ್ ಅಗ್ರ ಸ್ಥಾನದಲ್ಲಿರುತ್ತಾರೆ. ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಗ್ಲಾಮರ್‍ ಪ್ರದರ್ಶನ ಕೊಂಚ ಓವರ್‍ ಆಗಿಯೇ ಇರುತ್ತದೆ. ಆದರೆ ಉರ್ಫಿ ಎಲ್ಲರಿಗಿಂತಲೂ ಸಹ ಓವರ್‍ ಆಗಿಯೇ ಬೋಲ್ಡ್ ಪೊಟೋಸ್ ಶೇರ್‍ ಮಾಡುತ್ತಿರುತ್ತಾರೆ. ಈ ಹಿಂದೆ ಕಿವಿ ಪ್ರೂಟ್ ನಿಂದ ಎದೆಯ ಭಾಗವನ್ನು ಮುಚ್ಚಿಕೊಂಡು ಪೋಸ್ ಕೊಟ್ಟಿದ್ದ ಉರ್ಫಿ ಇದೀಗ ಬಾಳೆಹಣ್ಣಿನ ಸಿಪ್ಪೆಯಿಂದ ದೇಹ ಮುಚ್ಚಿಕೊಂಡಿದ್ದಾರೆ. ಈ ಪೊಟೋಗಳನ್ನು ನೋಡಿದ ನೆಟ್ಟಿಗರು ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಈ ಪ್ರಪಂಚದಲ್ಲಿ ಹಾಲಿವುಡ್ ತಾರೆಯರೂ ಸಹ ಧರಿಸಿದಂತಹ ಬಟ್ಟೆಗಳನ್ನು ಧರಿಸುವ ಏಕೈಕ ನಟಿ ಎಂದರೇ ಅದನ್ನು ಉರ್ಫಿ ಜಾವೇದ್ ಎನ್ನಬಹುದು. ಸದಾ ವಿಚಿತ್ರವಾದ ಅವತಾರಗಳಲ್ಲಿ ಆಕೆ ಕಾಣಿಸಿಕೊಳ್ಳುತ್ತಾ ಸದಾ ಸುದ್ದಿಯಲ್ಲೇ ಇರುತ್ತಾರೆ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಬಟ್ಟೆಗಳನ್ನು ಧರಿಸಿ ಎಲ್ಲರ ಕಣ್ಣಿಗೆ ಬೀಳುತ್ತಾರೆ. ಅದರಲ್ಲೂ ಆಕೆ ಬೋಲ್ಡ್ ಆಗಿರುವ ಬಟ್ಟೆಗಳನ್ನು ಧರಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಗೋಣಿಚೀಲ, ಚೈನ್ ಗಳು, ಗ್ಲಾಸ್ ಗಳು ಮೊದಲಾದವುಗಳನ್ನು ಬಳಸಿಕೊಂಡು ಡ್ರೆಸ್ ತಯಾರಿಸಿ ಕಾಣಿಸಿಕೊಂಡಿದ್ದ ಉರ್ಫಿ ಇದೀಗ ಮತ್ತೊಂದು ವಿಭಿನ್ನ ಡ್ರೆಸ್ ಮೂಲಕ ಕಾಣಿಸಿಕೊಂಡಿದ್ದಾರೆ. ಇದೀಗ ಆಕೆಯ ವಿಚಿತ್ರ ಫ್ಯಾಷನ್ ಗೆ ನೆಟ್ಟಿಗರು ಶಾಕ್ ಆಗಿದ್ದಾರೆ ಎನ್ನಲಾಗುತ್ತಿದೆ.

ನಟಿ ಉರ್ಫಿ ಜಾವೇದ್ ಸೋಷಿಯಲ್ ಮಿಡಿಯಾದಲ್ಲಿ ವಿಚಿತ್ರ ಉಡುಗೆಗಳನ್ನು ತೊಟ್ಟು ತುಂಬಾನೆ ಸುದ್ದಿಯಾಗುತ್ತಿರುತ್ತಾರೆ. ಸದಾ ತಾನು ಧರಿಸುವ ಬಟ್ಟೆಯಿಂದಲೇ ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಕೆ ಬಾಳೆಹಣ್ಣಿ ಸಿಪ್ಪೆಯಿಂದ ಡ್ರೆಸ್ ತಯಾರಿಸಿಕೊಂಡು ಪೋಸ್ ಕೊಟ್ಟಿದ್ದಾರೆ. ಬಾಳೆಹಣ್ಣಿನ ಸಿಪ್ಪೆಯಿಂದ ದೇಹವನ್ನು ಮೈ ಮುಚ್ಚಿಕೊಂಡು ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಹಿಂದೆ ಬಟ್ಟೆಗಳಿಂದಾದರೂ ದೇಹ ಮುಚ್ಚಿಕೊಳ್ಳುತ್ತಿದ್ದ ಉರ್ಫಿ ಇದೀಗ ಬಾಳೆಹಣ್ಣಿನ ಸಿಪ್ಪೆಯಿಂದ ದೇಹ ಮುಚ್ಚಿಕೊಂಡಿದ್ದಾರೆ. ಆಕೆಯ ಈ ಅವತಾರ ಕಂಡು ಎಲ್ಲರೂ ಶಾಕ್ ಆಗಿದ್ದಾರೆ. ಜೊತೆಗೆ ಬಾಳೆಹಣ್ಣು ತಿನ್ನುತ್ತಾ ಬಾಳೆ ಹಣ್ಣಿ ಸಿಪ್ಪೆಯನ್ನು ಮೈಮೇಲೆ ಹಾಕಿಕೊಂಡು ಪೋಸ್ ಕೊಟ್ಟಿದ್ದು, ಪೊಟೋಗಳು ವೈರಲ್ ಆಗುತ್ತಿವೆ. ಈ ಪೊಟೋಗಳನ್ನ ಕಂಡ ಅನೇಕರು ಬಾಳೆಹಣ್ಣು ಬಿಟ್ಟು ಬೇರೆ ಯಾವ ಹಣ್ಣು ಸಿಕ್ಕಿಲ್ವಾ ಎಂದು ವಿವಿಧ ರೀತಿಯಲ್ಲಿ ಕಾಮೆಂಟ್ಸ್ ಹಾಕುತ್ತಿದ್ದಾರೆ.

ಇನ್ನೂ ಉರ್ಫಿ ಜಾವೇದ್ ಹಂಚಿಕೊಳ್ಳುವ ಪೊಟೋಗಳು ವಿಡಿಯೋಗಳು ತುಂಬಾನೆ ಟ್ರೋಲ್ ಸಹ ಆಗುತ್ತಿರುತ್ತವೆ. ಜೊತೆಗೆ ಆಕೆ ಅದೇ ರೀತಿಯಲ್ಲಿ ಕೌಂಟರ್‍ ಸಹ ಕೊಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಉರ್ಫಿ ಹಿಂದೂ ಯುವಕನೋರ್ವನ ಜೊತೆಗೆ ವಿಶೇಷ ಪೂಜೆ ಮಾಡಿದ್ದು, ವಿಡಿಯೋ ಪೊಟೋ ವೈರಲ್ ಆಗಿತ್ತು.

Most Popular

To Top