Film News

ರಣವೀರ್ ಹಾಗೂ ದೀಪಿಕಾ ನಡುವೆ ವಿಬೇಧಗಳು? ವೈರಲ್ ಆದ ವಿಡಿಯೋ…!

ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಅವರ ವೈಯುಕ್ತಿಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳು ಸದಾ ಕಾಯುತ್ತಿರುತ್ತಾರೆ. ಸಿನಿರಂಗದಲ್ಲಿ ಲವ್, ಮದುವೆ, ಬ್ರೇಕಪ್ ಗಳು ಸಾಮಾನ್ಯವಾಗಿರುತ್ತದೆ. ಇದೀಗ ಬಾಲಿವುಡ್ ಸ್ಟಾರ್‍ ಜೋಡಿಯಾದ ರಣವೀರ್‍ ಹಾಗೂ ದೀಪಿಕಾ ನಡುವೆ ವಿಬೇದಗಳು ಹುಟ್ಟಿಕೊಂಡಿದೆ. ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿವೆ. ಇಬ್ಬರೂ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಹರಿದಾಡುತ್ತಿದೆ. ಈ ರೂಮರ್‍ ಹರಿದಾಡಲು ಆ ವಿಡಿಯೋ ಕಾರಣವಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ.

ದೇಶದ ಸಿನಿರಂಗದಲ್ಲಿ ಮಾತ್ರವಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತುಂಬಾ ಕ್ರೇಜ್ ಪಡೆದುಕೊಂಡಿರುವ ದೀಪಿಕಾ ಪಡುಕೋಣೆ ಕಳೆದ 2018 ರಲ್ಲಿ ಬಾಲಿವುಡ್ ಸ್ಟಾರ್‍ ರಣವೀರ್‍ ಸಿಂಗ್ ಜೊತೆಗೆ ಸುಮಾರು ಆರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಬಾಲಿವುಡ್ ನ ರೊಮ್ಯಾಂಟಿಕ್ ಜೋಡಿಯಾಗಿದ್ದಾರೆ. ಮದುವೆಯ ಬಳಿಕ ಇಬ್ಬರೂ ವೈವಾಹಿಕ ಜೀವನದ ಜೊತೆಗೆ ಸಿನೆಮಾ ಕೆರಿಯರ್‍ ಅನ್ನೂ ಸಹ ಸಾಗಿಸುತ್ತಿದ್ದಾರೆ. ಸಿನೆಮಾ ಶೂಟಿಂಗ್ ಗಳಿಂದ ಬಿಡುವು ಸಿಕ್ಕಾಗ ಅನೇಕ ವೆಕೇಷನ್ ಗಳಿಗೆ ಹಾರುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ಸಿನೆಮಾ ಫಂಕ್ಷನ್ ಗಳೂ, ಪಾರ್ಟಿಗಳೂ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಹಾಜರಾಗುತ್ತಾ ಕ್ರೇಜಿ ಜೋಡಿಯಾಗಿದ್ದಾರೆ. ಇನ್ನೂ ಇತ್ತೀಚಿಗೆ ಸಿನೆಮಾ ಕ್ರಿಟಿಕ್ ಒಬ್ಬರು ಅವರಿಬ್ಬರೂ ಬೇರೆಯಾಗುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಬಳಿಕ ಅದಕ್ಕೆ ದೀಪಿಕಾ ಸಹ ಸ್ಟ್ರಾಂಗ್ ಕೌಂಟರ್‍ ನೀಡಿದ್ದರು.

ಇನ್ನೂ ಈ ಘಟನೆ ನಡೆದು ಕೆಲವು ದಿನಗಳಷ್ಟೆ ಕಳೆದಿದೆ. ಇದೀಗ ಮತ್ತೊಮ್ಮೆ ಅದೇ ರೀತಿಯ ರೂಮರ್‍ ಗಳು ಹರಿದಾಡುತ್ತಿವೆ. ಮತ್ತೆ ರಣವೀರ್‍ ಹಾಗೂ ದೀಪಿಕಾ ನಡುವೆ ವಿಬೇದಗಳು ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಇತ್ತಿಚಿಗೆ ಒಂದು ಸ್ಪೋರ್ಟ್ಸ್ ಈವೆಂಟ್ ಗೆ ರಣವೀರ್‍ ಸಿಂಗ್ ಹಾಗೂ ದೀಪಿಕಾ ಹಾಜರಾಗಿದ್ದರು. ಕಾರನ್ನು ಇಳಿದು ಹೋಗುತ್ತಿರುವ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಅಲ್ಲಿಯೇ ಇದ್ದ ರಣವೀರ್‍ ರನ್ನು ಹಿಡಿಸಿಕೊಳ್ಳದೇ, ಜೊತೆಯಾಗಿ ನಡೆಯಲು ಕೈ ಕೊಟ್ಟರೂ ಸಹ ದೀಪಿಕಾ ನೋಡದಂತೆ ಮುಂದೆ ಹೋಗಿದ್ದಾರೆ. ಜೊತೆಗೆ ರಣವೀರ್‍ ಕಡೆ ನೋಡಲು ಸಹ ಇಲ್ಲ. ಈ ವೇಳೆ ರಣವೀರ್‍ ಸಹ ಸೈಲೆಂಟ್ ಆಗಿಯೇ ಇದ್ದಾರೆ. ಇನ್ನೂ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಈ ಜೋಡಿ ನಡುವೆ ವಿಬೇದಗಳು ಹುಟ್ಟಿಕೊಂಡಿವೆ ಎಂಬ ರೂಮರ್‍ ಇದೀಗ ಹರಿದಾಡುತ್ತಿದೆ.

ಈ ಹಿಂದೆ ದೀಪಿಕಾ ಹಾಗೂ ರಣವೀರ್‍ ಯಾವುದೇ ಈವೆಂಟ್ ಗೆ ಹೋದರೂ ಸಹ ಕ್ಲೋಜ್ ಆಗಿ ತುಂಬಾ ಖುಷಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಅವರು ಕಾರ್ಯಕ್ರಮದಲ್ಲಿ ಸಖತ್ ಸದ್ದು ಮಾಡುತ್ತಿದ್ದರು. ಆದರೆ ಇದೀಗ ಹರಿದಾಡುತ್ತಿರುವ ವಿಡಿಯೋದಲ್ಲಿ ಅವರು ದೂರವಾಗಿರುವಂತೆ ಕಾಣಿಸಿಕೊಂಡಿದ್ದು, ಅವರಿಬ್ಬರ ನಡುವೆ ಏನಾಗಿದೆ ಎಂದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಇನ್ನೂ ಈ ಬಗ್ಗೆ ಈ ಜೋಡಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top