ಜೀವನದಲ್ಲಿ ಕೆಲವೊಂದನ್ನು ನಿಲ್ಲಿಸಿದರೇ ಅನವಶ್ಯಕವಾದ ಒತ್ತಡ ಶುರುವಾಗುತ್ತೆ ಎಂದ ನಿಹಾರಿಕಾ, ವೈರಲ್ ಆದ ಪೋಸ್ಟ್…..!

Follow Us :

ಕೆಲವು ದಿನಗಳ ಹಿಂದೆಯಷ್ಟೆ ಮೆಗಾ ಡಾಟರ್‍ ನಿಹಾರಿಕಾ ಕೊಣಿದೆಲಾ ಚೈತನ್ಯ ಜೊನ್ನಲಗಡ್ಡ ರಿಂದ ವಿಚ್ಚೇದನ ಪಡೆದುಕೊಂಡು ಎಲ್ಲರಿಗೂ ಶಾಕ್ ನೀಡಿದ್ದರು. ವಿಚ್ಚೇದನದ ಬಳಿಕ ಆಕೆ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ವಿಚ್ಚೇದನದ ಬಳಿಕ ಫ್ರೀ ಬರ್ಡ್ ಆಗಿ ವಿಹರಿಸುತ್ತಿದ್ದಾರೆ. ಇದೀಗ ತನಗೆ ಇಷ್ಟಬದಂತೆ ಜೀವನ ಸಾಗಿಸುತ್ತಿದ್ದು, ತನ್ನ ಅನುಭವವನ್ನು ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಕೊಟೇಷನ್ ಮೂಲಕ ತಿಳಿಸುತ್ತಿರುತ್ತಾರೆ. ಇದೀಗ ಆಕೆಯ ಲೇಟೆಸ್ಟ್ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ.

ಕಳೆದ ಡಿಸೆಂಬರ್‍ 2020ರ ಡಿಸೆಂಬರ್‍ 9 ರಂದು ರಾಜಸ್ಥಾನದ ಜೈಪುರದಲ್ಲಿ ಚೈತನ್ಯ ಹಾಗೂ ನಿಹಾರಿಕಾ ರವರ ಮದುವೆ ತುಂಬಾ ಅದ್ದೂರಿಯಾಗಿ ನಡೆಯಿತು. ಡೆಸ್ಟಿನೇಷನ್ ವೆಡ್ಡಿಂಗ್ ಎಂಬ ಹೆಸರಿನಲ್ಲಿ ಈ ಜೋಡಿ ಸಪ್ತಪದಿ ತುಳಿಯಿತು. ಮದುವೆಯಾದ ಬಳಿಕ ಈ ಜೋಡಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಆದರೆ ಕೆಲವು ದಿನಗಳಿಂದ ಅವರಿಬ್ಬರ ನಡುವೆ ವಿಬೇದಗಳು ಉಂಟಾಗಿದ್ದು, ಇಬ್ಬರೂ ದೂರವಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಇಬ್ಬರೂ ಅಧಿಕೃತವಾಗಿ ವಿಚ್ಚೇದನ ಸಹ ಪಡೆದುಕೊಂಡಿದ್ದಾರೆ. ಇನ್ನೂ ನಿಹಾರಿಕಾ ವಿಚ್ಚೇದನ ಪಡೆದುಕೊಳ್ಳುವುದಕ್ಕೂ ಮುಂಚೆಯೇ ಆತನಿಂದ ದೂರವಾಗಿದ್ದರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಕೊಂಚ ಓವರ್‍ ಆಗಿಯೇ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದರು. ಇದೀಗ ಆಕೆ ಅಧಿಕೃತವಾಗಿ ವಿಚ್ಚೇದನ ಪಡೆದುಕೊಂಡಿದ್ದಾರೆ.

ಇನ್ನೂ ಸದ್ಯ ನಿಹಾರಿಕಾ ವೆಕೇಷನ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ತನ್ನ ಇನ್ಸ್ಟಾಖಾತೆಯ ಮೂಲಕ ವೆಕೇಷನ್ ಪೊಟೋಗಳನ್ನೂ ಸಹ ಹಂಚಿಕೊಳ್ಳುತ್ತಿದ್ದಾರೆ.  ಈ ಹಾದಿಯಲ್ಲೇ ಕೆಲವೊಂದು ಫನ್ನಿ ವಿಡಿಯೋ ಕ್ಲಿಪ್ ಗಳನ್ನು ಹಂಚಿಕೊಂಡಿದ್ದಾರೆ. ಫನ್ನಿ ಪೋಸ್ ಗಳ ಜೊತೆಗೆ ಫನ್ನಿ ಕೆಲಸಗಳನ್ನು ಮಾಡುತ್ತಾ ಪೋಸ್ ಕೊಟ್ಟ ಪೊಟೋಗಳನ್ನು ಆಕೆ ಶೇರ್‍ ಮಾಡಿದ್ದಾರೆ. ಕೊನೆಯದಾಗ ಒಂದು ಪೋಸ್ಟ್ ಸಹ ಮಾಡಿದ್ದಾರೆ. ಜೀವನಕ್ಕೆ ಸಂಬಂಧಿಸಿದ ಪೋಸ್ಟ್ ಇದಾಗಿದ್ದು, ತನ್ನ ಜೀವನದಲ್ಲಿನ ಕೆಲವೊಂದು ಅನುಭವಗಳನ್ನು ಬರೆದಿದ್ದಾರೆ. ನಿಮ್ಮ ಜೀವನದಲ್ಲಿನ ಪ್ರವಾಹವನ್ನು ಫಾಲೋ ಆಗಬೇಕು, ಅದನ್ನು ನಿಲ್ಲಿಸಲು ಮುಂದಾದರೇ ಅದು ನಮಗೆ ಅನವಶ್ಯಕವಾದ ಸಮಸ್ಯೆಗಳನ್ನು, ಒತ್ತಡಗಳನ್ನು ತಂದುಕೊಡುತ್ತದೆ, ಜೀವನ ಪ್ರವಾಹದೊಂದಿಎಗ ನಾವು ಹೋಗುತ್ತಿರಬೇಕು. ಅದೇ ದಾರಿ ನಮಗೆ ಸರ್ಪೈಸ್ ನೀಡುತ್ತದೆ. ಎಂದು ನಿಹಾರಿಕಾ ಪೋಸ್ಟ್ ಮಾಡಿದ್ದಾರೆ.

ಇನ್ನೂ ನಿಹಾರಿಕಾ ಹಂಚಿಕೊಂಡ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಆಕೆಯ ಮನಸ್ಸಿನಲ್ಲಿರುವ ಹಾಗೂ ಆಕೆಯ ಅನುಭವಕ್ಕೆ ಬಂದಿರುವ ವಿಚಾರವನ್ನೇ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯ ಪಡುತ್ತಿದ್ದಾರೆ. ಸದ್ಯ ನಿಹಾರಿಕಾ ಹಾಗೂ ಚೈತನ್ಯ ವಿಚ್ಚೇದನ ಪಡೆದುಕೊಂಡಿದ್ದಕ್ಕೆ ಕಾರಣ ಏನು ಎಂಬುದು ಮಾತ್ರ ರಿವೀಲ್ ಆಗಿಲ್ಲ. ಇನ್ನೂ ಆಕೆ ಸಿನೆಮಾಗಳ ಮೇಲೆ ಪೋಕಸ್ ಇಟ್ಟಿದ್ದಾರೆ. ತನ್ನದೇ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು, ಅದರ ಮೂಲಕ ವೆಬ್ ಸಿರೀಸ್ ಗಳನ್ನು ಸಹ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.