Film News

ಮೊದಲ ಬಾರಿಗೆ ತನ್ನ ಮಗನನ್ನು ಅಭಿಮಾನಿಗಳಿಗೆ ತೋರಿಸಿದ ಪೂರ್ಣ, ಸೋ ಕ್ಯೂಟ್ ಬೇಬಿ ಎಂದ ಅಭಿಮಾನಿಗಳು….!

ಸೌತ್ ಸಿನಿರಂಗದ ಸೀನಿಯರ್‍ ನಟಿ ಪೂರ್ಣ ಯಾರಿಗೂ ತಿಳಿಯದಂತೆ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದರು. ಬಳಿಕ ಈ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡರು. ಇನ್ನೂ ಆಕೆ ಗರ್ಭಿಣಿಯಾದ ವಿಚಾರವನ್ನೂ ಸಹ ಸೋಷಿಯಲ್ ಮಿಡಿಯಾ ಮೂಲಕವೇ ಹಂಚಿಕೊಂಡಿದ್ದರು. ನಟಿ ಪೂರ್ಣ ಏ.3 ಸೋಮವಾರ ರಾತ್ರಿ ದುಬೈನಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದರು. ಇದೀಗ ಮೊದಲ ಬಾರಿಗೆ ತಮ್ಮ ಮಗನನ್ನು ತಮ್ಮ ಅಭಿಮಾನಿಗಳಿಗೆ ತೋರಿಸಿದ್ದು, ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ ಗಳು ಹರಿದು ಬರುತ್ತಿವೆ.

ಕಳೆದ ವರ್ಷ ಅಕ್ಟೋಬರ್‍ ಮಾಹೆಯಲ್ಲಿ ದುಬೈ ಮೂಲದ ಉದ್ಯಮಿ ಆಸಿಫ್ ಆಲಿ ಎಂಬಾತನನ್ನು ಪೂರ್ಣ ಮದುವೆಯಾದರು. ಈ ಮದುವೆ ವಿಚಾರವನ್ನು ಕೆಲವೊಂದು ಕಾರಣಗಳಿಂದ ಆಕೆ ಗುಟ್ಟಾಗಿಯೇ ಇಟ್ಟಿದ್ದರು. ಬಳಿಕ ಆಕೆಯೇ ಈ ವಿಚಾರವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡರು. ಇನ್ನೂ ಆಕೆ ಗರ್ಭಿಣಿಯಾದ ವಿಚಾರವನ್ನು ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಸೀಮಂತ ಕಾರ್ಯಕ್ರಮ ಸಹ ಅದ್ದೂರಿಯಾಗಿ ನೆರವೇರಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅನೇಕ ಸಿನೆಮಾ ತಾರೆಯರೂ ಸಹ ಹಾಜರಾಗಿದ್ದರು. ಬಳಿಕ ಆಕೆ ಅನೇಕ ಬೇಬಿ ಬಂಪ್ ಪೊಟೋಗಳ ಮೂಲಕ ದರ್ಶನ ಕೊಟ್ಟಿದ್ದರು. ಕಳೆದ ಏಪ್ರಿಲ್ 3 ರಂದು ಆಕೆ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟರು. ಇದೀಗ ಮೊದಲ ಬಾರಿಗೆ ತನ್ನ ಮಗನನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ.

ಸಾಮಾನ್ಯವಾಗಿ ನಟಿಯರು ಒಂದು ವಯಸ್ಸಿಗೆ ಬರುವವರೆಗೂ ಮುಖವನ್ನು ತೋರಿಸುವುದಿಲ್ಲ. ಆದರೆ ಪೂರ್ಣ ತನ್ನ ಮಗನಿಗೆ ಒಂದು ವರ್ಷ ತುಂಬುವುದಕ್ಕೂ ಮುಂಚೆಯೇ ತೋರಿಸಿದ್ದಾರೆ. ಒಂದು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ಪೂರ್ಣ ಹಾಗೂ ಆಕೆಯ ಪತಿ ಷಾನಿದ್ ಆಸಿಫ್ ಅಲಿ ಮಗನನ್ನು ಸಹ ಕರೆದುಕೊಂಡು ಹೋಗಿದ್ದಾರೆ. ಈ ಮದುವೆಯಲ್ಲಿ ತೆಗೆದಂತಹ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ಸಖತ್ ವೈರಲ್ ಆಗುತ್ತಿವೆ. ಪೂರ್ಣ ಮಗನನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಮಗ ಚಂದ್ರನಂತೆ ತುಂಬಾ ಮುದ್ದಾಗಿದ್ದಾನೆ ಎಂದು ಮೆಚ್ಚುಗೆಯ ಕಾಮೆಂಟ್ ಗಳನ್ನು ಹಾಗೂ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಸದ್ಯ ಪೂರ್ಣ ಪತಿಯ ಅನುಮತಿಯ ಮೇರೆಗೆ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ಢಿ ಎಂಬ ಡ್ಯಾನ್ಸ್ ಶೋಗೆ ಜಡ್ಜ್ ಆಗಿ ಸಹ ಪೂರ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡಲ್ಲೂ ಪೂರ್ಣ ಸದ್ದು ಮಾಡುತ್ತಿದ್ದಾರೆ. ನ್ಯಾಚುರಲ್ ಸ್ಟಾರ್‍ ನಾನಿ ಅಭಿನಯದ ದಸರಾ ಸಿನೆಮಾದಲ್ಲಿ ಆಕೆ ಸ್ಪೇಷಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Most Popular

To Top