ಹತ್ತು ವರ್ಷಗಳ ಬಳಿಕ ತೆಲುಗು ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟ ಮೀರಾ ಜಾಸ್ಮೀನ್, ಹೊಸ ಪೋಸ್ಟರ್ ರಿಲೀಸ್….!

ಸೌತ್ ಸಿನಿರಂಗದಲ್ಲಿ ಹೋಮ್ಲಿ ಬ್ಯೂಟಿಯಾಗಿ ಕ್ರೇಜ್ ಪಡೆದುಕೊಂಡ ಮೀರಾ ಜಾಸ್ಮಿನ್ ಸೆಕೆಂಡ್ ಇನ್ನಿಂಗ್ಸ್ ನಲ್ಲಂತೂ ಹಾಟ್ ಅವತಾರ ತಾಳಿದ್ದಾರೆ. ಸಿನೆಮಾಗಳಲ್ಲಿ ರಿಎಂಟ್ರಿಗಾಗಿ ತಾನು ಗ್ಲಾಮರ್‍ ಪಾತ್ರಗಳಲ್ಲೂ ಸಹ ನಟಿಸಬಲ್ಲೇ ಎಂಬುದನ್ನು ತೋರಿಸಿಕೊಡುವ ನಿಟ್ಟಿನಲ್ಲಿ ಹಾಟ್ ಪೊಟೋಶೂಟ್ಸ್ ಹಂಚಿಕೊಂಡಿದ್ದರು. ಸುಮಾರು ಹತ್ತು ವರ್ಷಗಳ ಬಳಿಕ ಮೀರಾ ಜಾಸ್ಮಿನ್ ತೆಲುಗು ಸಿನೆಮಾಗಳಲ್ಲಿ ರೀ ಎಂಟ್ರಿ ಕೊಡುತ್ತಿದ್ದಾರೆ. ಆಕೆಯ ಹುಟ್ಟುಹಬ್ಬದ ಸಂದರ್ಭವಾಗಿ ಹೊಸ ಸಿನೆಮಾದ ಪೋಸ್ಟರ್‍ ಸಹ ಬಿಡುಗಡೆ ಮಾಡಲಾಗಿದೆ. ಇನ್ನೂ ಸುಮಾರು ವರ್ಷಗಳ ಬಳಿಕ ಮೀರಾ ಜಾಸ್ಮೀನ್ ಸಿನೆಮಾಗಳಲ್ಲಿ ರೀ ಎಂಟ್ರಿ ಕೊಡಲಿರುವ ವಿಚಾರ ತಿಳಿದು ಅಭಿಮಾನಿಗಳು ಸಹ ಸಂತಸ ವ್ಯಕ್ತಪಡಿಸಿದ್ದಾರೆ.

ಸೌತ್ ಸಿನಿರಂಗದಲ್ಲಿ ಸುಮಾರು ವರ್ಷಗಳ ಕಾಲ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿದ ಸೀನಿಯರ್‍ ನಟಿ ಮೀರಾ ಜಾಸ್ಮೀನ್ ತನ್ನದೇ ಆದ ನಟನೆ, ಗ್ಲಾಮರ್‍ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಇನ್ನೂ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಮದುವೆಯಾದರು. ಮದುವೆಯಾದ ಬಳಿಕ ಆಕೆ ಸಿನೆಮಾಗಳಿಂದ ದೂರವೇ ಉಳಿದರು. ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಈ ಬ್ಯೂಟಿ ಮಲಯಾಳಂ, ತಮಿಳು ಸಿನೆಮಾಗಳಲ್ಲಿ ನಟಿಸಿದ್ದರು. ಇದೀಗ ಹತ್ತು ವರ್ಷಗಳ ಬಳಿಕ ತೆಲುಗು ಪ್ರೇಕ್ಷರನ್ನು ರಂಜಿಸಲು ಸಿನೆಮಾ ಒಂದರ ಮೂಲಕ ಗ್ರಾಂಡ್ ಎಂಟ್ರಿ ಕೊಡಲಿದ್ದಾರೆ. ಈ ಹಾದಿಯಲ್ಲೇ ಆಕೆಯ ಹುಟ್ಟುಹಬ್ಬದ ಪ್ರಯುಕ್ತ ಸಿನೆಮಾದ ಪೋಸ್ಟರ್‍ ಸಹ ಬಿಡುಗಡೆ ಮಾಡಲಾಗಿದೆ.

ನಟಿ ಮೀರಾ ಜಾಸ್ಮೀನ್ ರವರ ಹುಟ್ಟುಹಬ್ಬದ (ಫೆ.15) ಅಂಗವಾಗಿ ಆಕೆಯ ಹೊಸ ಸಿನೆಮಾದ ಪೋಸ್ಟರ್‍ ಅನ್ನು ಸಿನೆಮಾ ತಂಡ ಬಿಡುಗಡೆ ಗೊಳಿಸಿ ಆಕೆಗೆ ವಿಶೇಷ ರೀತಿಯಲ್ಲಿ ಶುಭಾಷಯ ಕೋರಿದ್ದಾರೆ. ನಟಿ ಮೀರಾ ಜಾಸ್ಮಿನ್ ಕೊನೆಯದಾಗಿ ಮೋಕ್ಸ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾ 2013ರಲ್ಲಿ ಬಿಡುಗಡೆಯಾಗಿತ್ತು. ಬಳಿಕ ಆಕೆ ತೆಲುಗು ಸಿನೆಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಹದಿಮೂರು ವರ್ಷಗಳ ಬಳಿಕ ವಿಮಾನಂ ಎಂಬ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಇನ್ನೂ ವರ್ಷಗಳ ಬಳಿಕ ತಮ್ಮ ಪ್ರೀತಿಯ ನಟಿಯನ್ನು ದೊಡ್ಡಪರದೆಯ ಮೇಲೆ ನೋಡಲು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನೆಮಾದಲ್ಲಿ ಮೀರಾ ಜಾಸ್ಮಿನ್ ಎಂತಹ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಮೀರಾ ಜಾಸ್ಮಿನ್ 40 ರ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕೇರಳ ಮೂಲದ ಈಕೆ ತಮಿಳು ಹಾಗೂ ಮಲಯಾಳಂ ಸಿನೆಮಾಗಳ ಮೂಲಕ ಕ್ರೇಜ್ ಸಂಪಾದಿಸಿಕೊಂಡರು. ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆಗೆ ಗುಡುಂಬಾ ಶಂಕರ್‍ ಸಿನೆಮಾದಲ್ಲಿ ನಟಿಸಿ ತೆಲುಗು ಪ್ರೇಕ್ಷಕರ ಮನದಲ್ಲಿ ಸ್ಥಾನ ಸಂಪಾದಿಸಿಕೊಂಡರು. ಅನೇಕ ಹಿಟ್ ಸಿನೆಮಾಗಳು ಆಕೆಯ ಖಾತೆಯಲ್ಲಿವೆ. ಇದೀಗ ಆಕೆಯ ವಿಮಾನಂ ಸಿನೆಮಾ ಯಾವ ರೀತಿಯಲ್ಲಿ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.