ನನ್ನ ಪತಿಯ ಮುಂದೆಯೇ ಅಂತಹ ದೃಶ್ಯಗಳಲ್ಲಿ ನಟಿಸಿದ್ದೆ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ ಟೈಟಾನಿಕ್ ಬ್ಯೂಟಿ ಕೆಟ್…!

ಸಿನಿರಂಗದಲ್ಲಿ ಕೆಲವೊಂದು ಸಿನೆಮಾಗಳು ವರ್ಷಗಳು ಕಳೆದರೂ ಪ್ರೇಕ್ಷಕರ ಮನದಲ್ಲಿ ಮನೆ ಮಾಡಿರುತ್ತವೆ. ಅಂತಹ ಸಿನೆಮಾಗಳ ಸಾಲಿಗೆ ಹಾಲಿವುಡ್ ನ ಲವ್ ಅಂಡ್ ರೊಮ್ಯಾಂಟಿಕ್ ಕಥೆಯುಳ್ಳ ಟೈಟಾನಿಕ್ ಸಿನೆಮಾ ಸಹ ಸೇರುತ್ತದೆ. ಈ ಸಿನೆಮಾದಲ್ಲಿ ನಾಯಕಿಯಾಗಿ…

ಸಿನಿರಂಗದಲ್ಲಿ ಕೆಲವೊಂದು ಸಿನೆಮಾಗಳು ವರ್ಷಗಳು ಕಳೆದರೂ ಪ್ರೇಕ್ಷಕರ ಮನದಲ್ಲಿ ಮನೆ ಮಾಡಿರುತ್ತವೆ. ಅಂತಹ ಸಿನೆಮಾಗಳ ಸಾಲಿಗೆ ಹಾಲಿವುಡ್ ನ ಲವ್ ಅಂಡ್ ರೊಮ್ಯಾಂಟಿಕ್ ಕಥೆಯುಳ್ಳ ಟೈಟಾನಿಕ್ ಸಿನೆಮಾ ಸಹ ಸೇರುತ್ತದೆ. ಈ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಕೆಟ್ ವಿನ್ಸ್ಲೆಟ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಇಡೀ ವಿಶ್ವದಾದ್ಯಂತ ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಇದೀಗ ಈ ಸಿನೆಮಾದಲ್ಲಿ ನಟಿಸಿದ ಟೈಟಾನಿಕ್ ಬ್ಯೂಟಿ ಕೆಟ್ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಸೂಪರ್‍ ಡೂಪರ್‍ ಹಿಟ್ ಹೊಡೆದ ಟೈಟಾನಿಕ್ ಸಿನೆಮಾ ಕಳೆದ 1997 ರಲ್ಲಿ ತೆರೆಗೆ ಬಂತು. ಇನ್ನೂ ಈ ಸಿನೆಮಾ ಇಡೀ ವಿಶ್ವದಾದ್ಯಂತ ಭಾರಿ ಕ್ರೇಜ್ ಪಡೆದುಕೊಂಡಿತ್ತು. ಈ ಸಿನೆಮಾದಲ್ಲಿ ಕೇಟ್, ಲಿಯೋನಾರ್ಡ್ ಡಿಕಾಪ್ರಿಯಾ ಜೋಡಿ ತುಂಬಾ ಅದ್ಬುತವಾಗಿ ನಟಿಸಿತ್ತು. ಈ ಸಿನೆಮಾದ ಬಳಿಕ ಅವರಿಬ್ಬರೂ ಸೂಪರ್‍ ಸ್ಟಾರ್‍ ಗಳಾದರು. ಅದರಲ್ಲೂ ಕೇಟ್ ವಿನ್ಸ್ಲೇಟ್ ಸೌಂದರ್ಯಕ್ಕೆ ಪ್ರಪಂಚವ್ಯಾಪಿ ದಾಸೋಹ ಆಗಿಬಿಟ್ಟರು. ಆಕೆಯ ಹೆಸರು ತಿಳಿಯದೇ ಇದ್ದರೂ ಸಹ ಟೈಟಾನಿಕ್ ಹಿರೋಯಿನ್ ಎಂದು ತುಂಬಾ ಖ್ಯಾತಿ ಪಡೆದುಕೊಂಡರು. ಈ ಸಿನೆಮಾ ಸುಮಾರು ಎರಡು ಬಿಲಿಯನ್ ಡಾಲರ್ಸ್ ಗೂ ಅಧಿಕ ವಸೂಲಿಯನ್ನು ಮಾಡುವ ಮೂಲಕ ವರ್ಲ್ಡ್‌ ಹೈಯೆಸ್ಟ್ ಗ್ರಾಸ್ ಸಂಪಾದಿಸಿದ ಸಿನೆಮಾ ಆಗಿ ರೆಕಾರ್ಡ್ ಮಾಡಿದೆ. ಬಳಿಕ ಟೈಟಾನಿಕ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವತಾರ್‍ ಸಿನೆಮಾದ ವರೆಗೂ ಟೈಟಾನಿಕ್ ರೆಕಾರ್ಡ್ ಬ್ರೇಕ್ ಮಾಡಿಲ್ಲ.

ಇನ್ನೂ ನಟಿ ಕೇಟ್ ಹಾಗೂ ಲಿಯೋನಾರ್ಡ್ ಜೊತೆಗೆ 2008ರಲ್ಲಿ ರೆವಲ್ಯೂಷನರಿ ರೋಡ್ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಕೇಟ್ ಹಾಗೂ ಲಿಯೋನಾರ್ಡ್ ತುಂಬಾ ಬೋಲ್ಡ್ ಆಗಿರುವ ಶೃಂಗಾರ ಸನ್ನಿವೇಶಗಳಿವೆ. ಇನ್ನೂ ಈ ರೆವಲ್ಯೂಷನರಿ ರೋಡ್ ಸಿನೆಮಾದ ನಿರ್ದೇಶಕ ಬೇರೆ ಯಾರೂ ಅಲ್ಲ ಕೇಟ್ ಪತಿ ಸ್ಯಾಮ್ ಮೆಂಡೀಸ್. ಆತನ ನಿರ್ದೇಶನದಲ್ಲೇ ಕೇಟ್ ನಟಿಸಬೇಕಾದ ಪರಿಸ್ಥಿತಿ ಬಂದಿದೆ. ಇನ್ನೂ ಇತ್ತೀಚಿಗೆ ಆಕೆ ಆ ಸನ್ನಿವೇಶಗಳನ್ನು ನೆನಪಿಸಿಕೊಂಡು ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ನನ್ನ ಪತಿಯ ಮುಂದೆಯೇ ಶೃಂಗಾರದ ಸನ್ನಿವೇಶಗಳಲ್ಲಿ ನಟಿಸಬೇಕಾಯಿತು. ಇದರಿಂದ ನನಗೆ ತುಂಬಾ ಕಿರಿಕಿರಿಯಾಗಿತ್ತು. ಜೊತೆಗೆ ವಿಚಿತ್ರವಾದ ಅನುಭವ ಸಹ ಆಗಿತ್ತು. ಯಾರಿಗೂ ಬರಬಾರದಂತಹ ಭಿನ್ನವಾದ ಪರಿಸ್ಥಿತಿಯನ್ನು ನಾನು ಎದುರಿಸಿದ್ದೇನೆ ಎಂದು ಕೇಟ್ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಇದೀಗ ಈ ಹೇಳಿಕೆಗಳು ವೈರಲ್ ಆಗುತ್ತಿವೆ.

ಟೈಟಾನಿಕ್ ಸಿನೆಮಾದ ಬಳಿಕ ಕೇಟ್ ತುಂಬಾನೆ ಫೇಮಸ್ ಆದರು. ಆಕೆಗೆ ಮೂರು ಮದುವೆಯಾಗಿದೆ. 1998ರಲ್ಲಿ ನಿರ್ದೇಶಕ ಜಿಮ್ ರನ್ನು ಮದುವೆಯಾದರು. ಬಳಿಕ 2001ರಲ್ಲಿ ಆತನಿಗೆ ವಿಚ್ಚೇದನ ನೀಡಿದರು. 2003ರಲ್ಲಿ ಸ್ಯಾಮ್ ಮೆಂಡೀಸ್ ಎಂಬ ನಿರ್ದೇಶಕನೊಂದಿಗೆ ಎರಡನೇ ವಿವಾಹವಾದರು. ಆತನೊಂದಿಗೂ ಸಹ 2011ರಲ್ಲಿ ವಿಚ್ಚೇದನ ಪಡೆದುಕೊಂಡರು. ಬಳಿಕ 2012 ರಲ್ಲಿ ಎಡ್ವರ್ಡ್ ಅಬೆಲ್ ಸ್ಮಿತ್ ಎಂತಾನೊಂದಿಗೆ ಮದುವೆಯಾದರು. ಇದೀಗ ಕೇಟ್ ನೀಡಿದ ಹೇಳಿಕೆಗಳು ವೈರಲ್ ಆಗುತ್ತಿವೆ.