Film News

ಯಶ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಅಲ್ಲು ಅರವಿಂದ್, ಕೆಜಿಎಫ್ ಗೆ ಮುಂಚೆ ಯಶ್ ಸ್ಟಾರ್ ಆಗಿರಲಿಲ್ಲ ಎಂದ ತೆಲುಗು ನಿರ್ಮಾಪಕ…..!

ಸ್ಯಾಂಡಲ್ ವುಡ್ ನಟ ಯಶ್ ಕೆಜಿಎಫ್ ಸಿನೆಮಾದ ಮೂಲಕ ಕರ್ನಾಟಕದಲ್ಲಿ ಮಾತ್ರವಲ್ಲದೇ, ಭಾರತದಲ್ಲಿ ಮಾತ್ರವಲ್ಲದೇ ದೇಶದಾದ್ಯಂತ ಭಾರಿ ಅಭಿಮಾನಿಗಳನ್ನು ಪಡೆದುಕೊಂಡರು. ಕೆಜಿಎಫ್ ಸಿನೆಮಾದ ಇದೀಗ ಕನ್ನಡ ಸಿನಿರಂಗದ ಖ್ಯಾತಿಯನ್ನು ಸಹ ವಿಶ್ವ ಮಟ್ಟದಲ್ಲಿ ಹೆಚ್ಚಾಗುವಂತೆ ಮಾಡಿದೆ ಎನ್ನಬಹುದಾಗಿದೆ. ಯಶ್ ಸಹ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಇದೀಗ ತೆಲುಗು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಕೆಜಿಎಫ್ ಸಿನೆಮಾಗೂ ಮುಂಚೆ ಯಶ್ ಸ್ಟಾರ್‍ ಆಗಿರಲಿಲ್ಲ ಎಂದು ಹೇಳಿದ್ದಾರೆ.

ತೆಲುಗು ಸಿನಿರಂಗದಲ್ಲಿ ಕೆಲವು ದಿನಗಳಿಂದ ನಟರ ಸಂಭಾವನೆಯ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ನಿರ್ಮಾಪಕ ಸಂಘದ ಕೆಲವರು ಸಹ ಈ ಕುರಿತಂತೆ ಸಭೆ ನಡೆಸಿ ಕೆಲವು ಸ್ಟಾರ್‍ ನಟರು ಸಹ ತಮ್ಮ ಸಂಭಾವನೆಗಳನ್ನು ತಗ್ಗಿಸಿಕೊಳ್ಳಬೇಕೆಂಬ ಮನವಿ ಸಹ ಮಾಡಿದ್ದರು. ತೆಲುಗು ಮೆಗಾಸ್ಟಾರ್‍ ಚಿರಂಜೀವಿ ಸೇರಿದಂತೆ ಅನೇಕರು ಸಂಭಾವನೆಯ ಬಗ್ಗೆ ಅನೇಕ ವೇದಿಕೆಯಲ್ಲಿ ಅಭಿಪ್ರಾಯ ಸಹ ಹಂಚಿಕೊಂಡಿದ್ದಾರೆ. ನಟರ ಸಂಭಾವನೆಯ ಬಗ್ಗೆ ಪರ-ವಿರೋಧ ವಾದ ಸಹ ನಡೆಯುತ್ತಿದೆ. ಈ ವಿಚಾರವಾಗಿ ಅಲ್ಲು ಅರವಿಂದ್ ಮಾತನಾಡಿದ್ದಾರೆ. ಒಂದು ಸಿನೆಮಾದ ಒಟ್ಟು ಬಜೆಟ್ ನಲ್ಲಿ ಶೇ. 25-30 ರಷ್ಟು ಹಿರೋ ಸಂಭಾವನೆ ಇರುತ್ತದೆ. ಉಳಿದ ಹಣವನ್ನು ಸಿನೆಮಾದ ಬೇರೆ ಬೇರೆ ವಿಭಾಗಗಳ ಮೇಲೆ ಹಾಕಲಾಗಿರುತ್ತದೆ. ಇದೀಗ ಸಿನೆಮಾ ರಸಿಕರು ಸಿನೆಮಾ ದೊಡ್ಡದಾಗಿರಬೇಕು, ಅದ್ದೂರಿಯಾಗಿರಬೇಕು, ಗ್ರಾಂಡ್ ಆಗಿರಬೇಕು ಎಂದು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಟ ಯಾರೇ ಆಗಿದ್ದರೂ ಸರಿ ಅವರಿಗೆ ಸಿನೆಮಾ ಗ್ರಾಂಡ್ ಆಗಿರಬೇಕು. ಆದ್ದರಿಂದ ನಟರ ಸಂಭಾವನೆಯ ಕಾರಣದಿಂದ ಸಿನೆಮಾ ಬಜೆಟ್ ಹೆಚ್ಚಾಗುತ್ತದೆ ಎಂದು ಹೇಳಲಾಗುವುದಿಲ್ಲ. ಯಾರೇ ನಟರಾದರೂ ಸಿನೆಮಾ ಮೇಕಿಂಗ್ ಮೇಲೆ ದೊಡ್ಡ ಮಟ್ಟದಲ್ಲೇ ಬಂಡವಾಳ ಹಾಕಲಾಗುತ್ತದೆ ಎಂದು ಹೇಳಿದ್ದಾರೆ.

ಇದಕ್ಕೆ ಅಲ್ಲು ಅರವಿಂದ್ ಕೆಜಿಎಫ್ ಸಿನೆಮಾವನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ನಟ ಯಶ್ ಕೆಜಿಎಫ್ ಸಿನೆಮಾಗೂ ಮುಂಚೆ ಸ್ಟಾರ್‍ ಆಗಿರಲಿಲ್ಲ. ಆದರೆ ಕೆಜಿಎಫ್ ಸಿನೆಮಾವನ್ನು ಗ್ರಾಂಡ್ ಆಗಿ ನಿರ್ಮಾಣ ಮಾಡಿದರು. ಕೆಜಿಎಫ್ ಸಿನೆಮಾ ಗ್ರಾಂಡ್ ಆಗಿರುವುದೇ ಯಶಸ್ಸಿಗೆ ಕಾರಣವಾಗಿದೆ. ಕೆಜಿಎಫ್ ಸಕ್ಸಸ್ ಇದಕ್ಕೆ ಒಳ್ಳೆಯ ಉದಾಹರಣೆ ಎನ್ನಬಹುದಾಗಿದೆ. ಆದ್ದರಿಂದ ಸಿನೆಮಾದಲ್ಲಿ ದೊಡ್ಡ ನಟರನ್ನು ಆಯ್ಕೆ ಮಾಡಿಕೊಂಡು ಅವರಿಗೆ ದೊಡ್ಡ ಮೊತ್ತದ ಸಂಭಾವನೆ ಕೊಟ್ಟರೇ ಸಾಲದು ಸಿನೆಮಾದ ಗುಣಮಟ್ಟಕ್ಕೂ ಸಹ ಅಷ್ಟೆ ಬಂಡವಾಳ ಹೂಡಬೇಕಾಗುತ್ತದೆ ಎಂದು ಅಲ್ಲು ಅರವಿಂದ್ ಕಾಮೆಂಟ್ ಮಾಡಿದ್ದಾರೆ.

Most Popular

To Top