ಮನೋಜ್-ಮೋನಿಕಾ ಮದುವೆ ಕಾರ್ಯಕ್ರಮಗಳ ಜೋರು, ಮೆಹಂದಿ ಪೊಟೋಗಳು ಹಂಚಿಕೊಂಡ ಮಂಚು ಲಕ್ಷ್ಮೀ…!

Follow Us :

ಸುಮಾರು ದಿನಗಳಿಂದ ಮಂಚು ಮನೋಜ್ ಹಾಗೂ ಭೂಮಾ ಮೋನಿಕಾ ರೆಡ್ಡಿ ಮದುವೆಯ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಕಳೆದ ಗಣೇಶ ಹಬ್ಬದ ಸಮಯದಲ್ಲಿ ಶುರುವಾದ ಅವರ ಸುದ್ದಿ ಸದಾ ಹರಿದಾಡುತ್ತಲೇ ಇತ್ತು. ಅಂದಿನಿಂದ ಅವರ ಮದುವೆ ನಡೆಯಲಿದೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಇದೀಗ ಅವರ ಮದುವೆ ದಿನಾಂಕ ಅಧಿಕೃತವಾಗಿದೆ. ಮದುವೆ ಕಾರ್ಯಕ್ರಮಗಳು ಶುರುವಾಗಿದ್ದು, ಮೆಹಂದಿ ಶಾಸ್ತ್ರ ಜೋರಾಗಿಯೇ ನಡೆದಿದ್ದು ಈ ಸಂಬಂಧ ಮಂಚು ಲಕ್ಷ್ಮೀ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ವೈರಲ್ ಆಗಿದೆ.

ತೆಲುಗು ಸಿನಿರಂಗದ ಮಂಚು ಕುಟುಂಬದಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಮಂಚು ಮನೋಜ್ ಹಾಗೂ ಮೋನಿಕಾ ಮದುವೆ ಸಂಭ್ರಮ ಜೋರಾಗಿದೆ. ಮಂಚು ಲಕ್ಷ್ಮೀ ಪ್ರಸನ್ನ ಮನೆಯಲ್ಲಿಯೇ ಮದುವೆ ಸಂಭ್ರಮ ನಡೆಯುತ್ತಿದೆ. ಮೆಹಂದಿ ಕಾರ್ಯಕ್ರಮದ ಜೊತೆಗೆ ಸಂಗೀತ್ ಕಾರ್ಯಕ್ರಮ ಸಹ ಭರ್ಜರಿಯಾಗಿ ನಡೆದಿದೆ. ಇನ್ನೂ ಮಂಚು ಲಕ್ಷ್ಮೀ ಮೆಹಂದಿ ಸಂಭ್ರಮದ ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಆಕೆ ಮೆಹಂದಿ ಕಾರ್ಯಕ್ರಮದ ಪೊಟೋಗಳನ್ನು ಹಂಚಿಕೊಂಡ ಬಳಿಕ ಮನೋಜ್ ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ದೊರೆತಿದೆ. ಮಹಾ ಮಂತ್ರ ಪೂಜೆಯ ಮೂಲಕ ಮನೋಜ್ ಮದುವೆ ಕಾರ್ಯಕ್ರಮಗಳು ಶುರುವಾಗಿದೆ. ಮನೋಜ್ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಮಂಚು ಲಕ್ಷ್ಮೀ ಯವರೇ ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಇಬ್ಬರ ಕುಟುಂಬಸ್ಥರು ಹಾಗೂ ಕೆಲವೇ ಮಂದಿ ಹತ್ತಿರದವರ ಸಮ್ಮುಖದಲ್ಲಿ ಮನೋಜ್ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ.

ಇನ್ನೂ ಮನೋಜ್ ಹಾಗೂ ಭೂಮಾ ಮೋನಿಕಾ ರೆಡ್ಡಿ ಯವರ ಮದುವೆ ಶುಕ್ರವಾರ (ಮಾ.3) ರಂದು ನಡೆಯಲಿದೆ. ವಿವಾಹದ ಮೂಲಕ ಇಬ್ಬರೂ ಒಂದಾಗಲಿದ್ದಾರೆ. ಶುಕ್ರವಾರ ರಾತ್ರಿ 8.30 ಕ್ಕೆ ಈ ಜೋಡಿಯ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ. ಇನ್ನೂ ಈ ಮದುವೆಗೆ ಮೋಹನ್ ಬಾಬು ಹಾಗೂ ಅವರ ಹಿರಿಯ ಮಗ ಮಂಚು ವಿಷ್ಣು ದೂರವಾಗಿಯೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಮದುವೆಗೆ ಅವರಿಗೆ ಇಷ್ಟ ಇಲ್ಲದ ಕಾರಣ ಅವರು ದೂರವಾಗಿದ್ದಾರೆ ಎಂಬ ವಿಚಾರ ಕೇಳಿಬರುತ್ತಿದೆ. ಈ ಕಾರಣದಿಂದಲೇ ಮಂಚು ಲಕ್ಷ್ಮೀ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಮನೋಜ್ ಗೆ ಈ ಹಿಂದೆಯೇ ಮದುವೆಯಾಗಿದ್ದು, ಆತ ಮೊದಲನೆ ಪತ್ನಿಯಿಂದ ವಿಚ್ಚೇದನ ಪಡೆದುಕೊಂಡಿದ್ದರು. ಅದೇ ರೀತಿ ಮೋನಿಕಾ ಗೂ ಸಹ ಈ ಹಿಂದೆ ಮದುವೆಯಾಗಿದ್ದು, ಆಕೆ ಸಹ ಮೊದಲನೆ ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದಾರೆ. ಇದೀಗ ಇಬ್ಬರೂ ವಿವಾಹದ ಮೂಲಕ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.