ಮೊದಲ ರಾತ್ರಿ ಸಿದ್ದತೆಯ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ ಸ್ವರಾ ಭಾಸ್ಕರ್….!

Follow Us :

ಬಾಲಿವುಡ್ ಬೋಲ್ಡ್ ಬ್ಯೂಟಿಗಳಲ್ಲಿ ಸ್ವರಾ ಭಾಸ್ಕರ್‍ ಸಹ ಒಬ್ಬರಾಗಿದ್ದಾರೆ. ಬೋಲ್ಡ್ ಪಾತ್ರಗಳಲ್ಲಿ ನಟಿಸುವ ಮೂಲಕ ಆಕೆ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಜೊತೆಗೆ ಆಕೆ ಸೊಷಿಯಲ್ ಮಿಡಿಯಾದಲ್ಲಿ ಮಾಡುವಂತಹ ಕಾಮೆಂಟ್ಸ್ ಗಳ ಕಾರಣದಿಂದ ಸದಾ ಆಕೆ ಟ್ರೋಲಗಳಿಗೆ ಗುರಿಯಾಗುತ್ತಿರುತ್ತಾರೆ. ಇತ್ತೀಚಿಗಷ್ಟೆ ಆಕೆ ಯುವರಾಜಕಾರಣಿ ಫಹಾದ್ ಅಹ್ಮದ್ ಎಂಬಾತನನ್ನು ಮದುವೆಯಾದರು. ಮದುವೆಯ ಕಾರಣದಿಂದಲೂ ಆಕೆ ತುಂಬಾ ವಿಮರ್ಶೆಗಳನ್ನು ಎದುರಿಸಿದ್ದರು. ಇದೀಗ ಫಸ್ಟ್ ನೈಟ್ ಪೊಟೋಗಳನ್ನು ಹಂಚಿಕೊಂಡು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದಾರೆ.

ಬೋಲ್ಡ್ ಬ್ಯೂಟಿ ಸ್ವರಾ ಭಾಸ್ಕರ್‍ ಅನೇಕ ಸಿನೆಮಾಗಳಲ್ಲಿ ಬೋಲ್ಡ್ ಅವತಾರದಲ್ಲೇ ಕಾಣಿಸಿಕೊಂಡು ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಇನ್ನೂ ಸದಾ ಮೋದಿ ಸರ್ಕಾರದ ವಿರುದ್ದ ವಿಮರ್ಶೆಗಳನ್ನು ಮಾಡುತ್ತಾ ಸುದ್ದಿಯಲ್ಲಿರುತ್ತಾರೆ. ನಟಿ ಸ್ವರಾ ಭಾಸ್ಕರ್‍ ಕಳೆದ ಫೆ.16 ರಂದು ಯಂಗ್ ಪೊಲಿಟೀಷಿಯನ್ ಫಹಾದ್ ಅಹ್ಮದ್ ಎಂಬಾತನನ್ನು ವಿವಾಹವಾದರು. ಜನವರಿ 6 ರಂದೇ ಸ್ವರಾ ಮದುವೆಯಾಗಿದ್ದರು. ಕೋರ್ಟಿನಲ್ಲಿ ಈಕೆ ಮದುವೆಯಾಗಿದ್ದರು. ಆದರೆ ಫೆ.16 ರಂದು ಆಕೆ ಪೊಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇನ್ನೂ ಮದುವೆಯಾದಾಗಿನಿಂದ ಸ್ವರಾ ಭಾಸ್ಕರ್‍ ಟ್ರೋಲ್ ಆಗುತ್ತಲೇ ಇದ್ದಾರೆ. ಮತಾಂತರ ವಿವಾಹವಾದ ಕಾರಣ ಹಾಗೂ ಈ ಹಿಂದೆ ಫಹಾದ್ ರನ್ನು ಸ್ವರಾ ಅಣ್ಣ ಎಂದು ಕರೆದಿದ್ದರು. ಈ ಕಾರಣದಿಂದ ಆಕೆಯನ್ನು ಅಣ್ಣ ಎಂದು ಕರೆದವರನ್ನು ಮದುವೆಯಾಗುತ್ತೀಯಾ ಎಂದು ಟ್ರೋಲ್ ಮಾಡಿದರು.

ಬೋಲ್ಡ್ ನೆಸ್ ಗೆ ಬ್ರಾಂಡ್ ಅಂಬಾಸಿಡರ್‍ ಎಂದೇ ಕರೆಯಲಾಗುವ ಸ್ವರಾ ಭಾಸ್ಕರ್‍ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಸ್ವರಾ ಭಾಸ್ಕರ್‍ ತಮ್ಮ ಮೊದಲರಾತ್ರಿಯ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ  ಮದುವೆಗೆ ಸಂಬಂಧಿಸಿದ ಪೊಟೋಗಳನ್ನು ಹಂಚಿಕೊಳ್ಳುವುದನ್ನು ನೋಡಬಹುದಾಗಿದೆ ಆದರೆ ಸ್ವರಾ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬೆಡ್ ರೂಂ ನಲ್ಲಿ ಮೊದಲ ರಾತ್ರಿಗೆ ಅರೇಂಜ್ ಮಾಡಿದ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೆಡ್ ರೂಂ ಅನ್ನು ಸುಂದರವಾಗಿ ರೆಡಿ ಮಾಡಿದ್ದು. ಅಂತಹ ಪೊಟೋಗಳನ್ನು ನಾವು ಸಿನೆಮಾಗಳಲ್ಲಿ ಕಾಣಬಹುದು. ಆದರೆ ಸ್ವರಾ ಮಾತ್ರ ತನ್ನ ಮೊದಲ ರಾತ್ರಿಯ ಸಿದ್ದತೆಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಫೈರ್‍ ಆಗಿದ್ದಾರೆ.

ಇನ್ನೂ ವೈಯುಕ್ತಿಕವಾಗಿರುವ ಈ ಪೊಟೋಗಳನ್ನು ಸ್ವರಾ ಹಂಚಿಕೊಂಡಿದ್ದು ಈ ಬಗ್ಗೆ ಅನೇಕರು ವಿಮರ್ಶೆ ಮಾಡಿದ್ದಾರೆ. ಸದಾ ಆಕೆಯ ವಿರುದ್ದ ಟ್ರೋಲ್ ಗಳು ಎದುರಾಗುತ್ತಲೇ ಇರುತ್ತೆ. ಆದರೆ ಆ ಟ್ರೋಲ್ ಗಳಿಗೂ ಸಹ ಸರಿಯಾಗಿಯೇ ಕೌಂಟರ್‍ ನೀಡುತ್ತಿರುತ್ತಾರೆ. ಇದೀಗ ಮೊದಲ ರಾತ್ರಿಯ ಪೊಟೋಗಳನ್ನು ಹಂಚಿಕೊಂಡ ಕಾರಣದಿಂದ ಮತ್ತೊಮ್ಮೆ ಟ್ರೋಲ್ ಆಗುತ್ತಿದ್ದಾರೆ. ಈ ಬಗ್ಗೆ ಸ್ವರಾ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.