Film News

ಅಂದುಕೊಂಡಂತೆ ಆಗಿದ್ದರೇ ರಕುಲ್ ಆ ಸ್ಟಾರ್ ನಟನ ಪತ್ನಿಯಾಗಬೇಕಿತ್ತಂತೆ, ಅಷ್ಟಕ್ಕೂ ಆಗಿದ್ದಾದರೂ ಏನು?

ಸೌತ್ ಅಂಡ್ ನಾರ್ತ್ ನಲ್ಲಿ ಬಹುಬೇಡಿಕೆ ಹೊಂದಿರುವ ನಟಿಯರ ಸಾಲಿಗೆ ರಕುಲ್ ಪ್ರೀತ್ ಸಿಂಗ್ ಸಹ ಸೇರುತ್ತಾರೆ. ಸಾಲು ಸಾಲು ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಕೇವಲ ಸೌತ್ ಸಿನಿರಂಗಕ್ಕೆ ಸೀಮಿತವಾಗದೇ ಆಕೆ ಬಾಲಿವುಡ್ ನಲ್ಲೂ ಕ್ರೇಜ್ ದಕ್ಕಿಸಿಕೊಂಡು ಅಲ್ಲೂ ಸಹ ತಮ್ಮ ಹವಾ ಸೃಷ್ಟಿ ಮಾಡಿದ್ದಾರೆ. ಸೌತ್ ನಲ್ಲಿ ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಆಕೆ ಬಾಲಿವುಡ್ ನತ್ತ ಮುಖ ಮಾಡಿದರು. ಬಾಲಿವುಡ್ ನಲ್ಲಿ ಆಕೆಗೆ ಒಳ್ಳೆಯ ಅವಕಾಶಗಳು ಸಿಕ್ಕ ಹಿನ್ನೆಲೆಯಲ್ಲಿ ಆಕೆ ಅಲ್ಲಿಯೇ ಸೆಟಲ್ ಆಗಿದ್ದಾರೆ.

ಸಿನಿರಸಿಕರಿಗೆ ಅಷ್ಟೊಂದು ಪರಿಚಯ ಬೇಡದ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ಒಬ್ಬರಾಗಿದ್ದಾರೆ. ಕಳೆದ ವರ್ಷ ಐದಾರು ಸಿನೆಮಾಗಳಲ್ಲಿ ರಕುಲ್ ಪ್ರೀತ್ ನಟಿಸಿದ್ದರು. ಆದರೆ ಈ ಪೈಕಿ ಯಾವುದೇ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ ಎಂದು ಹೇಳಲಾಗುತ್ತಿದೆ. ಆದರೂ ಸಹ ಆಕೆಗೆ ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ ಎಂದು ಹೇಳಬಹುದು. ಇದೀಗ ರಕುಲ್ ಪ್ರೀತ್ ಸಿಂಗ್ ಟಾಲಿವುಡ್ ನ ಸ್ಟಾರ್‍ ನಟನ ಪತ್ನಿಯಾಗಬೇಕಿತ್ತು. ಅಂದುಕೊಂಡಂತೆ ಎಲ್ಲಾ ಆಗಿದ್ದರೇ ಈಗಾಗಲೇ ಮದುವೆ ಸಹ ಆಗಬೇಕಿತ್ತು. ಆದರೆ ಕೆಲವೊಂದು ಕಾರಣಗಳಿಂದ ಅದು ನಡೆಯಲಿಲ್ಲವಂತೆ. ಅಷ್ಟಕ್ಕೂ ಆಗಿದ್ದಾದರೂ ಏನು, ಆ ಸ್ಟಾರ್‍ ನಟ ಯಾರು ಎಂಬ ವಿಚಾರಕ್ಕೆ ಬಂದರೇ

ಸ್ಟಾರ್‍ ನಟಿ ರಕುಲ್ ಪ್ರೀತ್ ಸಿಂಗ್ ಟಾಲಿವುಡ್ ನ ಸ್ಟಾರ್‍ ನಿರ್ಮಾಪಕರ ಮನೆಯ ಸೊಸೆಯಾಗಬೇಕಿತ್ತಂತೆ. ಆ ಸ್ಟಾರ್‍ ನಿರ್ಮಾಪಕನ ಪುತ್ರ ಹಾಗೂ ರಕುಲ್ ಪ್ರೀತ್ ಸಿಂಗ್ ಸುಮಾರು ವರ್ಷಗಳ ಕಾಲ ಡೇಟ್ ಸಹ ಮಾಡಿದ್ದರಂತೆ. ಆ ನಟ ಬೇರೆ ಯಾರೂ ಅಲ್ಲ ರಾಣಾ ದಗ್ಗುಬಾಟಿಯಂತೆ. ಸುಮಾರು ಎರಡು ವರ್ಷಗಳ ಕಾಲ ರಾಣಾ ಹಾಗೂ ರಕುಲ್ ಡೇಟ್ ಮಾಡಿದ್ದರಂತೆ. ಆ ಸಮಯದಲ್ಲಿ ಈ ಬಗ್ಗೆ ದೊಡ್ಡ ಮಟ್ಟದಲ್ಲೇ ಸುದ್ದಿಗಳು ವೈರಲ್ ಆಗಿತ್ತು. ಆದರೆ ಈ ಬಗ್ಗೆ ಅವರು ಈ ಬಗ್ಗೆ ಕ್ಲಾರಿಟಿ ಕೊಟ್ಟಿರಲಿಲ್ಲ. ಸೀಕ್ರೇಟ್ ಆಗಿ ಪಬ್ಸ್, ಪಾರ್ಟಿಗಳಲ್ಲಿ ಎಂಜಾಯ್ ಮಾಡಿದ್ದರಂತೆ. ಬಳಿಕ ರಕುಲ್ ಹಾಗೂ ರಾಣಾ ನಡುವೆ ವಿಬೇದಗಳು ಹುಟ್ಟಿಕೊಂಡು ಅವರಿಬ್ಬರು ಬೇರೆಯಾದರಂತೆ. ಇನ್ನೂ ಈ ಸುದ್ದಿಗಳ ಬಗ್ಗೆ ಅಧಿಕೃತ ಅಪ್ಡೇಟ್ ಇಲ್ಲದೇ ಇದ್ದರೂ ಸಹ ಆ ಸಮಯದಲ್ಲಿ ಸಖತ್ ವೈರಲ್ ಆಗಿತ್ತು.

ಸದ್ಯ ರಕುಲ್ ಬಾಲಿವುಡ್ ನಟ ಕಂ ನಿರ್ಮಾಪಕ ಜಾಕಿ ಭಗ್ನಾನಿ ಎಂಬಾತನೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಈ ಬಗ್ಗೆ ಅವರೇ ಅಧಿಕೃತವಾಗಿ ತಿಳಿಸಿದ್ದಾರೆ. ಶೀಘ್ರದಲ್ಲೇ ಈ ಜೋಡಿಯ ಮದುವೆ ಸಹ ನೆರವೇರಲಿದೆಯಂತೆ. ಇನ್ನೂ ರಕುಲ್ ಪ್ರೀತ್ ಇದೀಗ ಸೌತ್ ಅಂಡ್ ನಾರ್ತ್ ನಲ್ಲೂ ಕ್ರೇಜಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top