ಅಂತಹವರೊಂದಿಗೆ ವಾದನೆ ಮಾಡುವುದು ವ್ಯರ್ಥ ಎಂದ ಮಂಚು ಲಕ್ಷ್ಮಿ, ವೈರಲ್ ಆದ ಕಾಮೆಂಟ್ಸ್….!

Follow Us :

ಕೆಲವು ದಿನಗಳಿಂದ ತೆಲುಗು ಸಿನಿರಂಗದ ಮಂಚು ಕುಟುಂಬದ ಮಂಚು ಬ್ರದರ್ಸ್ ನಡುವೆ ವಿಬೇದಗಳು ಉಂಟಾಗಿ ಗಲಾಟೆಗಳು ನಡೆಯುತ್ತಿವೆ ಎಂದು ಸುದ್ದಿಗಳು ಹರಿದಾಡುತ್ತಲೇ ಇದೆ. ಇದಕ್ಕೆ ಮತಷ್ಟು ಪುಷ್ಟಿ ನೀಡುವಂತೆ ಕೆಲವು ದಿನಗಳ ಹಿಂದೆ ಮಂಚು ಮನೋಜ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಮಂಚು ವಿಷ್ಣು ಗಲಾಟೆ ಮಾಡುವ ಸನ್ನಿವೇಶಗಳು ಇತ್ತು. ಬಳಿಕ ಅದೆಲ್ಲಾ ಸುಳ್ಳು, ರಿಯಾಲಿಟಿ ಶೋ ಗಾಗಿ ಫ್ರಾಂಕ್ ವಿಡಿಯೋ ಎಂದು ಮಂಚು ವಿಷ್ಣು ಕವರ್‍ ಮಾಡಲು ಹೊರಟರು. ಅದೂ ಸಹ ಸುಳ್ಳು ಎಂದು ಹೇಳಲಾಗುತ್ತಿದೆ. ಇದೀಗ ಮಂಚು ಲಕ್ಷ್ಮಿ ಸಹ ಪೋಸ್ಟ್ ಒಂದನ್ನು ಮಾಡಿದ್ದು ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಮತಷ್ಟು ಬಲ ತಂದಿದೆ.

ಮಂಚು ಬ್ರದರ್ಸ್ ನಡುವೆ ವಿಬೇದಗಳ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಮಂಚು ಫ್ಯಾಮಿಲಿಯಿಂದ ಬರುವಂತಹ ಪೋಸ್ಟ್ ಗಳನ್ನು ಜನ ಸದಾ ಗಮನಿಸುತ್ತಿದ್ದಾರೆ. ಅವರು ಪೋಸ್ಟ್ ಮಾಡಿದರೇ ಸಾಕು ಹಾಗೆ ವೈರಲ್ ಆಗಿಬಿಡುತ್ತದೆ. ಮನೋಜ್ ಸಹ ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ವಿಷ್ಣು ಮನೋಜ್ ಸಂಬಂಧಿಕರ ಮನೆಗೆ ಹೋಗಿ ಗಲಾಟೆ ಮಾಡಿದ ವಿಡಿಯೋ ಹಂಚಿಕೊಂಡ ಬಳಿಕ ಅವರ ಮತಷ್ಟು ರೂಮರ್‍ ಗಳು ಹರಿದಾಡಿದವು. ಬಳಿಕ ಮೋಹನ್ ಬಾಬು ರವರ ಸೂಚನೆ ಮೇರೆಗೆ ಆ ವಿಡಿಯೋ ಡಿಲೀಟ್ ಮಾಡಿದ್ದಾರೆ. ಬಳಿಕ ವಿಷ್ಣು ರನ್ನು ಟಾರ್ಗೆಟ್ ಮಾಡಿ ಮನೋಜ್ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಪರೋಕ್ಷವಾಗಿ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ. ಆದರೆ ವಿಷ್ಣು ಈ ವಿವಾದವನ್ನು ಕವರ್‍ ಮಾಡಲು ಇದೆಲ್ಲಾ ಫ್ರಾಂಕ್, ಹೌಸ್ ಆಫ್ ಮಂಚೂಸ್ ಎಂಬ ರಿಯಾಲಿಟಿ ಶೋನ ಪ್ರೊಮೋ ಎಂದು ಪೋಸ್ಟ್ ಮಾಡಿದ್ದರು. ಆದರೆ ಜನರು ಮಾತ್ರ ಇದ್ಯಾವುದನ್ನೂ ನಂಬುತ್ತಿಲ್ಲ ಎಂದೇ ಹೇಳಬಹುದು.

ಇದೀಗ ಮಂಚು ಲಕ್ಷ್ಮೀ ಸಹ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಇಂಟ್ರಸ್ಟಿಂಗ್ ಪೋಸ್ಟ್ ಮಾಡಿದ್ದಾರೆ. ಅದರಲ್ಲಿರುವಂತೆ ಒಬ್ಬರೊಂದಿಗೆ ನೀವು ವಾದಿಸುವ ಮುಂಚೆ ಅವರಿಗೆ ಆ ವಿಚಾರದ ಮೇಲೆ ಅವಗಾಹನೆ ಇದೆಯಾ, ವಿವಿಧ ರೀತಿಯಲ್ಲಿ ನೋಡುವ ಪರಿಜ್ಞಾನ ಇದೆಯಾ ಎಂದು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಲಬೇಕು. ಇಲ್ಲವಾದಲ್ಲಿ ಅಂತಹವರೊಂದಿಗೆ ವಾದ ಮಾಡುವುದರಿಂದ ಯಾವುದೇ ಪ್ರಯೋಜನ ಇರುವುದಿಲ್ಲ ಎಂದು ಕೋಟ್ ಶೇರ್‍ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಂಚು ಲಕ್ಷ್ಮೀ ಈ ಕೋಟ್ ಯಾರನ್ನು ಉದ್ದೇಶಿಸಿ ಪೋಸ್ಟ್ ಮಾಡಿದ್ದಾರೆ ಎಂಬ ಚರ್ಚೆಗಳು ಸೋಷಿಯಲ್ ಮಿಡಿಯಾದಲ್ಲಿ ಶುರುವಾಗಿದೆ. ಇನ್ನೂ ಅನೇಕರು ಮಂಚು ಬ್ರದರ್ಸ್ ನಡುವೆ ನಡೆದ ಗಲಾಟೆಗಳ ಬಗ್ಗೆ ಲಕ್ಷ್ಮೀ ಈ ಪೋಸ್ಟ್ ಮಾಡಿದ್ದಾರೆ ಎಂಬ ಅಭಿಪ್ರಾಯಗಳನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಮಂಚು ಮನೋಜ್ ಹಾಗೂ ಭೂಮಾ ಮೋನಿಕಾರೆಡ್ಡಿ ಮದುವೆ ಇತ್ತೀಚಿಗೆ ನಡೆದಿದ್ದು. ಈ ಮದುವೆಯ ಎಲ್ಲಾ ಜವಾಬ್ದಾರಿಯನ್ನು ಮಂಚು ಲಕ್ಷ್ಮೀ ನೋಡಿಕೊಂಡಿದ್ದರು. ಮದುವೆಗೂ ಸಹ ಮಂಚು ವಿಷ್ಣು ಹಾಗೂ ಮೋಹನ್ ಬಾಬು ಸಹ ಕೊಂಚ ದೂರವೇ ಇದ್ದರು. ಮೂಹೂರ್ತ ಸಮಯದಲ್ಲಿ ಮಾತ್ರ ಬಂದರು. ಸದ್ಯ ಮಂಚು ಬ್ರದರ್ಸ್ ನಡುವಣ ಈ ವಿವಾದಗಳು ಎಂದಿಗೆ ಕೊನೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.