ಶಾರುಖ್ ಬಗ್ಗೆ ರಾಣಿ ಮುಖರ್ಜಿ ಇಂಟ್ರಸ್ಟಿಂಗ್ ಕಾಮೆಂಟ್ಸ್, 80 ವರ್ಷ ಬಂದರೂ ಶಾರುಖ್ ಜೊತೆ ರೊಮ್ಯಾನ್ಸ್ ಗೆ ಸಿದ್ದ ಎಂದ ನಟಿ….!

Follow Us :

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟ ಶಾರುಖ್ ಖಾನ್ ವಯಸ್ಸಾದರೂ ಸಹ ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಳ್ಳುತ್ತಿದ್ದಾರೆ. 60 ವರ್ಷ ವಯಸ್ಸಿಗೆ ಹತ್ತಿರವಿರುವ ಶಾರುಖ್ ಗೆ ಇಂದಿಗೂ ಸಹ ಅನೇಕ ಯುವತಿಯರು ಫಿದಾ ಆಗಿದ್ದಾರೆ. ಅನೇಕರ ಕ್ರಷ್ ಸಹ ಆಗಿದ್ದಾರೆ. ಸಿಕ್ಸ್ ಪ್ಯಾಕ್ ಮೂಲಕ ಅನೇಕ ಯುವತಿಯರ ಮನಸ್ಸು ಕದಿಯುತ್ತಿದ್ದಾರೆ. ಇದೀಗ ಬಾಲಿವುಡ್ ನ ಸೀನಿಯರ್‍ ನಟಿ ರಾಣಿ ಮುಖರ್ಜಿ ಶಾರುಖ್ ಖಾನ್ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದು, ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಬಾಲಿವುಡ್ ರಂಗದಲ್ಲಿ ಒಳ್ಳೆಯ ಜೋಡಿಯಾಗಿ ಖ್ಯಾತಿ ಪಡೆದುಕೊಂಡವರಲ್ಲಿ ಶಾರುಖ್ ಖಾನ್ ಹಾಗೂ ರಾಣಿ ಮುಖರ್ಜಿ ಜೋಡಿ ಒಂದಾಗಿದೆ. ಅನೇಕ ಸಿನೆಮಾಗಳಲ್ಲಿ ಈ ಜೋಡಿ ಮೋಡಿ ಮಾಡಿದೆ ಎಂದೇ ಹೇಳಬಹುದಾಗಿದೆ. ಈ ಜೋಡಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡರೇ ಸಾಕು ಥಿಯೇಟರ್‍ ಗಳಲ್ಲಿ ಸಿಳ್ಳೆಗಳು, ಕೇಕೆಗಳು ಆರ್ಭಟಿಸುತ್ತಿದ್ದವು. ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಇನ್ನೂ ರಾಣಿ ಮುಖರ್ಜಿ ಸದ್ಯ ವುಮೆನ್ ಸೆಂಟ್ರಿಕ್ ಸಿನೆಮಾಗಳಿಗೆ ಸೀಮಿತರಾಗಿದ್ದಾರೆ. ಇನ್ನೂ ಶಾರುಖ್ ಯಂಗ್ ನಟನಂತೆ ಸಿನೆಮಾಗಳಲ್ಲಿ ನಟಿಸುತ್ತಾ ಮತಷ್ಟು ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಇತ್ತಿಚಿಗೆ ಶಾರುಖ್ ಅಭಿನಯದ ಪಠಾನ್ ಸಿನೆಮಾ ಭಾರಿ ಸಕ್ಸಸ್ ಕಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಇದೀಗ ರಾಣಿ ಮುಖರ್ಜಿ ಶಾರುಖ್ ಕುರಿತು ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ.

ಈ ಹಿಂದೆ ಶಾರುಖ್ ಖಾನ್ ಹಾಗೂ ರಾಣಿ ಮುಖರ್ಜಿ ಜೋಡಿಯಾಗಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಅವರಿಬ್ಬರ ಕಾಂಬಿನೇಷನ್ ನಲ್ಲಿ ಕುಚ್ ಕುಚ್ ಹೋತಾ ಹೈ, ಚಲ್ತೆ ಚಲ್ತೆ, ಪಹೇಲಿ, ಕಭಿ ಅಲ್ವಿದಾ ನಾ ಕಹ್ನಾ ಸೇರಿದಂತೆ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಬಾಲಿವುಡ್ ಸಿನಿರಂಗವನ್ನು ಆಳಿದ್ದರು. ಇನ್ನೂ ರಾಣಿ ಮುಖರ್ಜಿ ಹಾಗೂ ಶಾರುಖ್ ನಡುವೆ ಒಳ್ಳೆಯ ಸ್ನೇಹ ಬಾಂದವ್ಯ ಸಹ ಇದೆ. ಇನ್ನೂ ರಾಣಿ ಮುಖರ್ಜಿ ಅಭಿನಯದ ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಒಳ್ಳೆಯ ರೆಸ್ಪಾನ್ಸ್ ಸಹ ಪಡೆದುಕೊಂಡಿದೆ. ಇನ್ನೂ ರಾಣಿ ಮುಖರ್ಜಿ ಹಾಗೂ ಆ ಸಿನೆಮಾ ತಂಡಕ್ಕೆ ಶಾರುಖ್ ಅಭಿನಂದನೆಗಳನ್ನು ತಿಳಿಸುತ್ತಾ ಟ್ವೀಟ್ ಮಾಡಿದ್ದರು. ಇನ್ನೂ ಈ ಸಿನೆಮಾ ಸಕ್ಸಸ್ ಪ್ರಮೋಷನ್ ಕಾರ್ಯಕ್ರಮದಲ್ಲಿ ರಾಣಿ ಮುಖರ್ಜಿ ಶಾರುಖ್ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಇನ್ನೂ ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಸಿನೆಮಾದ ಸಕ್ಸಸ್ ಪ್ರಮೋಷನ್ ನಲ್ಲಿ ರಾಣಿ ಮುಖರ್ಜಿಗೆ ಕೆಲವೊಂದು ಪ್ರಶ್ನೆಗಳು ಎದುರಾಗಿದೆ. ಶಾರುಖ್ ಖಾನ್ ರವರ ಬಗ್ಗೆ ಮಿಡಿಯಾ ಪ್ರಶ್ನೆ ಮಾಡಿದೆ. ರಾಣಿ ಮುಖರ್ಜಿ ಮಾತನಾಡುತ್ತಾ, ನಾನು ರೈಟರ್ಸ್ ಗಳಿಗೆ ಈಗಲೇ ಹೇಳುತ್ತಿದ್ದೇನೆ. ಒಳ್ಳೆಯ ಲವ್ ಸ್ಟೋರಿ, ಒಂದು ಮೆಚ್ಯೂರ್‍ ಲವಸ್ಟೋರಿ ನನಗೂ ಹಾಗೂ ಶಾರುಖ್ ರವರಿಗಾಗಿ ಬರೆಯಿರಿ ನಾವಿಬ್ಬರು ನಟಿಸುತ್ತೇವೆ. ಶಾರುಖ್ ಜೊತೆಗೆ ಯಂಗ್ ಆಗಿರುವಾಗ ಅಲ್ಲ ಈಗಲೂ ಸಹ ನಟಿಸಲು ಸಿದ್ದವಾಗಿದ್ದೇನೆ. ನನಗೆ 80 ವರ್ಷ ಬಂದರೂ ಶಾರುಖ್ ಜೊತೆ ರೊಮ್ಯಾನ್ಸ್ ಮಾಡಲು ನಾನು ಸಿದ್ದ ಎಂದು ರಾಣಿ ಮುಖರ್ಜಿ ಹೇಳಿದ್ದಾರೆ. ಇನ್ನೂ ರಾಣಿ ಮುಖರ್ಜಿ ಹೇಳಿಕೆಗಳು ವೈರಲ್ ಆಗುತ್ತಿದ್ದು, ಶೀಘ್ರದಲ್ಲೇ ಶಾರುಖ್ ಅಂಡ್ ಮುಖರ್ಜಿ ಕಾಂಬನೇಷನ್ ನಲ್ಲಿ ಸಿನೆಮಾ ಬರಲಿ ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ.