ಉಬರ್ ಬುಕ್ ಮಾಡಿದ್ರೆ, ಬಿಲ್ ಬಂದಿದ್ದು 7.66 ಕೋಟಿ ಬುಲ್, ಶಾಕ್ ಆದ ಪ್ರಯಾಣಿಕಾ, ವಿಡಿಯೋ ವೈರಲ್…..!

Follow Us :

ಇತ್ತೀಚಿಗೆ ಆಪ್ ಆಧಾರಿತ ಕ್ಯಾಬ್ ಸೇವೆಗಳನ್ನು ಪ್ರಯಾಣಿಕರು ಹೆಚ್ಚಾಗಿ ಬಳಸುತ್ತಿರುತ್ತಾರೆ. ಇದೀಗ ಉಬರ್‍ ಕ್ಯಾಬ್ ನಲ್ಲಿ ಪ್ರಯಾಣಿಸಲು ಬುಕ್ ಮಾಡಿದ ಗ್ರಾಹಕರೊಬ್ಬರಿಗೆ ಬಿಲ್ ನೋಡಿ ಶಾಕ್ ಆಗಿದ್ದಾರೆ. ಬುಕ್ಕಿಂಗ್ ಸಮಯದಲ್ಲಿ ಪ್ರಯಾಣಿಕೆ 60 ರೂಪಾಯಿ ಪ್ರಯಾಣದ ದರ ತೋರಿಸಿದೆ. ಆದರೆ ಪ್ರಯಾಣ ಮುಗಿದ ಬಳಿಕ ಆಪ್ ನಲ್ಲಿ ಬರೊಬ್ಬರಿ 7.66 ಕೋಟಿ ಬಿಲ್ ತೋರಿಸಿದೆ. ಅದನ್ನು ನೋಡಿದ ಪ್ರಯಾಣಿಕ ಶಾಕ್ ಆಗಿರುವ ಘಟನೆ ನೋಯ್ದಾದಲ್ಲಿ ನಡೆದಿದೆ.

ಇತ್ತೀಚಿಗೆ ನೋಯ್ಡಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ದೀಪಕ್ ತೆಂಗೂರಿಯಾ ಎಂಬಾತನ ಆಟೋ ಬುಕ್ ಮಾಡಿಕೊಂಡಿದ್ದಾರೆ. ಬುಕ್ಕಿಂಗ್ ವೇಳೆ ಪ್ರಯಾಣ ದರ 62 ರೂಪಾಯಿ ತೋರಿಸಿದೆ. ಆದರೆ ಪ್ರಯಾಣ ಅಂತ್ಯಗೊಳ್ಳುವ ಮುಂಚೆ ಬರೊಬ್ಬರಿ 7.66 ಕೋಟಿ ದರ ತೋರಿಸಿದೆ. ಈ ವಿಚಾರವನ್ನು ದೀಪಕ್ ಸ್ನೇಹಿತ ಆಶಿಶ್ ಮಿಶ್ರಾ ಎಂಬಾತ ತಮ್ಮ ಎಕ್ಸ್ (ಟ್ವಿಟರ್‌) ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಇನ್ನೂ ವಿಡಿಯೋದಲ್ಲಿ ಇಬ್ಬರೂ ಉಬರ್‍ ಪ್ರಯಾಣದ ದರ ನೋಡಿ ಚರ್ಚೆ ಮಾಡುತ್ತಿದ್ದಾರೆ. ಬಿಲ್ ಎಷ್ಟು ತೋರಿಸುತ್ತಿದೆ ಎಂದು ಆಶಿಶ್ ಕೇಳುತ್ತಿದ್ದು, ಅದಕ್ಕೆ ದೀಪಕ್ 7,66,83,762 ರೂಪಯಿ ಎಂದು ಶಾಕ್ ನಿಂದ ಹೇಳುತ್ತಿದ್ದಾರೆ.

ವೈಟಿಂಗ್ ಶುಲ್ಕವಾಗಿ 8,99,09189 ರೂ ವಿಧಿಸಲಾಗಿದೆ. 75 ರೂಪಾಯಿ ಪ್ರಮೋಷನ್ ಶುಲ್ಕವಾಗಿ ಕಡಿತಗೊಳಿಸಲಾಗಿದೆ. ಚಾಲಕ ಬಂದ ಬಳಿಕ ನಾವು ಕಾಯುವಂತೆ ಮಾಡಿಯೇ ಇಲ್ಲ ಅಷ್ಟೊಂದು ಬಿಲ್ ಹಾಕಬಾರದು ಎಂದು ದೀಪಕ್ ಹೇಳುತ್ತಿದ್ದಾರೆ. ಒಂದು ವೇಳೆ ಚಂದ್ರಯಾನಕ್ಕೆ ಪ್ರಯಾಣ ಮಾಡಿದರು ಇಷ್ಟೊಂದು ಬಿಲ್ ಬರುತ್ತಿರಲಿಲ್ಲವೇನೋ ಎಂದು ದೀಪಕ್ ವಿಡಿಯೋದಲ್ಲಿ ಹೇಳುತ್ತಿದ್ದಾರೆ. ಸದ್ಯ ಈ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜೊತೆಗೆ ಉಬರ್‍ ಇಂಡಿಯಾ ಸಹ ಈ ಕುರಿತು ಕ್ಷಮೆ ಕೇಳಿದ್ದು, ಈ ಕುರಿತು ತನಿಖೆ ನಡೆಸುವುದಾಗಿ ಹಾಘೂ ಮುಂದಿನ ಅಪ್ಡೇಟ್ ನೊಂದಿಗೆ ನಿಮ್ಮ ಮುಂದೆ ಬರುತ್ತೇವೆ ಎಂದು ಪ್ರತಿಕ್ರಿಯೆ ನೀಡಿದೆ ಎಂದು ತಿಳಿದುಬಂದಿದೆ.