ಅಪ್ರಾಪ್ತ ಹೆಂಡತಿಯನ್ನು ಕೊಂದಿದ್ದು ಸಾಲದು ಎಂಬಂತೆ, ಇಡಿ ರಾತ್ರಿ ಶವದ ಜೊತೆಗೆ ಮಲಗಿದ್ದಾನೆ ಗಂಡ…..!

Follow Us :

ಗಂಡ-ಹೆಂಡತಿ ನಡುವೆ ಏರ್ಪಟ್ಟ ಜಗಳದಿಂದ ಆಕ್ರೋಷಗೊಂಡ ಗಂಡ ತನ್ನ ಪತ್ನಿಯನ್ನು ಕೊಂದು ಶವದ ಜೊತೆ ಇಡೀ ರಾತ್ರಿ ಮಲಗಿದ ಘಟನೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ 2021 ರಲ್ಲಿ ಹದಿಮೂರು ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಅಪ್ರಾಪ್ತ ಹೆಂಡತಿಯನ್ನು ಗಂಡ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಆರೋಪಿ ಕಳೆದ 2021 ರಲ್ಲಿ ಅಪ್ರಾಪ್ತೆ ಬಾಲಕಿಯನ್ನು ಮದುವೆಯಾಗಿದ್ದು, ಈ ಜೋಡಿಗೆ ಒಂದು ಮಗು ಸಹ ಇದೆ. ಆದರೆ ಕೆಲವು ದಿನಗಳಿಂದ ಅಪ್ರಾಪ್ತೆ ಬಾಲಕಿ ಆತನೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿರಲ್ಲ ಹಾಗೂ ಮೊದಲಿನಂತೆ ಲೈಂಗಿಕವಾಗಿ ತೊಡಗುತ್ತಿಲ್ಲ ಎಂಬ ಕಾರಣದಿಂದ ಆಕೆಯೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ಈ ಜಗಳ ಅತಿರೇಖಕ್ಕೆ ಹೋಗಿ ಮಾ.27ರ ರಾತ್ರಿ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಸತ್ತ ಹೆಂಡತಿಯ ಶವ ಜೊತೆ ಇಡೀ ರಾತ್ರಿ ಮಲಗಿದ್ದಾನೆ. ಬೆಳಿಗ್ಗೆ ಎದ್ದು ಹೆಂಡತಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಹೆಂಡಿಗೆ ಆರೋಗ್ಯ ಸರಿಯಿಲ್ಲ, ಜ್ವರ ಬಂದಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾನೆ.

ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ಅನುಮಾನಗೊಂಡ ವೈದ್ಯರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಆರೋಪಿಯ ವರ್ತನೆ ಕಂಡ ಪೊಲೀಸರಿಗೆ ಅನುಮಾನ ಬಂದಿದ್ದು, ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ ತನ್ನ ಪತ್ನಿಯನ್ನು ಹತ್ಯೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಜೈಲಿಗೆ ಹಾಕಿದ್ದಾರೆ.