ಐದು ದಿನಗಳಿಂದ ಊಟ ಸಿಗದ ಕಾರಣ ಹಸಿವು ತಾಳಲಾರದೆ ಸತ್ತ ಬೆಕ್ಕಿನ ಮಾಂಸ ತಿಂದ ಯುವಕ…..!

Follow Us :

ಹಸಿವನ್ನು ತಾಳಲಾರದೇ ಯುವಕನೋರ್ವ ಸತ್ತ ಬೆಕ್ಕಿನ ಹಸಿ ಮಾಂಸವನ್ನು ಸೇವಿಸಿದ ಆಘಾತಕಾರಿ ಘಟನೆಯೊಂದು ಕೇರಳದ ಕುಟ್ಟಿಪುರಂನಲ್ಲಿ ನಡೆದಿದೆ. ಕುಟ್ಟಿಪುರಂ ಬಸ್ ನಿಲ್ದಾಣದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಅಸ್ಸಾಂ ಯುವಕ ಹಸಿವು ತಾಳಲಾರದೆ ಬೆಕ್ಕಿನ ಹಸಿ ಮಾಂಸ ತಿಂದಿದ್ದಾನೆ. ಅದನ್ನು ನೋಡಿದ ಅಕ್ಕಪಕ್ಕದವರು ಏಕೆ ಎಂದು ಕೇಳಿದರೇ ನನಗೆ ಹಸಿವಾಗಿದೆ, ಐದು ದಿನಗಳಿಂದ ಏನು ಸೇವಿಸಿಲ್ಲ ಎಂದು ಉತ್ತರ ನೀಡಿದ್ದಾನೆ ಎಂದು ತಿಳಿದುಬಂದಿದೆ.

ನೋಡಲು ಒಳ್ಳೆಯ ಬಟ್ಟೆಯನ್ನು ಹಾಕಿಕೊಂಡಿದ್ದ ಯುವಕ ಕೇರಳದ ಕುಟ್ಟಿಪುರಂ ಬಸ್ ನಿಲ್ದಾಣದಲ್ಲಿದ್ದಾನೆ. ಈ ವೇಳೆ ಆತ ಸತ್ತ ಬೆಕ್ಕಿನ ಮಾಂಸ ತಿನ್ನುತ್ತಿದ್ದನಂತೆ. ಅದನ್ನು ನೋಡಿದ ಅಲ್ಲಿದ್ದವರು, ಅದು ಬೆಕ್ಕಿನ ಮಾಂಸ ಎಂದು ಗುರ್ತಿಸಿ ಅದನ್ನು ತಿನ್ನಬೇಡಿ, ಅದು ಸತ್ತಿದೆ, ದುರ್ವಾಸನೆ ಸಹ ಬರುತ್ತಿದೆ ಎಂದು ಹೇಳಿದ್ದಾರೆ. ಆದರೂ ಸಹ ಆ ಯುವಕ ತಿನ್ನುವುದನ್ನು ಮಾತ್ರ ನಿಲ್ಲಿಸಿಲ್ಲ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆತನಿಗೆ ಹಣ್ಣು, ತಿಂಡಿ ನೀಡಿದ್ದಾರೆ. ಆತ ಅದನ್ನು ಸೇವಿಸಿದ್ದಾನೆ. ಏಕೆ ಸತ್ತ ಬೆಕ್ಕನ್ನು ತಿನ್ನುತ್ತಿದ್ದೆ ಎಂದು ಕೇಳಿದಕ್ಕೆ, ಕಳೆದ ಐದು ದಿನಗಳಿಂದ ಏನು ತಿಂದಿಲ್ಲ. ಆದರೆ ನಾವು ತಂದುಕೊಟ್ಟ ತಿಂಡಿ ತಿಂದು ಅಲ್ಲಿಂದ ಹೊರಟು ಹೋದ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಇನ್ನೂ ಆ ಯುವಕನನ್ನು ಅಸ್ಸಾಂ ಮೂಲದವನು ಎಂದು ಹೇಳಲಾಗಿದೆ. ಆತನಿಗೆ ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆ ಸಹ ಇದೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ. ಆ ಯುವಕನನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನ ಮಾಡಲಾಯಿತಾದರೂ ಅದು ಸಾಧ್ಯವಾಗಲಿಲ್ಲ. ಆಸ್ಪತ್ರೆಗೆ ಬರಲು ಕೇಳುತ್ತಿದ್ದಂತೆ ಆತ ಯಾರಿಗೂ ಹೇಳದೇ ಅಲ್ಲಿಂದ ಹೋರಟು ಹೋಗಿದ್ದಾನೆ. ಬಳಿಕ ಆತನನ್ನು ಹುಡುಕಿ ವಿಚಾರಣೆ ಮಾಡಿದಾಗ ಆತ ಅಸ್ಸಾಂ ಮೂಲದವನೆಂದು ತಿಳಿಸಿದ್ದಾನೆ. ಯುವಕ ಸಹೋದರನ ದೂರವಾಣಿ ಸಂಖ್ಯೆ ಪಡೆದು ಕರೆ ಮಾಡಲಾಗಿದೆ. ಆತ ಚೆನೈನಲ್ಲಿ ಕೆಲಸ ಮಾಡುತ್ತಿದ್ದಾನಂತೆ. ಯುವಕ ನೀಡಿದ ಮಾಹಿತಿ ಎಲ್ಲಾ ಸರಿಯಾಗಿದ್ದು, ಆತನ ಕುಟುಂಬಸ್ಥರು ಬಂದ ಬಳಿಕ ಅವರಿಗೆ ಒಪ್ಪಿಸುವುದಾಗಿ ಪೊಲೀಸರ ಮಾಹಿತಿಯಿಂದ ತಿಳಿದುಬಂದಿದೆ.