Film News

ಆ ಸಿನೆಮಾ ಮಾಡಿದ್ದಕ್ಕೆ ನನ್ನನ್ನು ವೇಶ್ಯೆ ಎಂದು, ಅಸಭ್ಯಕರವಾಗಿ ಟ್ರೋಲ್ ಮಾಡಿದರು ಎಂದ ನಟಿ ಆದಾ ಶರ್ಮಾ……!

ಕಳೆದ ವರ್ಷ ತೆರೆಕಂಡ ದಿ ಕಾಶ್ಮೀರಿ ಫೈಲ್ಸ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಆದಾ ಶರ್ಮಾ ಈ ಸಿನೆಮಾದ ಬಳಿಕ ತುಂಬಾನೆ ಸುದ್ದಿಯಾದರು. ಈ ಸಿನೆಮಾ ಕಾರಣದಿಂದ ಆಕೆಗೆ ಬೆದರಿಕೆ ಸಹ ಬಂದಿತ್ತು ಎಂಬ ಸುದ್ದಿಯನ್ನು ಕೇಳಿದ್ದವು. ಜೊತೆಗೆ ಈ ಸಿನೆಮಾದಲ್ಲಿನ ಆಕೆಯ ನಟನೆಗೆ ಅನೇಕರು ಫಿದಾ ಆಗಿದ್ದರೇ, ಮತ್ತೆ ಕೆಲವರು ಆಕೆಯ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಇದೀಗ ಆದಾ ಶರ್ಮಾ ತನ್ನ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡಿದ ಬಗ್ಗೆ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ.

ನಟಿ ಆದಾ ಶರ್ಮಾ 1920 ಎಂಬ ಹಿಂದಿ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು, ಕಡಿಮೆ ಸಮಯದಲ್ಲೇ ಸ್ಟಾರ್‍ ನಟರ ಜೊತೆ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಡೇರಿಂಗ್ ಡೈರೆಕ್ಟರ್‍ ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬಂದ ಹಾರ್ಟ್ ಅಟ್ಯಾಕ್ ಎಂಬ ಸಿನೆಮಾದ ಮೂಲಕ ತೆಲಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗಿನಲ್ಲೂ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿದರೂ ಸ್ಟಾರ್‍ ಡಂ ಪಡೆದುಕೊಳ್ಳಲು ವಿಫಲರಾದರು. ಅದರಲ್ಲೂ ಆಕೆ ಹೆಚ್ಚಾಗಿ ಸೆಕೆಂಡ್ ಹಿರೋಯಿನ್ ಪಾತ್ರಗಳಲ್ಲಿ ನಟಿಸಿದ್ದರು. ಸದ್ಯ ಗ್ಲಾಮರ್‍ ಪಾತ್ರಗಳನ್ನು ಪಕ್ಕಕ್ಕಿಟ್ಟು ಕಟೆಂಟ್ ಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ತೆರೆಕಂಡ ದಿ ಕೇರಳ ಸ್ಟೋರಿ ಸಿನೆಮಾದ ಮೂಲಕ ಭಾರಿ ಹಿಟ್ ಪಡೆದುಕೊಂಡರು. ಇದೀಗ ಆಕೆ ಬಸ್ತರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನೂ ಇತ್ತೀಚಿಗೆ ನಡೆದ ಸಂರ್ದಶನವೊಂದರಲ್ಲಿ ಆದಾ ಶರ್ಮಾ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಏನೇ ಪೋಸ್ಟ್ ಮಾಡಿದರೂ ಸಹ ಆ ಸಿನೆಮಾವನ್ನು ಉದ್ದೇಶಿಸಿ ಟ್ರೋಲ್ ಮಾಡುತ್ತಿದ್ದಾರೆ.  ದಿ ಕೇರಳ ಸ್ಟೋರಿ ಸಿನೆಮಾ ಸಮಯದಲ್ಲಿ ಆ ಸಿನೆಮಾ ನೋಡದೇ ಸಿನೆಮಾದ ಬಗ್ಗೆ ಮಾತನಾಡಿದ್ದರು.  ಇದೀಗ ಬಸ್ತರ್‍ ನಂತಹ ಸಿನೆಮಾದ ಬಗ್ಗೆ ಸಹ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದೀರಾ. ನಿಮಗೆ ಸೋಷಿಯಲ್ ಮಿಡಿಯಾದಲ್ಲಿ ಕಾಮೆಂಟ್ ಮಾಡು ಸ್ವತಂತ್ರ ಇದೆ, ಅದೇ ರೀತಿ ಬಸ್ತರ್‍ ನಂತಹ ಸಿನೆಮಾ ತೆಗೆಯುವಂತಹ ಹಕ್ಕು ಸಹ ನಮಗೆ ಇರುತ್ತದೆ. ಈ ವಿಚಾರ ಏಕೆ ಅರ್ಥ ಮಾಡಿಕೊಳ್ಳುವುದಿಲ್ಲ. ಈ ಸಿನೆಮಾ ನಾನು ನಟಿಸುತ್ತಿದ್ದೇನೆ ಎಂದು ತಿಳಿದ ಬಳಿಕ ನನ್ನ ಮೇಲೆ ಮತಷ್ಟು ನೆಗೆಟೀವ್ ಕಾಮೆಂಟ್ಸ್ ಬರುತ್ತಿದೆ. ನಾಣು ಸುಂದರವಾಗಿದ್ದರೂ, ಹೂವುಗಳ ಪೊಟೋ ಇಟ್ಟರೂ ಅದಕ್ಕೆ ಕೆಟ್ಟ ಕಾಮೆಂಟ್ ಮಾಡುತ್ತಿದ್ದಾರೆ. ವೇಶ್ಯೆ ಎಂಬ ಪದಗಳನ್ನು ಬಳಸಿ ಟ್ರೋಲ್ ಮಾಡುತ್ತಿದ್ದಾರೆ. ಸಿನೆಮಾ ನೋಡುವುಕ್ಕೂ ಮುಂಚೆ ವ್ಯಕ್ತಿಗಳ ಈ ರೀತಿಯ ಯೋಚನೆಗಳನ್ನು ನೋಡಿ ಬೇಸರವಾಗುತ್ತದೆ, ಬಳಿಕ ಆ ಕೋಪ ಕಡಿಮೆಯಾಗುತ್ತದೆ. ಎಂತಹ ಕಾಮೆಂಟ್ ಗಳು ಬಂದರು, ವಿಮರ್ಶೆ ಮಾಡಿದರು ನಾನು ಕಿವಿಗೆ ಹಾಕಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top