ಯಂಗ್ ಡೈರೆಕ್ಟರ್ ಅಟ್ಲಿ ವಿರುದ್ದ ವಂಚನೆ ಆರೋಪ, ನಟಿ ಸಾಕ್ಷಿ ಅಗರ್ವಾಲ್ ಶಾಕಿಂಗ್ ಕಾಮೆಂಟ್ಸ್……!

Follow Us :

ಸೌತ್ ಸಿನಿರಂಗದ ಹಲವು ಭಾಷೆಗಳಲ್ಲಿ ನಟಿಸಿ ಫೇಂ ಪಡೆದುಕೊಂಡ ನಟಿ ಸಾಕ್ಷಿ ಅಗರ್ವಾಲ್ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ. ಸೌಂದರ್ಯ ಅಭಿನಯ ಎರಡೂ ಇದ್ದರೂ ಸಹ ಆಕೆಗೆ ಸರಿಯಾದ ಅವಕಾಶಗಳು ಬರದೇ ಹಿಂದಿ ಬಿದ್ದಿದ್ದಾರೆ. ಇದೀಗ ಆಕೆ ಕಾಲಿವುಡ್ ಯಂಗ್ ಡೈರೆಕ್ಟರ್‍ ಅಟ್ಲಿ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಿರ್ದೇಶಕ ಅಟ್ಲಿ ನನಗೆ ಮೋಸ ಮಾಡಿದ್ದಾನೆ ಎಂದು ಸಂದರ್ಶನವೊಂದರಲ್ಲಿ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಉತ್ತರಾಖಂಡ್ ಮೂಲದ ಸಾಕ್ಷಿ ಅಗರ್ವಾಲ್ ತಮಿಳು, ಕನ್ನಡ, ಮಲಯಾಳಂ, ತೆಲುಗು ಸಿನೆಮಾಗಳ ಮೂಲಕ ಫೇ ಪಡೆದುಕೊಂಡರು. ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಕಾಲಾ ಸೇರಿದಂತೆ ಹಲವು ಸಿನೆಮಾಗಳಲ್ಲಿ ನಟಿಸಿದರು. ಆದರೆ ಆಕೆ ತಮಿಳು ಸಿನೆಮಾಗಳಲ್ಲೇ ಸ್ಥಿರವಾದರು. ರಾಜಾರಾಣಿ ಸಿನೆಮಾದ ಬಳಿಕ ಆಕೆಗೆ ಸರಿಯಾದ ಹಿಟ್ ಸಿಗಲಿಲ್ಲ ಎನ್ನಬಹುದು. ತಮಿಳಿನಲ್ಲಿ ಆಕೆ ನಟಿಸಿರುವಂತಹ ಎರಡು ಮೂರು ಸಿನೆಮಾಗಳು ಇನ್ನೂ ಬಿಡುಗಡೆಯಾಗಬೇಕಿದೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಅದರಲ್ಲೂ ತನ್ನ ಕೆರಿಯರ್‍ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಿರ್ದೇಶಕ ಅಟ್ಲಿ ಬಗ್ಗೆ ಸಹ ಸಾಕ್ಷಿ ಅಗರ್ವಾಲ್ ಕಾಮೆಂಟ್ಸ್ ಮಾಡಿದ್ದಾರೆ.

ನಟಿ ಸಾಕ್ಷಿ ಅಗರ್ವಾಲ್ ಸಂದರ್ಶನದಲ್ಲಿ ಭಾಗಿಯಾಗಿದ್ದು, ಈ ವೇಳೆ ತನ್ನ ಕೆರಿಯರ್‍ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ. ತನ್ನ ಮೊದಲನೇ ಸಿನೆಮಾದ ಸಮಯದಲ್ಲಾದ ಅನುಭವದ ಬಗ್ಗೆ ಮಾತನಾಡಿದ್ದಾರೆ. 2013ರಲ್ಲಿ ತಾನೂ ಮಾಡಲಿಂಗ್ ರಂಗದಲ್ಲಿರುವಾಗ ರಾಜಾ ರಾಣಿ ಸಿನೆಮಾದಲ್ಲಿ ನಟಿಸುವ ಅವಕಾಶ ಬಂತು. ಆದರೆ ಮೊದಲು ನನ್ನನ್ನು ಆಯ್ಕೆ ಮಾಡಿದ ಕಾಸ್ಟಿಂಗ್ ಏಜೆನ್ಸಿ ಈ ಸಿನೆಮಾದಲ್ಲಿ ನೀನೆ ಸೆಕೆಂಡ್ ಫೀಮೇಲ್ ಲೀಡ್ ಎಂದು, ನಟ ಆರ್ಯ ಪ್ರಧಾನ ಪಾತ್ರ ಎಂದು ಹೇಳಿದ್ದರು. ನಾನು ಅದನ್ನು ಕೇಳಿ ಆ ಸಿನೆಮಾದಲ್ಲಿ ನಟಿಸುವುದಕ್ಕೆ ಹೋದೆ. ಶಾಪಿಂಗ್ ಮಾಲ್ ನಲ್ಲಿ ಕೆಲವೊಂದು ದೃಶ್ಯಗಳಲ್ಲಿ ಸಹ ನಟಿಸಿದ್ದೆ. ಎರಡು ದಿನಗಳ ಬಳಿಕ ಶೂಟಿಂಗ್ ನಿಂದ ಒಂದು ಕರೆ ಸಹ ಬರಲಿಲ್ಲ. ಸಿನೆಮಾ ಶೂಟಿಂಗ್ ಪೂರ್ಣಗೊಂಡು ಸಿನೆಮಾ ಬಿಡುಗಡೆಯಾಗಿತ್ತು. ಸಿನೆಮಾ ನೋಡೋಕೆ ಹೋದಾಗ ನಾನು ಶಾಕ್ ಆದೆ. ನಾನು ನಟಿಸಿದ ದೃಶ್ಯಗಳೆಲ್ಲಾ ಕಟ್ ಆಗಿತ್ತು. ಎಡಿಟಿಂಗ್ ನಲ್ಲಿ ಎಲ್ಲಾ ತೆಗೆದುಹಾಕಿದ್ದರು. ಅವರು ಹೇಳೋದು ಒಂದು ಮಾಡೋದು ಒಂದು ನನಗೆ ಆಗ ಅರ್ಥವಾಯ್ತು.

ಆ ಸಮಯದಲ್ಲಿ ನನಗೆ ಪ್ರೊಡಕ್ಷನ್ ಕಂಪನಿಗಳ ಬಗ್ಗೆ ಹೆಚ್ಚು ತಿಳಿಯದು. ಏಕೆಂದರೇ ನಾನು ಅಷ್ಟಕ್ಖೂ ನಿರ್ದೇಶಕ ಅಟ್ಲಿ ಬಳಿ ಹೋಗಿ ನನ್ನ ಪಾತ್ರದ ಬಗ್ಗೆ ಚರ್ಚಿಸಲಿಲ್ಲ. ಅದು ನನ್ನ ತಪ್ಪು ಎಂದು ಹೇಳಿದ್ದರು. ಆ ಮಾದರಿಯಾಗಿ ಸಿನೆಮಾದಲ್ಲಿ ನನ್ನನ್ನು ತೆಗೆದುಕೊಳ್ಳುತ್ತೇವೆ ಎಂದು ಮೋಸ ಮಾಡಿದರು ಎಂದು ಸಾಕ್ಷಿ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.