ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಮನೆ ಖರೀದಿ ಮಾಡಿದ ನಟಿ ಆದಾ ಶರ್ಮಾ….!

Follow Us :

ಕಳೆದ ವರ್ಷ ತೆರೆಕಂಡ ದಿ ಕೇರಳ ಸ್ಟೋರಿ ಸಿನೆಮಾದ ಮೂಲಕ ಭಾರಿ ಫೇಂ ಪಡೆದುಕೊಂಡ ನಟಿ ಆದಾ ಶರ್ಮಾ ಇತ್ತಿಚಿಗೆ ಭಾರಿ ಸುದ್ದಿಯಾಗುತ್ತಿದ್ದಾರೆ. ಈ ಸಿನೆಮಾದ ಬಳಿಕ ಆಕೆಯ ವಿರುದ್ದ ತುಂಬಾನೆ ವಿಮರ್ಶೆಗಳು, ಬೆದರಿಕೆಗಳೂ ಸಹ ಬಂದವು. ಇದಿಗ ಆಕೆ ಮತ್ತೊಂದು ಕಾರಣದಿಂದ ಸುದ್ದಿಯಾಗಿದ್ದಾರೆ. ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ರವರು ಆತ್ಮಹತ್ಯೆ ಮಾಡಿಕೊಂಡ ಮನೆಯನ್ನು ಆದಾ ಶರ್ಮಾ ಖರೀಸಿದ್ದಾರೆ. ಈ ಕುರಿತು ಆಕೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ 2020 ಜೂನ್ 14 ರಂದು ಅವರ ಮುಂಬೈನ ಮೋಂಟ್ ಬ್ಲಾಂಕ್ ಅಪಾರ್ಟ್‌ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಮರಣದ ಬಳಿಕ ಈ ಫ್ಲಾಟ್ ಖಾಲಿಯಾಗಿತ್ತು. ಬೇರೆ ಯಾರೂ ಸಹ ಈ ಮನೆಯಲ್ಲಿ ಇರಲಿಲ್ಲ. ಇದೀಗ ಮಾಲೀಕರು ಈ ಅಪಾರ್ಟ್‌ಮೆಂಟ್ ಮಾರುವ ನಿರ್ಧಾರಕ್ಕೆ ಬಂದಿದ್ದರು. ಇದಾದ ಬಳಿಕ ಆದಾ ಶರ್ಮಾ ಈ ಫ್ಲಾಟ್ ಖರೀದಿ ಮಾಡಿದ್ದಾರೆ. ಫ್ಲಾಟ್ ಖರೀದಿಸಿದ ಬಳಿಕ ಈ ಕುರಿತು ಆಕೆ ಮಾತನಾಡಿದ್ದಾರೆ. ನಾನು ಎಲ್ಲರ ಹೃದಯದಲ್ಲಿ ವಾಸಿಸುತ್ತಿದ್ದೇನೆ. ಮಾತನಾಡಲು ಇದು ಸರಿಯಾದ ಸಮಯ. ನಾನು ಆ ಮನೆ ನೋಡಲು ಹೋದಾಗ ಮಾದ್ಯಮಗಳ ಗಮನ ನನ್ನ ಮೇಲಿತ್ತು. ನನ್ನ ಖಾಸಗಿ ವಿಚಾರಗಳನ್ನು ನನ್ನಲ್ಲಿ ಟಿಟುಕೊಳ್ಳಲು ಬಯಸುವಂತಹ ವ್ಯಕ್ತಿಯಾಗಿದ್ದಾನೆ. ನನ್ನ ಸಿನೆಮಾಗಳ ಬಗ್ಗೆ ಮಾತ್ರ ಸುದ್ದಿಯಲ್ಲಿರುವ ಬಯಸುತ್ತೇನೆ. ನಾನು ಉಳಿದ ಎಲ್ಲಾ ವಿಚಾರಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.

ಇನ್ನೂ ಸುಶಾಂತ್ ಸಿಂಗ್ ಮರಣದ ಬಳಿಕ ಅವರ ಬಗ್ಗೆ ಅನೇಕರು ತಪ್ಪಾಗಿ ಮಾತನಾಡಿದ್ದರು. ಅವರು ಡ್ರಗ್ಸ್ ಬಳಸುತ್ತಿದ್ದರು ಎಂಬೆಲ್ಲಾ ಸುದ್ದಿಗಳು ಹರಿದಾಡಿದವು. ಈ ಸುದ್ದಿ ಕೇಳಿ ನನಗೆ ತುಂಬಾ ಬೇಸರವಾಗಿತ್ತು. ಈ ಭೂಮಿಯ ಮೇಲೆ ಇಲ್ಲದ ವ್ಯಕ್ತಿಯ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರ ಬಗ್ಗೆ ನನಗೆ ತುಂಬಾನೆ ಗೌರವ ಇದೆ. ಆದ್ದರಿಂದಲೇ ಆ ಮನೆಯನ್ನು ಖರೀದಿ ಮಾಡಿದೆ. ಅವರ ಬಗ್ಗೆ ಮಾಡಿದ ಕೆಲವು ಕಾಮೆಂಟ್ ಗಳನ್ನು ನೋಡಿದೆ. ನನ್ನನ್ನು ಬೇಕಾದರೇ ಟ್ರೋಲ್ ಮಾಡಿ ಆದರೆ ಪ್ರಪಂಚದಲ್ಲಿರದ ವ್ಯಕ್ತಿಯ ಬಗ್ಗೆ ಈ ರೀತಿಯಾಗಿ ಮಾತಾಡೋದು ಸರಿಯಲ್ಲ ಎಂದು ಹೇಳಿದ್ದಾರೆ. ಇನ್ನೂ ಸುಶಾಂತ್ ಸಿಂಗ್ ಇದ್ದಂತಹ ಮನೆ 4BHK ಮನೆ. 2500 ಸ್ಕ್ವೇರ್‍ ಫೀಟ್ ಇದ್ದುಮ 6ನೇ ಅಂತಸ್ಥಿನಲ್ಲಿ ಈ ಮನೆಯಿದೆ.