ಫೇಸ್ ಬುಕ್ ದೋಖಾ, ಅಶ್ಲೀಲ ವಿಡಿಯೋ ವೈಲರ್ ಮಾಡುವುದಾಗಿ ಬೆದರಿಸಿ 96ಸಾವಿರ ದೋಚಿದ ದುಷ್ಕರ್ಮಿಗಳು….!

Follow Us :

ಅಮಾಯಾಕರನ್ನು ಹಾಗೂ ಅವರ ದುರ್ಬಲತೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆಗೆ ಇಳಿದಿದ್ದಾರೆ. ಸೋಷಿಯಲ್ ಮಿಡಿಯಾ ಬಳಸುವಾಗ ಎಚ್ಚರಿಕೆ ತಪ್ಪಿದರೇ ಹಣದ ಜೊತೆಗೆ ಮಾನ ಮರ್ಯಾದೆಯನ್ನು ಸಹ ಕಳೆದುಕೊಳ್ಳಬೇಕಾದ ದುಸ್ಥಿತಿ ಎದುರಾಗಬಹುದಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಫೇಸ್ ಬುಕ್ ನಲ್ಲಿ ಅಪರಿಚಿತರು ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಂದ ಸಾವಿರಾರು ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.

ಹುಬ್ಬಳ್ಳಿ ಮೂಲದ ರಂಜೀತನಾಥ ಎಂಬ ವ್ಯಕ್ತಿ ಫೇಸ್ ಬುಕ್ ನಲ್ಲಿ ಕರೆಯೊಂದು ಬಂದಿದೆ. ಅಪರಿಚಿತರು ಕರೆ ಮಾಡಿದ್ದು, ಕರೆಯನ್ನು ಆತ ಸ್ವೀಕರಿಸಿದ್ದಾನೆ. ಕರೆ ಸ್ವೀಕರಿಸಿದ ಕೂಡಲೇ ಅಪರಿಚಿತರು ಅದನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಅಶ್ಲೀಲ ದೃಶ್ಯ ತೋರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಆದರೆ ರಂಜೀತನಾಥ ಹಣ ನೀಡಲು ನಿರಾಕರಿಸಿದ್ದಾಗ. ಅಶ್ಲೀಲ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಎಲ್ಲಾ ಕಡೆ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಅದರಿಂದ ಮರ್ಯಾದೆಗೆ ಅಂಜಿದ ರಂಜೀತನಾಥ 96 ಸಾವಿರ ಹಣವನ್ನು ಅಪರಿಚಿತರ ಖಾತೆಗೆ ಹಾಕಿದ್ದಾರೆ. ಅಷ್ಟು ಹಣ ನೀಡಿದರೂ ಸಹ ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇದರಿಂದಾಗಿ ರಂಜೀತನಾಥ ಸೈಬರ್‍ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ನೂ ಈಗಾಗಲೇ ಪೊಲೀಸರು ಅಂತಹ ಪ್ರಕರಣಗಳ ಬಗ್ಗೆ ಜಾಗೃತಿ ಸಹ ಮೂಡಿಸಿದ್ದರೂ ಸಹ ಇಂತಹ ವಂಚನೆ ಪ್ರಕರಣಗಳು ನಡೆಯುತ್ತಲೇ ಇದೆ. ಕೆಲ ಸೈಬರ್‍ ಕಳ್ಳರು ಅಮಾಯಕರನ್ನು ಟಾರ್ಗೆಟ್ ಮಾಡಿ, ಕರೆ ಮಾಡಿ ಅವರಿಗೆ ತಿಳಿಯದಂತೆ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಡುವಂತಹ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ. ಆದ್ದರಿಂದ ಸೋಷಿಯಲ್ ಮಿಡಿಯಾದಲ್ಲಿ ಅಪರಿಚಿತರಿಂದ ಬರುವಂತಹ ಕರೆಗಳನ್ನು ಸ್ವೀಕರಿಸಬೇಡಿ, ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂಬುದರ ಬಗ್ಗೆ ಜಾಗೃತರಾಗಬೇಕಿದೆ.