ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಎಂ.ಎಲ್.ಎ ಪ್ರದೀಪ್, ಶಾಸಕರ ವಿರುದ್ದ ಮಾಜಿ ಸಚಿವ ಸುಧಾಕರ್ ಲೇವಡಿ…..!

Follow Us :

ಕಿರುತೆರೆ ಶೋಗಳಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿರುವ ಬಿಗ್ ಬಾಸ್ ಶೋ ಸೀಸನ್ 10 ಶುರುವಾಗಿದ್ದು, ಈ ಬಿಗ್ ಬಾಸ್ ಮನೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‍ ಎಂಟ್ರಿ ಕೊಟ್ಟಿದ್ದಾರೆ. ದೇಶದ ಇತಿಹಾಸದಲ್ಲೇ ಶಾಸಕರೊಬ್ಬರು ಬಿಗ್ ಬಾಸ್ ಮನೆಗೆ ಹೋಗಿರುವುದು ನಗೆಪಾಟಲು ಆಗಿದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‍ ಲೇವಡಿ ಮಾಡಿ ಆಕ್ರೋಷ ಹೊರಹಾಕಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಅವರು ಎಂದಿನ ಜೋಶ್​ನಲ್ಲಿ ಶೋ ನಡೆಸಿಕೊಟ್ಟಿದ್ದಾರೆ. ಮನೆ ಒಳಗೆ 17 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಎಲ್ಲರೂ 18ನೇ ಸ್ಪರ್ಧಿ ಯಾರು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಎಲ್ಲಾ ಸ್ಪರ್ಧಿಗಳು ರಾತ್ರಿಯೇ ಎಂಟ್ರಿ ಕೊಟ್ಟಿದ್ದಾರೆ. ಆದರೆ 18ನೇ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‍ ಬೆಳಿಗ್ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಆತ ಎಂಟ್ರಿ ಕೊಡುತ್ತಿದ್ದಂತೆ ಉಳಿದ ಎಲ್ಲಾ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ವೈಟ್ ಅಂಡ್ ವೈಟ್ ನಲ್ಲಿ ಪ್ರದೀಪ್ ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಎಲ್ಲರಿಗೂ ಕೈ ಮುಗಿದು ಬಂದಿದ್ದಾರೆ. ಈ ಸಂಬಂಧ ಪ್ರೊಮೋ ಸಹ ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಮಾಡಿದೆ.

ಇನ್ನೂ ಶಾಸಕ ಪ್ರದೀಪ್ ಬಿಗ್ ಬಾಸ್ ಗೆ ಎಂಟ್ರಿ ನೀಡಿದ್ದರ ಬಗ್ಗೆ ಮಾಜಿ ಸಚಿವ ಡಾ.ಕೆ.ಸುಧಾಕರ್‍ ಲೇವಡಿ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಯಾವುದೇ ಶಾಸಕ ಬಿಗ್ ಬಾಸ್ ಗೆ ಹೋಗಿ ಕುಣಿದಾಡಿದ್ದು ನೋಡಿಯೇ ಇಲ್ಲ. ಇದೊಂದು ನಾಚಿಕೆಗೇಡಿನ ಸಂಗತಿಯಾಗಿದೆ. ಬಿಗ್ ಬಾಸ್ ಎಂಟ್ರಿಯಿಂದ ಶಾಸಕ ಪ್ರದೀಪ್ ಚಿಕ್ಕಬಳ್ಳಾಪುರ ಮಾನ ಮರ್ಯಾದೆ ಕಳೆದಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿತ್ತು. ಇದೀಗ ಪ್ರದೀಪ್ ಅದನ್ನು ಹಾಳು ಮಾಡಿದ್ದಾರೆ ಎಂದು ಡಾ.ಸುಧಾಕರ್‍ ಕಿಡಿಕಾರಿದ್ದಾರೆ.

ಇನ್ನೂ ಪ್ರದೀಪ್ ಈಶ್ವರ್‍ ರವರು ಶಾಸಕರಾಗಿದ್ದು, ಅವರದ್ದೇ ಆದ ಜವಾಬ್ದಾರಿಗಳು ಇವೆ. ಕ್ಷೇತ್ರದಲ್ಲಿ ಮಳೆ ಇಲ್ಲದೇ ಬರಗಾಲ ತಾಂಡವವಾಡುತ್ತಿದ್ದರೇ ಆತ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದು, ವಿಮರ್ಶೆಗಳಿಗೆ ಕಾರಣವಾಗಿದೆ. ಇನ್ನೂ ಪ್ರದೀಪ್ ಈಶ್ವರ್‍ ಅನಾಥ ಮಕ್ಕಳಿಗೆ ನೆರವಾಗಲು ಬಿಗ್ ಬಾಸ್ ಮನೆಗೆ ಹೋಗಿದ್ದು, ಅಲ್ಲಿಂದ ಬಂದ ಹಣವನ್ನು ಅನಾಥ ಮಕ್ಕಳಿಗೆ ಕೊಡಲು ತೀರ್ಮಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.