ಮೊದಲ ಬಾರಿಗೆ ಪ್ರಿಯಕರನ ಬಗ್ಗೆ ಕಾಮೆಂಟ್ ಮಾಡಿದ ಇಲಿಯಾನಾ, ವೈರಲ್ ಆದ ಕಾಮೆಂಟ್ಸ್…..!

ಮೊದಲನೇ ಸಿನೆಮಾದ ಮೂಲಕ ಓವರ್‍ ನೈಟ್ ನಲ್ಲೇ ಸ್ಟಾರ್‍ ಡಂ ಗಿಟ್ಟಿಸಿಕೊಂಡ ನಟಿಯರಲ್ಲಿ ಗೋವಾ ಮೂಲದ ಬ್ಯೂಟಿ ಇಲಿಯಾನಾ ಸಹ ಒಬ್ಬರಾಗಿದ್ದಾರೆ. ಬಳಕುವಂತಹ ಸೊಂಟದ ಮೂಲಕ ಆಕೆ ಕಡಿಮೆ ಸಮಯದಲ್ಲೇ ಭಾರಿ ಫ್ಯಾನ್ ಫಾಲೋಯಿಂಗ್ ಸಹ ಪಡೆದುಕೊಂಡರು. ಆಕೆಯ ಕೆರಿಯರ್‍ ಚೆನ್ನಾಗಿ ನಡೆಯುತ್ತಿರುವಾಗಲೇ ಆಕೆ ತೆಗೆದುಕೊಂಡಂತಹ ಕೆಲವೊಂದು ತಪ್ಪು ನಿರ್ಣಯಗಳಿಂದ ಆಕೆ ಸಿನೆಮಾಗಳಿಂದ ದೂರ ಉಳಿಯಬೇಕಾಯಿತು. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಆಕೆ ಮದುವೆಗೂ ಮುಂಚೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯ್ತನದ ಸಂತೋಷವನ್ನು ಅನುಭವಿಸುತ್ತಿದ್ದಾರೆ.

ಸೌತ್ ಸಿನಿರಂಗದ ಅಪಾರ ಸಂಖ್ಯೆಯ ಯುವಕರ ಕನಸಿನ ರಾಣಿಯಾಗಿದ್ದ ಇಲಿಯಾನಾ ಬಾಲಿವುಡ್ ನಲ್ಲಿ ಸಕ್ಸಸ್ ಕಾಣಲು ನಿರ್ಣಯ ಮಾಡಿ ಬಾಲಿವುಡ್ ನತ್ತ ಪಯಣ ಬೆಳೆಸಿದರು. ಆದರೆ ಆಕೆ ಬಾಲಿವುಡ್ ನಲ್ಲಿ ಭಾರಿ ಸೋಲನ್ನು ಕಂಡರು. ಇದರ ಜೊತೆಗೆ ಲವ್, ಬ್ರೇಕಪ್ ಮೊದಲಾದ ವೈಯುಕ್ತಿಕ ವಿಚಾರಗಳ ಕಾರಣದಿಂದ ಆಕೆ ಮತಷ್ಟು ಡಿಪ್ರೆಷನ್ ಗೆ ಗುರಿಯಾಗಿದ್ದರು. ಇನ್ನೂ ಸುಮಾರು ದಿನಗಳ ಬಳಿಕ ಆಕೆ ಮತ್ತೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅದರಲ್ಲೂ ಕೆಲವು ತಿಂಗಳುಗಳ ಹಿಂದೆಯಷ್ಟೆ ತಾನು ಗರ್ಭಿಣಿಯೆಂದು ಪೋಸ್ಟ್ ಹಂಚಿಕೊಂಡಿದ್ದರು. ಮದುವೆಯಾಗುವುದಕ್ಕೂ ಮುಂಚೆ ಆಕೆ ಗರ್ಭಿಣಿಯಾಗಿದ್ದು, ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಇಲಿಯಾನಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗನಿಗೆ ಕೋವಾ ಫೋನಿಕ್ಸ್ ಡೊಲಾನ್ ಎಂಬ ಹೆಸರನ್ನು ಸಹ ಇಟ್ಟಿದ್ದಾರೆ.

ಇನ್ನೂ ಇಲಿಯಾನಾ ತನ್ನ ಮಗುವಿಗೆ ಜನ್ಮ ನೀಡಿ ಎರಡು ತಿಂಗಳು ಪೂರ್ಣಗೊಂಡಿದೆ. ಆದರೆ ಇಲಿಯಾನಾ ತಾಯಿಯಾಗಿ ಮಾನಸಿಕ ನೋವನ್ನು ಅನುಭವಿಸಿದ್ದರಂತೆ. ತನ್ನ ಮಗ ಸಣ್ಣ ಪ್ರಮಾಣದ ಅನಾರೋಗ್ಯಕ್ಕೆ ತುತ್ತಾಗಿದ್ದರಂತೆ. ಅದರಿಂದ ಆಕೆ ತುಂಬಾನೆ ನೋವನ್ನು ಅನುಭವಿಸಿದ್ದರಂತೆ. ಹೆತ್ತ ಮಗು ಅನಾರೋಗ್ಯಕ್ಕೆ ಗುರಿಯಾದರೇ ಆ ತಾಯಿಯ ಮನಸ್ಸು ಎಷ್ಟು ನೋವು ಪಡುತ್ತದೆ, ಆ ನೋವನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ಯಾರೂ ನನಗೆ ತಿಳಿಸಿಲ್ಲ. ತಾಯಿಯಾದ ಬಳಿಕ ಅನೇಕ ವಿಚಾರಗಳು ಅನುಭವಕ್ಕೆ ಬರುತ್ತೆ. ಈ ಬಗ್ಗೆ ಪ್ರತಿ ಮಹಿಳೆ ತಾಯಿ ಆದ ಬಳಿಕ ಅಂತಹ ಅನುಭವಗಳನ್ನು ಎದುರಿಸಬೇಕು ಎಂದು ಹೇಳಿದ್ದಾರೆ.

ಇದರ ಜೊತೆಗೆ ತನ್ನ ಪ್ರಿಯಕರನ ಬಗ್ಗೆ ಮೊದಲ ಬಾರಿಗೆ ಕಾಮೆಂಟ್ ಮಾಡಿದ್ದಾರೆ. ಇಲಿಯಾನ ತನ್ನ ಮಗುವಿನ ತಂದೆಯ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ. ಡೊಲಾನ್ ನನಗೆ ತುಂಬಾ ಬೆಂಬಲವಾಗಿ ನಿಂತಿದ್ದಾರೆ. ನಾನು ಕಷ್ಟಗಳಲ್ಲಿ ಇದ್ದಾಗ ನನ್ನ ಕಣ್ಣೀರು ಹೊರೆಸಿದ್ದಾರೆ. ನನಗೆ ಬೆಂಬಲವಾಗಿ ನಿಂತಿದ್ದಾರೆ. ಆತ ನನ್ನ ಪಕ್ಕದಲ್ಲಿದ್ದರೇ ನನಗೆ ಏನು ಕಷ್ಟ ಇರೊಲ್ಲ ಎಂದು ತನ್ನ ಪ್ರಿಯಕರನ್ನು ಕೊಂಡಾಡಿದ್ದಾರೆ. ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.