ಹಿಂದೂ ದೇವಾಲಯದಲ್ಲಿ ಮೂತ್ರ ವಿರ್ಸಜನೆ ಮಾಡಿದ ಮುಸ್ಲಿಂ ವ್ಯಕ್ತಿಯ ವಿರುದ್ದ ಭಾರಿ ಆಕ್ರೋಷ….!

Follow Us :

ಕೆಲ ಪುಂಡರು ಮಾಡುವ ಕೆಲಸದಿಂದ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಯಾಗುತ್ತಿರುತ್ತದೆ. ಈ ಹಾದಿಯಲ್ಲೆ ಮುಸ್ಲೀಂ ವ್ಯಕ್ತಿಯೋರ್ವ ಹಿಂದೂ ದೇವಾಲಯದೊಳಗೆ ಹೋಗಿ ಮೂತ್ರ ವಿರ್ಸಜನೆ ಮಾಡಿದ್ದು, ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಆಕ್ರೋಷ ವ್ಯಕ್ತವಾಗುತ್ತಿದೆ. ಈ ಸಂಬಂಧ ವಿಡಿಯೋ ಒಂದು ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾಗಿದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಹಿಂದೂ ದೇವಾಲಯದೊಳಗೆ ಹೋದ ಮುಸ್ಲೀಂ ವ್ಯಕ್ತಿಯೋರ್ವ ಶಿವ ಲಿಂಗದ ಬಳಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನಲಾಗಿದೆ. ಮುರ್ಷಿದಾಬಾದ್ ಜಿಲ್ಲೆಯ ಸಲಾರ್‍ ಬ್ಲಾಕ್ ವ್ಯಾಪ್ತಿಯ ಕಂದರ್‍ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಕೃತ್ಯವೆಸಗಿದ ವ್ಯಕ್ತಿಯನ್ನು ಅರಾ ಶೇಖ್ ಎಂದು ಗುರ್ತಿಸಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿ ಶೇಕ್ ರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಅರಾ ಶೇಖ್ ವ್ಯಕ್ತಿಯೊಬ್ಬರ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದು, ಇದೇ ಕೋಪದಲ್ಲಿ ಸಿಟ್ಟಿನಲ್ಲಿ ಆತ ದೇವಾಲಯದ ಒಳಗೆ ಪ್ರವೇಶಿಸಿ ಮೂತರ ವಿರ್ಸಜನೆ ಮಾಡಿದ್ದಾನೆ. ಈ ವೇಳೆ ಶೇಖ್ ನನ್ನು ತಡೆಯಲು ಪ್ರಯತ್ನ ಮಾಡಿದರೂ ಸಹ ಆತನ ಮಾತು ಕೇಳದೇ ಮೂತ್ರ ವಿರ್ಸಜನೆ ಮಾಡಿದ್ದಾನೆ ಎನ್ನಲಾಗಿದೆ.

ಇನ್ನೂ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬಳಿಕ ಆರೋಪಿಯನ್ನು ಸಹ ಬಂಧನ ಮಾಡಲಾಗಿದೆ. ಆದರೆ ಈ ಕೃತ್ಯದ ನಡೆದಿದೆ ಎಂದು ಇನ್ನೂ ದೃಢಪಟ್ಟಿಲ್ಲ. ಪೊಲೀಸರಿಂದಲೂ ಸಹ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಘಟನೆಗೆ ಸಂಬಂಧಿಸಿದಂತೆ ಸೋಷಿಯಲ್ ಮಿಡಿಯಾದಲ್ಲಿ ಈ ಘಟನೆಯ ವಿರುದ್ದ ಭಾರಿ ಆಕ್ರೋಷ ವ್ಯಕ್ತವಾಗುತ್ತಿದೆ.