News

ಜೈಲಿನಲ್ಲೇ ಗರ್ಭಿಣಿಯಾಗುತ್ತಿದ್ದಾರೆ ಮಹಿಳಾ ಕೈದಿಗಳು, ಆತಂಕ ವ್ಯಕ್ತಪಡಿಸಿದ ಕೋಲ್ಕತ್ತಾ ಹೈಕೋರ್ಟ್…..!

ಪಶ್ವಿಮ ಬಂಗಾಳದ ವಿವಿಧ ಜೈಲುಗಳಲ್ಲಿರುವ ಮಹಿಳಾ ಕೈದಿಗಳು ಗರ್ಭಿಣಿಯಾಗುತ್ತಿದ್ದಾರೆ, 196 ಶಿಶುಗಳು ಜನಿಸಿದೆ ಎಂದು ಕೋಲ್ಕತ್ತಾ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಈ ಕಾರಣದಿಂದ ಇನ್ನು ಮುಂದೆ ಮಹಿಳಾ ಕೈದಿಗಳಿರುವ ಆವರಣಗಳಿಗೆ ಪುರುಷರ ಪ್ರವೇಶ ನಿಷೇಧ ಮಾಡುವ ಬಗ್ಗೆ ಚಿಂತನೆ ಸಹ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಸಾಲು ಸಾಲಾಗಿ ಮಹಿಳಾ ಕೈದಿಗಳು ಗರ್ಭಿಣಿಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಜೈಲಿನಲ್ಲಿರುವ ಮಹಿಳಾ ಕೈದಿಗಳು ಗರ್ಭಿಣಿಯಾಗುತ್ತಿರುವ ಬಗ್ಗೆ ಹೈಕೋರ್ಟ್‌ನಿಂದ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡ ವಕೀಲ ತಪಸ್ ಕುಮಾರ್‍ ಬಂಜಾ ಎಂಬುವವರು ನ್ಯಾಯಾಲಯಕ್ಕೆ ಈ ಕುರಿತು ಮಾಹಿತಿ ನೀಡಿದ್ದಾರೆ. ಅವರ ಮಾಹಿತಿಯಂತೆ ರಾಜ್ಯದ ವಿವಿಧ ಸುಧಾರಣಾ ಕೇಂದ್ರಗಳಲ್ಲಿರುವ ಮಹಿಳಾ ಕೈದಿಗಳಿಗೆ ಸುಮಾರು 196 ಶಿಶುಗಳು ಜನಿಸಿರುವುದಾಗಿ ತಿಳಿದುಬಂದಿದೆ. ಇದರಿಂದಾಗಿ ಮಹಿಳಾ ಕೈದಿಗಳ ಸ್ಥಿತಿಗತಿಯ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ ಎನ್ನಲಾಗಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯರವರನ್ನೊಳಗೊಂಡ ಪೀಠಕ್ಕೆ ಈ ಮಾಹಿತಿ ನೀಡಲಾಗಿದೆ.

ಇನ್ನೂ ಅಮಿಕಸ್ ಕ್ಯೂರಿ ಈ ಸಮಸ್ಯೆಯನ್ನು ತಡೆಗಟ್ಟುವ ಕ್ರಮವನ್ನು ಸಹ ಸೂಚನೆ ನೀಡಿದ್ದಾರೆ. ಸದ್ಯ 196 ಮಕ್ಕಳ ತಂದೆ ಯಾರು ಎಂಬುದು ಪತ್ತೆಹಚ್ಚುವುದು ಯಕ್ಷ ಪ್ರಶ್ನೆಯಾಗಿದೆ. ಮಹಿಳಾ ಕೈದಿಗಳಿರುವಂತಹ ಪ್ರದೇಶಗಳಿಗೆ ಪುರುಷ ಕೈದಿಗಳ ಪ್ರವೇಶ ನಿರ್ಬಧಿಸಬೇಕು ಎಂದು ಪ್ರಸ್ತಾಪಿಸಿದ್ದಾರೆ. 2018 ರಲ್ಲಿ ಸ್ವಯಂ ಪ್ರೇರಿತವಾಗಿ ಹೈಕೊರ್ಟ್ ನಿಂದ ಭಂಜಾ ರವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿ ಜೈಲುಗಳಲ್ಲಿ ಜನದಟ್ಟಣೆಯ ಕುರಿತು ವರದಿ ನೀಡಲು ನೇಮಕ ಮಾಡಲಾಗಿತ್ತು. ಇದೀಗ ಅವರ ಮಾಹಿತಿಯಂತೆ ಮಹಿಳಾ ಕೈದಿಗಳು ಗರ್ಭಿಣಿಯಾಗುತ್ತಿದ್ದಾರೆ ಎಂದು ತಿಳಿಸಿದ್ದು ಅಮಿಕಸ್ ಕ್ಯೂರಿ ಮತಷ್ಟು ವಿಚಾರಗಳನ್ನು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

Most Popular

To Top