Film News

ಕೋವಿಡ್ ನಿಂದ ಬಳಲುತ್ತಿದ್ದ ಕಾಲಿವುಡ್ ಹಿರಿಯ ನಟ ವಿಜಯಕಾಂತ್ ಮೃತ, ಗಣ್ಯರಿಂದ ಸಂತಾಪ….!

ಕಾಲಿವುಡ್ ಹಿರಿಯ ನಟ ಹಾಗೂ ಡಿಎಂಡಿಕೆ ನಾಯಕ ವಿಜಯಕಾಂತ್ ಅವರು ಕೋವಿಡ್ ಕಾರಣದಿಂದ ಮೃತಪಟ್ಟಿದ್ದಾರೆ. ಕೋವಿಡ್ ನಿಂದ ಬಳಲುತ್ತಿದ್ದ ಅವರು ಚೆನೈನ ಮಿಯೋಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ ಗೆ ತುತ್ತಾದ ಬಳಿಕ ಅವರಿಗೆ ಚೆನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ವಿಜಯಕಾಂತ್ ರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಾಜಕೀಯ ಗಣ್ಯರು ಹಾಗೂ ಸಿನೆಮಾ ಗಣ್ಯರು ಸೇರಿದಂತೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ನಟ ವಿಜಯ್ ಕಾಂತ್ ರವರು 1952 ಆಗಸ್ಟ್ 25 ರಂದು ಜನಿಸಿದರು. ಸದ್ಯ ಅವರಿಗೆ 71 ವರ್ಷ ವಯಸ್ಸಾಗಿದೆ. ಅವರ ಮೊದಲ ಹೆಸರು ನಾರಾಯಣ ವಿಜಯರಾಜ ಅಲಗರಸ್ವಾಮಿ ಎಂದು, ಬಳಿಕ ಅವರು ವಿಜಯಕಾಂತ್ ಎಂದೇ ಫೇಮಸ್ ಆದರು. ಸಿನೆಮಾಗಳ ಜೊತೆಗೆ ರಾಜಕೀಯದಲ್ಲೂ ಸಕ್ರೀಯರಾಗಿದ್ದ ವಿಜಯಕಾಂತ್ ರವರು 2011-2016 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಸಿನೆಮಾಗಳಲ್ಲಿ ನಟನೆ, ನಿರ್ಮಾಪಕರಾಗಿ ಹಾಗೂ ನಿರ್ದೇಶಕರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. 1979ರಲ್ಲಿ ತೆರೆಕಂಡ ಇನ್ನಿಕ್ಕುಂ ಇಳಮೈ ಸಿನೆಮಾದಲ್ಲಿ ಕಳನಾಯಕನಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ 150 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದರು.

ಸಿನೆಮಾಗಳ ಜೊತೆಗೆ ಅವರು ರಾಜಕೀಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡರು. 2005 ರಲ್ಲಿ ದೇಸಿಯ ಮುರಪೊಕ್ಕು ದ್ರಾವಿಡ ಕಳಗಂ ಹೆಸರಿನ ತಮ್ಮದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು. 2011ರಿಂದ 2016 ರ ವರೆಗೆ ತಮಿಳುನಾಡು ವಿಧಾನಸಭೆ ವಿರೋಧ ಪಕ್ಷ ನಾಯಕರಾಗಿದ್ದರು. ಇನ್ನೂ ಕೆಲವು ವರ್ಷಗಳಿಂದ ವಿಜಯಕಾಂತ್ ರವರು ಒಂದಲ್ಲ ಒಂದು ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದರು. ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದರು. ಬಳಿಕ ಅವರನ್ನು ಚೆನೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೂ ಸಹ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ. ಅದರ ಜೊತೆಗೆ ಕೋವಿಡ್ ಗೂ ಸಹ ತುತ್ತಾಗಿದ್ದರು. ಮಧುಮೇಹದಿಂದಲೂ ಸಹ ಬಳಲುತ್ತಿದ್ದರು. ಅನಾರೋಗ್ಯದ ನಿಮಿತ್ತ ವಿಜಯಕಾಂತ್ ರವರು ಇಹಲೋಕ ತ್ಯೆಜಿಸಿದ್ದು, ಸಿನೆಮಾ ಗಣ್ಯರು, ರಾಜಕೀಯ ಮುಖಂಡರು ಹಾಗೂ ಅಭಿಮಾನಿಗಳು ಶೋಕ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.

Most Popular

To Top