Film News

ಟಿಲ್ಲು ಸ್ಕ್ವೇರ್ ಸಕ್ಸಸ್ ಖುಷಿಯನ್ನು ಎಂಜಾಯ್ ಮಾಡುತ್ತಿರುವ ಮಲ್ಲು ಬ್ಯೂಟಿ, ರೆಡ್ ಸೀರೆಯಲ್ಲಿ ಹ್ಯಾಪಿ ಮೋಡ್ ನಲ್ಲಿ ಅನುಪಮಾ…..!

ಮಲ್ಲು ಬ್ಯೂಟಿ ಅನುಪಮಾ ಪರಮೇಶ್ವರನ್ ಕೆರಿಯರ್‍ ಆರಂಭದಲ್ಲಿ ಸಂಪ್ರದಾಯಬದ್ದವಾದ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಇತ್ತಿಚಿಗೆ ಆಕೆ ಬೋಲ್ಡ್ ಪಾತ್ರಗಳಿಗೂ ಸೈ ಎನ್ನುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೇ ಟಿಲ್ಲು ಸ್ಕ್ವೇರ್‍ ಸಿನೆಮಾ ಎನ್ನಬಹುದಾಗಿದೆ. ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡಿದ್ದು, ನೂರು ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಸಿನೆಮಾ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಅನುಪಮಾ ಪುಲ್ ಎಂಜಾಯ್ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸಖತ್ ವೈರಲ್ ಆಗುತ್ತಿದೆ.

ಯಂಗ್ ಬ್ಯೂಟಿ ಅನುಪಮಾ ಪರಮೇಶ್ವರನ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಮೊದಲಲ್ಲಿ ತುಂಬಾ ಪದ್ದತಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಆದರೆ ರೌಡಿ ಭಾಯ್ಸ್ ಸಿನೆಮಾದಲ್ಲಿ ಮೊದಲ ಬಾರಿಗೆ ಲಿಪ್ ಲಾಕ್ ದೃಶ್ಯದಲ್ಲಿ ನಟಿಸಿ ಶಾಕ್ ನೀಡಿದ್ದರು. ಕಳೆದ ವರ್ಷ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಹ ಪಡೆದುಕೊಂಡು ಹ್ಯಾಟ್ರಿಕ್ ಪಡೆದುಕೊಂಡಿದ್ದಾರೆ. ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾದಲ್ಲಿ ನಟಿಸಿದ್ದರು. ಈ ಮೂರು ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಕೆಲವು ದಿನಗಳ ಹಿಂದೆಯಷ್ಟೆ ತೆರೆಕಂಡ ಟಿಲ್ಲು ಸ್ಕ್ವೇರ್‍ ಸಿನೆಮಾದಲ್ಲಿ ಅನುಪಮಾ ತುಂಬಾನೆ ಬೋಲ್ಡ್ ಆಗಿ ನಟಿಸಿದ್ದರು. ಆಕೆಯ ಈ ನಟನೆಯನ್ನು ನೋಡಿದ ಅನೇಕ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಆದರೂ ಸಹ ಈ ಸಿನೆಮಾ ಮಾತ್ರ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿದ್ದು, ನೂರು ಕೋಟಿ ಗ್ರಾಸ್ ಗಳಿಸಿದ್ದು, ಇನ್ನೂ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ ಎನ್ನಲಾಗಿದೆ.

ಸದ್ಯ ನಟಿ ಅನುಪಮಾ ಪರಮೇಶ್ವರನ್ ಟಿಲ್ಲು ಸ್ಕ್ವೇರ್‍ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಈ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅನುಪಮಾ ಸದ್ದು ಮಾಡುತ್ತಿದ್ದಾರೆ. ಮಾಡ್ರನ್ ಡ್ರೆಸ್ ಗಳ ಜೊತೆಗೆ ಸಂಪ್ರದಾಯಬದ್ದವಾಗಿಯೂ ಆಕೆ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಅನುಪಮಾ ರೆಡ್ ಕಲರ್‍ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ಟಾಪ್ ಗ್ಲಾಮರ್‍ ಶೋ ಮಾಡುತ್ತಾ. ಪುಲ್ ಹ್ಯಾಪಿ ಮೋಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೇಜಿಯಾಗಿ ಪೋಸ್ ಗಳನ್ನು ಕೊಡುತ್ತಾ ಆಕೆ ಬ್ಯೂಟಿಪುಲ್ ಲುಕ್ಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ. ಅಭಿಮಾನಿಗಳು ಹಾಗು ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Most Popular

To Top