News

ಶೀಘ್ರದಲ್ಲೇ ಇನ್ಸ್ಟಾಗ್ರಾಂನಲ್ಲಿ ಹೊಸ ಫೀಚರ್, ಅಂತಹ ಪೋಸ್ಟ್ ಗಳನ್ನು ಹಂಚಿಕೊಂಡ್ರೆ ಬರುತ್ತೇ ವಾರ್ನಿಂಗ್…..!

ಇಂದಿನ ಕಾಲದಲ್ಲಿ ಸೋಷಿಯಲ್ ಮಿಡಿಯಾ ಬಳಕೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಹೇಳಬೇಕಾಗಿಲ್ಲ. ಅದರಲ್ಲೂ ಇನ್ಸ್ಟಾಗ್ರಾಂ ಭಾರಿ ಫೇಮಸ್ ಎಂದೇ ಹೇಳಬಹುದು. ವಿಶ್ವದಾದ್ಯಂತ ಕೊಟ್ಯಂತರ ಯೂಸರ್‍ ಗಳನ್ನು ಹೊಂದಿರುವ ಇನ್ಸ್ಟಾಗ್ರಾಂ ಪ್ರತಿನಿತ್ಯ ಮತಷ್ಟು ಫಾಲೋವರ್ಸ್‌ಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದೀಗ ಇನ್ಸ್ಟಾ ಹೊಸ ಫೀಚರ್‍ ಒಂದನ್ನು ತೆಗೆದುಕೊಂಡು ಬರುವ ಸಿದ್ದತೆಯಲ್ಲಿದೆ ಎಂದು ತಿಳಿದುಬಂದಿದೆ.

ದೈತ್ಯ ಸೋಷಿಯಲ್ ಮಿಡಿಯಾ ಫ್ಲಾಟ್ ಫಾರಂ ಎಂದೇ ಕರೆಯಲಾಗುವ ಇನ್ಸ್ಟಾಗ್ರಾಂನಲ್ಲಿ ಆಗಿದ್ದಾಂಗೆ ಹೊಸ ಫೀಚರ್‍ ಗಳನ್ನು ತರುತ್ತಿರುತ್ತಾರೆ. ಅದೇ ರೀತಿ ಸೆಕ್ಯೂರಿಟಿ ವಿಚಾರದಲ್ಲೂ ರಾಜಿಯಾಗಿಲ್ಲ ಎನ್ನಬಹುದಾಗಿದೆ. ವಿಡಿಯೋಗಳು, ಪೊಟೋಗಳ ಮೂಲಕ ಕೆಲವರು ನಗ್ನತ್ವದಿಂದ ಕೂಡಿದ ಕಂಟೆಂಟ್ ಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಅಂತಹ ಕಂಟೆಂಟ್ ಗಳನ್ನು ಟೀನೇಜರ್‍ ಗಳಿಗೆ ತೋರಿಸದಂತೆ ಇನ್ಸ್ಟಾಗ್ರಾಂ ಹೊಸ ಫೀಚರ್‍ ತರುವ ಸಿದ್ದತೆಗಳಲ್ಲಿ ಇದೆ ಎಂದು ತಿಳಿದುಬಂದಿದೆ. ಅಸಭ್ಯಕರವಾದ ಪೊಟೋಗಳು, ವಿಡಿಯೋಗಳು ಹಾಗೂ ಹಾನಿಕಾರಕ ಕಂಟೆಂಟ್ ಗಳು ಕಾಣಿಸುತ್ತಿದ್ದಂತೆ ವಾರ್ನಿಂಗ್ ಸಂದೇಶ ಬರುವಂತ ಫೀಚರ್‍ ಅನ್ನು ಪರೀಕ್ಷೆ ಮಾಡುತ್ತಿದೆ ಎನ್ನಲಾಗಿದೆ.

ಇನ್ಸ್ಟಾ ಯೂಸರ್‍ ಗಳು ಬೇರೊಬ್ಬ ಯೂಸರ್‍ ಗೆ ನಗ್ನತ್ವದಿಂದ ಕೂಡಿದ ಕಂಟೆಂಟ್ ಕಳುಹಿಸಲು ಪ್ರಯತ್ನಿಸಿದರೇ ಆ ವ್ಯಕ್ತಿಗೆ ವಾರ್ನಿಂಗ್ ಅಲರ್ಟ್ ಬರುತ್ತದೆ. ಟಿನೇಜರ್‍ ಗಳು ಹೆಚ್ಚಾಗಿ ಅಂತಹ ಕಂಟೆಂಟ್ ಗಳಿಗೆ ಅಟ್ರಾಕ್ಟ್ ಆಗುತ್ತಿದ್ದಾರೆ ಎಂದು ಯುಎಸ್ ಹಾಗೂ ಯೂರೋಪ್ ಗಳಿಂದ ವಿಮರ್ಶೆಗಳೂ ಸಹ ಬರುತ್ತಿದ್ದ ಹಿನ್ನೆಲೆಯಲ್ಲಿ ಇದೀಗ ಇನ್ಸ್ಟಾ ಈ ಹೊಸ ಫೀಚರ್‍ ತರಲು ಸಿದ್ದತೆಗಳನ್ನು ನಡೆಸುತ್ತಿದ್ದಾರೆ. 18 ವರ್ಷದೊಳಗಿನ ಯೂಸರ್‍ ಗಳಿಗೆ ಈ ಫೀಚರ್‍ ಸ್ವಯಂಚಾಲಿತವಾಗಿ ಆಕ್ಟೀವೇಟ್ ಆಗುತ್ತದೆ. ಆದರೆ 18 ವರ್ಷ ತುಂಬಿದವರು ಈ ಫೀಚರ್‍ ಅನ್ನು ಮ್ಯಾನ್ಯವಲ್ ಆಗಿ ಮಾಡಿಕೊಳ್ಳಬೇಕಿದೆ. ಸದ್ಯ ಈ ಫೀಚರ್‍ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಈ ಫೀಚರ್‍ ಬರಲಿದೆ ಎನ್ನಲಾಗಿದೆ.

Most Popular

To Top