ಎಲ್ಲರಿಗೂ ಶಾಕ್ ಕೊಟ್ಟ ಅನುಪಮಾ, ನಿಶ್ಚಿತಾರ್ಥ ಆಗೋಯ್ತಾ, ಅನುಪಮ ರನ್ನು ಕೈ ಹಿಡಿಯುವ ವರ ಯಾರು?

ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಅನೇಕ ವರ್ಷಗಳ ಕಾಲ ಕ್ಯೂಟಿ ‌ಬ್ಯೂಟಿಯಾಗಿ, ಓವರ್‍ ಗ್ಲಾಮರ್‍ ಶೋ ಮಾಡದಂತೆ ಕಾಣಿಸಿಕೊಳ್ಳುತ್ತಿದ್ದ ನಟಿ ಅನುಪಮಾ ಪರಮೇಶ್ವರ್‍ ಇದೀಗ ತನ್ನ ವರಸೆಯನ್ನು ಬದಲಿಸಿದ್ದಾರೆ. ಕ್ಯೂಟಿ ‌ಬ್ಯೂಟಿ ಎಂದು ಖ್ಯಾತಿ ಪಡೆದುಕೊಂಡ ಅನುಪಮಾ ಇದೀಗ ಹಾಟ್ ಬ್ಯೂಟಿಯಾಗಿ ಪ್ರಮೋಷನ್ ಪಡೆದುಕೊಳ್ಳುತ್ತಿದ್ದಾರೆ. ಹಾಟ್ ಹಾಟ್ ಪೋಸ್ ಗಳೊಂದಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪೊಟೋ ಒಂದನ್ನು ಹಂಚಿಕೊಂಡಿದ್ದು, ಆ ಪೊಟೋ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆಕೆ ಹಂಚಿಕೊಂಡ ಪೋಟೋದಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ,

ನಟಿ ಅನುಪಮಾ ಕಾರ್ತಿಕೇಯ-2 ಸಿನೆಮಾದ ಬಳಿಕ ತುಂಬಾನೆ ಕ್ರೇಜ್ ಪಡೆದುಕೊಂಡರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದು, ಈ ಸಿನೆಮಾದ ಮೂಲಕ ಆಕೆ ತನ್ನ ಹಿಂದಿನ ಖ್ಯಾತಿಯನ್ನು ಪಡೆದುಕೊಂಡರು ಎನ್ನಬಹುದಾಗಿದೆ. ಬಳಿಕ 18 ಪೇಜಸ್ ಸಿನೆಮಾದಲ್ಲೂ ಸಹ ನಟಿಸಿದ್ದು, ಬ್ಯೂಟಿಪುಲ್ ಲವ್ ಸ್ಟೋರಿ ಸಿನೆಮಾ ಇದಾಗಿದೆ. ಈ ಸಿನೆಮಾ ಸಹ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ಸಿನೆಮಾದಲ್ಲಿ ನಿಖಿಲ್ ನನ್ನು ಅನುಪಮಾ ಡಾಮಿನೇಟ್ ಮಾಡಿದ್ದಾರೆ ಎಂದು ಹೇಳಿದರೇ ತಪ್ಪಾಗಲಾರದು. ಇದರ ಜೊತೆಗೆ ಬಟರ್‍ ಫ್ಲೈ ಎಂಬ ಲೇಟಿ ಓರಿಯೆಂಟೆಡ್ ಸಿನೆಮಾದಲ್ಲೂ ಸಹ ನಟಿಸಿದ್ದರು. ಈ ಸಿನೆಮಾ ಸಹ ಆಕೆಯ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಇನ್ನೂ 18 ಪೇಜಸ್ ಬಳಿಕ ಆಕೆಯ ಹೊಸ ಸಿನೆಮಾದ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ತಮ್ಮ ಅಭಿಮಾನಿಗಳಿಗೆ ಹತ್ತಿರದಲ್ಲೇ ಇರುತ್ತಾರೆ.

ನಟಿ ಅನುಪಮಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೊಟೋ ನೋಡಿದ ಕೂಡಲೇ ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಶಾಕ್ ಆಗಿದ್ದಾರೆ. ಬೆರಳಿಗೆ ಪ್ಲಾಸ್ಟಿಕ್ ಕವರ್‍ ಅನ್ನು ಉಂಗುರದಂತೆ ಹಾಕಿಕೊಂಡು ಪೊಟೋ ಶೇರ್‍ ಮಾಡಿದ್ದಾರೆ. ಜೊತೆಗೆ ಎಂಗೇಜ್ ಮೆಂಟ್ ಆಗೋಯ್ತು ಎಂದು ಕ್ಯಾಪ್ಷನ್ ಸಹ ಹಾಕಿದ್ದಾರೆ. ಈ ಪೊಟೋ ಹೊರಬರುತ್ತಿದ್ದಂತೆ ಎಲ್ಲರೂ ಶಾಕ್ ಆಗಿದ್ದಾರೆ. ಇನ್ನೂ ಆಕೆ ಈ ಪೊಟೋ ಅನ್ನು ಫನ್ನಿಯಾಗಿ ಶೇರ್‍ ಮಾಡಿದ್ದಾರೆ. ಆದರೆ ಪೊಟೋ ಮಾತ್ರ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ನಟಿ ಅನುಪಮಾ 18 ಪೇಜಸ್ ಸಿನೆಮಾದ ಬಳಿಕ ಯಾವ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ತಮಿಳು, ಮಲಯಾಳಂ ಹಾಗೂ ತೆಲುಗು ಸಿನೆಮಾಗಳಿಗೆ ಸಹಿ ಮಾಡಿದ್ದಾರೆ ಎಂದು ಹೇಳಲಾಗಿದ್ರೂ ಸಹ ಯಾವುದೇ ಅಧಿಕೃತ ಪ್ರಕಟನೆ ಇಲ್ಲ. ಇನ್ನೂ ಆಕೆ ಸೈರನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಹೋಮ್ಲಿಯಾಗಿದ್ದ ಅನುಪಮಾ ಇದೀಗ ತನ್ನಲ್ಲಿನ ಗ್ಲಾಮರ್‍ ಕೋಣವನ್ನು ಸಹ ಹೊರಹಾಕುತ್ತಾ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.