ತಾನು ಧರಿಸಿದ ಡ್ರೆಸ್ ಕಾರಣದಿಂದ ಸಖತ್ ಟ್ರೋಲ್ ಆದ ಬೋಲ್ಡ್ ಬ್ಯೂಟಿ ಅಮಲಾ ಪಾಲ್, ಆಕೆಯ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಸಖತ್ ಟ್ರೋಲ್…..!

Follow Us :

ಬಹುಬೇಡಿಕೆಯುಳ್ಳ ನಟಿ ಅಮಲಾಪಾಲ್ ವಿಭಿನ್ನ ಸಿನೆಮಾಗಳ ಮೂಲಕ ಫೇಂ ಸಂಪಾದಿಸಿಕೊಂಡಿದ್ದಾರೆ. ಬಹುಭಾಷ ನಟಿಯಾಗಿ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಫಾಲೋಯಿಂಗ್ ಸಹ ಪಡೆದುಕೊಂಡಿದ್ದಾರೆ. ಕಳೆದ ವರ್ಷ ನವೆಂಬರ್‍ ಮಾಹೆಯಲ್ಲಿ ಆಕೆ ಜಗತ್ ದೇಸಾಯಿ ಎಂಬಾತನನ್ನು ಎರಡನೇ ಮದುವೆಯಾದರು. ಮದುವೆಯಾದ ಕೆಲವೇ ತಿಂಗಳಲ್ಲಿ ಆಕೆ ಗರ್ಭಿಣಿಯಾಗಿದ್ದಾರೆ. ಗರ್ಭಿಣಿಯಾದರೂ ಸಹ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ವಿಡಿಯೋ ಕಾರಣದಿಂದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

ಹೊಸ ವರ್ಷದ ಸಮಯದಲ್ಲೇ ನಟಿ ಅಮಲಾಪಾಲ್ ಅಭಿಮಾನಿಗಳೊಂದಿಗೆ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆಕೆ ಮೊದಲ ತಾಯ್ತನದ ಸಂತೋಷದಲ್ಲಿದ್ದಾರೆ. ತಾನು ಗರ್ಭಿಣಿಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮಿಳು ನಿರ್ದೇಶಕ ಎ.ಎಲ್.ವಿಜಯ್ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಅಮಲಾಪಾಲ್ ಒಂಟಿಯಾಗಿಯೇ ಇದ್ದರು. ಬಳಿಕ ಆಕೆ ತಾನು ಮದುವೆಯಾಗಲಿರುವ ವ್ಯಕ್ತಿಯನ್ನು ಪರಿಚಯಿಸಿದ್ದರು. ಇದಾದ 10 ದಿನಗಳಲ್ಲೇ ಆತನನ್ನು ಮದುವೆಯಾದರು. ಗರ್ಭಿಣಿಯಾದ ಬಳಿಕ ಅಮಲಾಪಾಲ್ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್, ವಿಡಿಯೋ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ವಿಡಿಯೋ ಕಾರಣದಿಂದ ಸಖತ್ ಟ್ರೋಲ್ ಆಗುತ್ತಿದ್ದಾರೆ.

ಸದ್ಯ ನಟಿ ಅಮಲಾಪಾಲ್ ಅಭಿನಯದ ಆಡು ಜೀವಿತಂ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲೂ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ನಡೆದ ಆಡು ಜೀವಿತಂ ಸಿನೆಮಾದ ಟ್ರೈಲರ್‍ ಬಿಡುಗಡೆ ಸಮಾರಂಭಕ್ಕೆ ಆಕೆ ಬ್ಲೂ ಕಲರ್‍ ಡ್ರೆಸ್ ನಲ್ಲಿ ಬಂದಿದ್ದರು. ಬ್ಲೂಕಲರ್‍ ಸ್ಲೀವ್ ಲೆಸ್ ಡ್ರೆಸ್ ನಲ್ಲಿ ಆಕೆ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಆಕೆ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಹ ತುಂಬಾನೆ ವೈರಲ್ ಆಗಿದೆ. ಜೊತೆಗೆ ಭಾರಿ ಟ್ರೋಲ್ ಸಹ ಆಗಿದೆ. ಅನೇಕರು ಬೆಡ್ ನಿಂದ ನೇರವಾಗಿ ಬಾತ್ ರೂಂ ಗೆ ಹೋಗುವಂತಹ ರೀತಿಯ ಡ್ರೆಸ್ ನಲ್ಲಿ ಬಂದಿದ್ದೀಯಾ, ನಿಮ್ಮ ಡ್ರೆಸ್ಸಿಂಗ್ ಸ್ಟೈಲ್ ಚೆನ್ನಾಗಿಲ್ಲ. ನಾನು ನಿಮ್ಮ ಅಭಿಮಾನಿಯಾಗೋಕೆ ಇಷ್ಟವಿಲ್ಲ ಎಂಬೆಲ್ಲಾ ಕಾಮೆಂಟ್ ಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ಅಮಲಾಪಾಲ್ ಕಳೆದ 2009 ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಕೇರಳ ಮೂಲದ ನಟಿಯಾದ ಅಮಲಾಪಾಲ್ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯ ಅನೇಕ ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಸದ್ಯ ಆಕೆ ಆಡು ಜೀವಿತಂ ಎಂಬ ಮಲಯಾಳಂ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಟ್ರೈಲರ್‍ ಸಹ ಭಾರಿ ಸದ್ದು ಮಾಡುತ್ತಿದೆ.