Film News

ಎಲ್ಲಾ ಧನುಷ್ ಮಾಡಿರೋದು, ನಾನೇನು ಮಾಡಿಲ್ಲ ಎಂದ ಐಶ್ವರ್ಯ ರಜನಿಕಾಂತ್, ವೈರಲ್ ಆದ ಸಂಚಲನಾತ್ಮಕ ಹೇಳಿಕೆಗಳು….!

ಕಾಲಿವುಡ್ ನ ಖ್ಯಾತ ನಟ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಪುತ್ರಿ ಐಶ್ವರ್ಯ ಹಾಗೂ ಸ್ಟಾರ್‍ ನಟ ಧನುಷ್ ರವರು ಮದುವೆಯಾಗಿ ಸುಮಾರು 18 ವರ್ಷಗಳ ಕಾಲ ಅನ್ಯೋನ್ಯತೆಯಿಂದ ಜೀವನ ಸಾಗಿಸಿದ್ದರು. ಅಷ್ಟು ವರ್ಷಗಳ ಕಾಲ ಅನ್ಯೋನ್ಯತೆಯಿಂದ ಜೀವನ ಸಾಗಿಸಿದ್ದ ಈ ಜೋಡಿ ಸಡನ್ ಆಗಿ ಅಭಿಮಾನಿಗಳಿಗೆ ವಿಚ್ಚೇದನ ಪಡೆದುಕೊಳ್ಳುವ ಬಗ್ಗೆ ಶಾಕಿಂಗ್ ಸುದ್ದಿಯನ್ನು ಹೊರಹಾಕಿದರು. ಜನವರಿ 2022 ರಲ್ಲಿ ಈ ಜೋಡಿ ವಿಚ್ಚೇದನ ಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದರು. ಇದೀಗ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಐಶ್ವರ್ಯ ರಜನಿಕಾಂತ್  ನಟ ಧನುಷ್ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸೌತ್ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಹಿರಿಯ ಮಗಳು ಐಶ್ವರ್ಯ ಕಳೆದ 2004 ರಲ್ಲಿ ಕಾಲಿವುಡ್ ಸ್ಟಾರ್‍ ನಟ ಧನುಷ್ ರವರನ್ನು ಮದುವೆಯಾದರು. ಅವರಿಬ್ಬರಿಗೂ ಯಾತ್ರ ಹಾಗೂ ಲಿಂಗ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಮಾರು 18 ವರ್ಷಗಳ ಕಾಲ ಇಬ್ಬರೂ ಸಂತೋಷದಿಂದ ಜೀವನ ಸಾಗಿಸಿದ್ದರು. ಆದರೆ ಅವರ 18 ವರ್ಷಗಳ ದಾಂಪತ್ಯ ಜೀವನದಲ್ಲಿ ವಿಭೇದಗಳು ಹುಟ್ಟಿಕೊಂಡಿದ್ದು, 2022 ರಲ್ಲಿ ಬೇರೆಯಾದರು. ಈ ಜೋಡಿ ತೆಗೆದುಕೊಂಡ ನಿರ್ಣಯ ಕಾಲಿವುಡ್ ನಲ್ಲಿ ಭಾರಿ ಸಂಚಲನ ಸಹ ಸೃಷ್ಟಿಸಿತ್ತು. ಬಳಿಕ ಇಬ್ಬರ ಕುಟುಂಬಸ್ಥರೂ ಸಹ ವಿಚ್ಚೇದನದ ನಿರ್ಣಯಿದಂ ಹೊರಬರುವಂತೆ ಮನವೊಲಿಸಿದ್ದಾರೆ. ಆದರೂ ಸಹ ಇಬ್ಬರೂ ಬೇರೆಯಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಧನುಷ್ ಜೊತೆಗೆ ಬೇರೆಯಾದ ಬಳಿಕ ಐಶ್ವರ್ಯ ಮತ್ತೆ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಲಾಲ್ ಸಲಾಮ್ ಎಂಬ ಸಿನೆಮಾದ ಮೂಲಕ ರೀ ಎಂಟ್ರಿ ಕೊಟ್ಟರು. ಆದರೆ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು.

ಲಾಲ್ ಸಲಾಂ ಸಿನೆಮಾದ ಪ್ಲಾಪ್ ಬಳಿಕ ಆಕೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ಇದೇ ಸಮಯದಲ್ಲಿ ಮ್ಯೂಜಿಕ್ ಡೈರೆಕ್ಟರ್‍ ಅನಿರುದ್ ಕುರಿತು ಮಾತನಾಡಿದ್ದಾರೆ. ಐಶ್ವರ್ಯ ನಿರ್ದೇಶನದಲ್ಲಿ ಮೂಡಿಬಂದ 3 ಮೂನು ಸಿನೆಮಾದ ಮೂಲಕ ಅನಿರುದ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆತನನ್ನು ಪರಿಚಯ ಮಾಡುವುದರಲ್ಲಿ ನನಗೂ ಯಾವುದೇ ಸಂಬಂಧವಿಲ್ಲ. ಆ ವಿಚಾರದಲ್ಲಿ ಸಂಪೂರ್ಣ ಜವಾಬ್ದಾರಿ ಧನುಷ್ ರವರದ್ದೇ. ಅನಿರುದ್ ನನ್ನು ಓದಿಸಲು ವಿದೇಶಗಳಿಗೆ ಕಳುಹಿಸಲು ಅವರ ಪೋಷಕರು ಬಯಸಿದ್ದರಂತೆ. ಆದರೆ ಧನುಷ್ ಆತನಲ್ಲಿನ ಪ್ರತಿಭೆಯನ್ನು ಗುರ್ತಿಸಿ ಸ್ವಂತ ಖರ್ಚಿನಲ್ಲಿ ಕಿಬೋರ್ಡ್ ಖರೀದಿಸಿಕೊಟ್ಟು. ಐಶ್ವರ್ಯ ಜೊತೆಗೆ ಮಾತಾನಾಡಿ 3 ಸಿನೆಮಾದಲ್ಲಿ ಮ್ಯೂಸಿಕ್ ಡೈರೆಕ್ಟರ್‍ ಆಗಿ ಪರಿಚಯ ಮಾಡಿಸಿದರು. ಇದೀಗ ಅನಿರುದ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಸಾಧಿಸಿರುವುದು ಸಂತಸದ ವಿಚಾರ ಎಂದರು. ಇನ್ನೂ ಧನುಷ್  ಬಗ್ಗೆ ಐಶ್ವರ್ಯ ಪಾಸಿಟೀವ್ ಆಗಿ ಮಾತನಾಡಿರುವುದು ಧನುಷ್ ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದ್ದು, ಮತ್ತೆ ಅವರು ಒಂದಾಗಿ ಜೀವಿಸಬೇಕು ಎಂದು ಬಯಸುತ್ತಿದ್ದಾರೆ.

Most Popular

To Top