Film News

ಕಡಲ ತೀರದಲ್ಲಿ ಕುಳಿತು ಹಾಟ್ ಆಗಿ ಬೇಬಿ ಬಂಪ್ ಶೋ ಮಾಡಿದ ಅಮಲಾಪಾಲ್, ಬೀಚ್ ಬಳಿ ಮೈಂಡ್ ಬ್ಲೋಯಿಂಗ್ ಪೋಸ್ ಕೊಟ್ಟ ಬ್ಯೂಟಿ…..!

ಮಲಯಾಳಂ ಮೂಲದ ನಟಿ ಅಮಲಾಪಾಲ್ ಸಿನಿರಂಗದಲ್ಲಿ ವಿಭಿನ್ನ ನಟಿಯೆಂದೇ ಹೇಳಬಹುದು. ಪಾತ್ರ ಡಿಮ್ಯಾಂಡ್ ಮಾಡಿದ್ರೆ ಆಕೆ ನ್ಯೂಡ್ ಆಗಿ ಸಹ ನಟಿಸಲು ಸಿದ್ದವಾಗಿರುತ್ತಾರೆ. ಅದಕ್ಕೆ ಆಮೆ ಎಂಬ ಸಿನೆಮಾ ಉತ್ತಮ ಉದಾಹರಣೆ ಎನ್ನಬಹುದು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಎರಡನೇ ಮದುವೆಯಾಗಿ ಗರ್ಭಿಣಿಯಾಗಿರುವ ಸುದ್ದಿಯನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇದೀಗ ಆಕೆ ಕಡಲ ತೀರದಲ್ಲಿ ಕುಳಿತು ಹಾಟ್ ಆಗಿ ಬೇಬಿ ಬಂಪ್ ಶೋ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಳೆದ ನವೆಂಬರ್‍ ಮಾಹೆಯಲ್ಲಿ ಅಮಲಾಪಾಲ್ ಹಾಗೂ ಜಗತ್ ದೇಸಾಯಿ ಮದುವೆ ನಡೆಯಿತು. ಕೇರಳದ ಕೊಚ್ಚಿಯಲ್ಲಿ ಈ ಜೋಡಿಯ ಮದುವೆ ನೆರವೇರಿತು. ಅಮಲಾಪಾಲ್ ಈ ಹಿಂದೆ ತಮಿಳು ನಿರ್ದೇಶಕ ಎ.ಎಲ್.ವಿಜಯ್ ಜೊತೆಗೆ ಮದುವೆಯಾಗಿದ್ದರು. 2014 ರಲ್ಲಿ ಅವರಿಬ್ಬರು ವಿಚ್ಚೇದನ ಪಡೆದುಕೊಂಡರು. ಇದಾದ ಬಳಿಕ ಸುಮಾರು ದಿನಗಳ ಕಾಲ ಒಂಟಿಯಾಗಿದ್ದ ಅಮಲಾಪಾಲ್ ತನ್ನ ಬಾಯ್ ಫ್ರೆಂಡ್ ಜಗತ್ ದೇಸಾಯಿ ಎಂಬಾತನನ್ನು ವಿವಾಹವಾದರು. ಸದ್ಯ ಅಮಲಾಪಾಲ್ ಹಾಗೂ ಜಗತ್ ಪೋಷಕರಾಗುತ್ತಿದ್ದಾರೆ. ಅಮಲಾಪಾಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸವನ್ನು ಆಕೆ ತನ್ನ ಇನ್ಸ್ಟಾ ಖಾತೆಯ ಮೂಲಕ ಹಂಚಿಕೊಂಡಿದ್ದರು. ಇದೀಗ ಆಕೆ ಕಡಲ ತೀರದಲ್ಲಿ ಬೋಲ್ಡ್ ಆಗಿ ಬೇಬಿ ಬಂಪ್ ಶೋ ಮಾಡಿದ್ದಾರೆ.

ಕಳೆದ ವರ್ಷ ನವೆಂಬರ್‍ 5 ರಂದು ಅಮಲಾಪಾಲ್ ಹಾಗೂ ಜಗತ್ ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟರು. ಮದುವೆಯಾದ ಎರಡು ತಿಂಗಳಲ್ಲೇ ಆಕೆ ಗರ್ಭಿಣಿಯಾದ ಸುದ್ದಿಯನ್ನು ಹೊರಹಾಕಿದ್ದಾರೆ. ಹೊಸ ವರ್ಷದ ಸಮಯದಲ್ಲಿ ಆಕೆ ಗರ್ಭಿಣಿಯಾದ ಸುದ್ದಿಯನ್ನು ಹಂಚಿಕೊಂಡಿದ್ದರು. ಇದೀಗ ಆಕೆ ಬೇಬಿ ಬಂಪ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಕಡಲ ತೀರದಲ್ಲಿ ಕುಳಿತು ಹಾಟ್ ಆಗಿ ಬೇಬಿ ಬಂಪ್ ಶೋ ಮಾಡಿದ್ದಾರೆ. ರೆಡ್ ಡ್ರೆಸ್ ನಲ್ಲಿ ಪತಿಯೊಂದಿಗೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಬೇಬಿ ಬಂಪ್ ನಲ್ಲೂ ಸಹ ಆಕೆ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ತಾಯಿಯಾಗುತ್ತಿರುವ ಖುಷಿಯಲ್ಲಿ ಆಕೆ ತುಂಬಾ ಸಂತೋಷದಿಂದ ಪೋಸ್ ಕೊಟ್ಟಿದ್ದಾರೆ.

ಇನ್ನೂ ಆಕೆಯ ಈ ಲೇಟೆಸ್ಟ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಆಕೆಯ ವಿಡಿಯೋಗೆ ಫಿದಾ ಆಗಿದ್ದಾರೆ. ಲೈಕ್ ಗಳು, ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಜೊತೆಗೆ ಶುಭಾಷಯಗಳನ್ನು ಸಹ ಕೋರುತ್ತಿದ್ದಾರೆ.

Most Popular

To Top