ನನಗೆ ನಾಗಾರ್ಜುನ್ ರವರು ತಮ್ಮ ಮನೆಯಿಂದ ಊಟ ಕಳುಹಿಸುತ್ತಿದ್ದರು ಎಂದು ಭಾವುಕರಾದ ಆಶಿಕಾ ರಂಗನಾಥ್……!

Follow Us :

ಸದ್ಯ ಸೌತ್ ಸಿನಿರಂಗದಲ್ಲಿ ಕನ್ನಡ ನಟಿಯರ ಹವಾ ಜೋರಾಗಿದೆ ಎನ್ನಬಹುದಾಗಿದೆ. ರಶ್ಮಿಕಾ, ಪೂಜಾಹೆಗ್ಡೆ, ಶ್ರೀಲೀಲಾ ರವರು ಈಗಾಗಲೇ ತಮ್ಮ ಚಾಪನ್ನು ಮೂಡಿಸಿದ್ದಾರೆ. ಈ ಸಾಲಿಗೆ ಸ್ಯಾಂಡಲ್ ವುಡ್ ನ ಮಿಲ್ಕಿ ಬ್ಯೂಟಿ ಎಂತಲೇ ಕರೆಯಲಾಗುವ ಆಶಿಕಾ ಸಹ ಟಾಲಿವುಡ್ ಗೆ ಅಮಿಗೋಸ್ ಎಂಬ ಸಿನೆಮಾದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಇದೀಗ ನಾ ಸಾಮಿ ರಂಗ ಸಿನೆಮಾದ ಮೂಲಕ ಮತ್ತೊಮ್ಮೆ ಸದ್ದು ಮಾಡಲಿದ್ದಾರೆ. ಈ ಸಿನೆಮಾದಲ್ಲಿ ಆಶಿಕಾ ಅಕ್ಕಿನೇನಿ ನಾಗಾರ್ಜುನ್ ರವರ ಜೊತೆ ನಟಿಸಿದ್ದು, ಈ ಸಿನೆಮಾದ ಪ್ರಿ ರಿಲೀಸ್ ಈವೆಂಟ್ ನಲ್ಲಿ ಆಕೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಕಳೆದ 2016 ರಲ್ಲಿ ತೆರೆಕಂಡ ಜಾಲಿ ಭಾಯ್ಸ್ ಎಂಬ ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ಯುವಕರ ಕ್ರಷ್ ಆದರು. ಬಳಿಕ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿ ಬಹುಬೇಡಿಕೆ ಸೃಷ್ಟಿಸಿಕೊಂಡರು. ತಮಿಳಿನ ಅರಸನ್ ಎಂಬ ಸಿನೆಮಾದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಟ್ಟರು. ಈ ಸಿನೆಮಾ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ಕೊಡಲಿಲ್ಲ ಎಂದೇ ಹೇಳಬಹುದು. ಬಳಿಕ ಆಕೆ ನಂದಮೂರಿ ಕಲ್ಯಾಣ್ ರಾಮ್ ಜೊತೆ ಅಮಿಗೋಸ್ ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೂ ಎಂಟ್ರಿ  ಕೊಟ್ಟರು. ಇದೀಗ ಅಕ್ಕಿನೇನಿ ನಾಗಾರ್ಜುನ್ ಜೊತೆಗೆ ನಾ ಸಾಮಿ ರಂಗ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಜ.14 ರಂದು ತೆರೆಕಾಣಲಿದೆ.

ಇನ್ನೂ ನಾ ಸಾಮಿ ರಂಗ ಸಿನೆಮಾ ಬಿಡುಗಡೆಗೆ ಹತ್ತಿರಾಗಿದ್ದು, ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿದೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಈ ಸಿನೆಮಾ ಪ್ರೀ ರಿಲೀಸ್ ಈವೆಂಟ್ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಆಶಿಕಾ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾಋಎ. ಸಿನೆಮಾದ ಶೂಟಿಂಗ್ ನಿಮಿತ್ತ ಆಶಿಕ ಅನೇಕ ಬಾರಿ ಹೈದರಾಬಾದ್ ಗೆ ಹೋಗಬೇಕಾಗಿತ್ತು. ಈ ವೇಳೆ ಆಕೆ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತಿದ್ದರು. ಆಶಿಕಾ ಫಿಟ್ ನೆಸ್ ಗೆ ತುಂಬಾನೆ ಪ್ರಾಮುಖ್ಯತೆ ನೀಡುತ್ತಿದ್ದ ಕಾರಣ ಆಕೆ ಹೋಟೆಲ್ ಊಟ ಹೊಂದುತ್ತಿರಲಿಲ್ಲ. ಇದನ್ನು ಅರಿತ ನಾಗಾರ್ಜುನ್ ರವರು ತಮ್ಮ ಮನೆಯಿಂದ ಆಶಿಕಾಗೆ ಊಟ ಕಳುಹಿಸಿಕೊಡುತ್ತಿದ್ದರಂತೆ.

ಈ ವಿಚಾರವನ್ನೇ ಆಶಿಕಾ ಎಮೋಷನಲ್ ಆಗಿ ಹೇಳಿದ್ದಾರೆ. ಹೈದರಾಬಾದ್ ನಲ್ಲಿ ನಾನು ಇದ್ದಷ್ಟು ದಿನ ಮನೆಯ ಊಟವನ್ನು ನಾಗಾರ್ಜುನ್ ರವರು ಕಳುಹಿಸಿಕೊಡುತ್ತಿದ್ದರು. ನನಗೆ ಎರಡನೇ ಮನೆ ಸಿಕ್ಕಂತಾಯ್ತು ಎಂದು ಆಶಿಕಾ ಎಮೋಷನಲ್ ಆಗಿ ಹೇಳಿದ್ದಾರೆ. ಇದೇ ಈವೇಂಟ್ ನಲ್ಲಿ ಆಶಿಕಾ ಸಖತ್ ಆಗಿ ನೃತ್ಯ ಮಾಡುವ ಮೂಲಕ ಎಲ್ಲರನ್ನೂ ತನ್ನತ್ತ ಆಕರ್ಷಣೆ ಮಾಡಿದ್ದರು. ಸಂಕ್ರಾಂತಿ ಹಬ್ಬದ ನಿಮಿತ್ತ ಈ ಸಿನೆಮಾ ರಿಲೀಸ್ ಆಗಲಿದ್ದು, ಈ ಸಿನೆಮಾದ ಬಳಿಕ ಆಕೆಗೆ ಮತಷ್ಟು ಅವಕಾಶಗಳು ಹರಿದುಬರಬಹುದು ಎನ್ನಬಹುದಾಗಿದೆ.