ನೆವರ್ ಬಿಪೋರ್ ಎಂಬಂತೆ ಕಾಣಿಸಿಕೊಂಡ ಐಶ್ವರ್ಯ ಲಕ್ಷ್ಮೀ, ಸ್ಟಾರ್ ನಟಿಯರನ್ನೂ ಫಿದಾ ಮಾಡಿದ ಮಲ್ಲು ಬ್ಯೂಟಿ….!

Follow Us :

ಯಂಗ್ ಬ್ಯೂಟಿ ಐಶ್ವರ್ಯ ಲಕ್ಷ್ಮೀ ತಮಿಳು ಹಾಗೂ ಮಲಯಾಳಂ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡು ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಮಟ್ಟಿ ಕುಸ್ತಿ, ಪೊನ್ನಿಯನ್ ಸೆಲ್ವನ್, ಅಮ್ಮು ಸಿನೆಮಾಗಳ ಮೂಲಕ ಸೌತ್ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಿನೆಮಾಗಳು ಆಕೆಗೆ ತುಂಬಾನೆ ಕ್ರೇಜ್ ತಂದುಕೊಟ್ಟಿದ್ದು, ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸ್ಟಾರ್‍ ನಟಿಯರನ್ನೂ ಸಹ ಫಿದಾ ಮಾಡಿದೆ.

ಮಲ್ಲು ಯಂಗ್ ಬ್ಯೂಟಿ ಐಶ್ವರ್ಯ ಲಕ್ಷ್ಮೀ ಸೌತ್ ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಪಡೆದುಕೊಂಡು ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಗಾಡ್ಸೆ ಎಂಬ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಇತ್ತಿಚಿಗೆ ಆಕೆ ಅಮ್ಮು ವೆಬ್ ಸಿರೀಸ್, ಪೊನ್ನಿಯನ್ ಸೆಲ್ವನ್, ಮಟ್ಟಿ ಕುಸ್ತಿ ಮೊದಲಾದ ಸಿನೆಮಾಗಳ ಮೂಲಕ ಸಖತ್ ಫೇಂ ಪಡೆದುಕೊಂಡರು. ಇನ್ನೂ ಕೆರಿಯರ್‍ ಆರಂಭದಲ್ಲಿ ನಿರ್ಮಾಪಕಿಯಾಗಿ ಸಹ ಕೆಲವೊಂದು ಸಿನೆಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಕಟೆಂಟ್ ಉಳ್ಳ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡು ಇದೀಗ ಸೋಷಿಯಲ್ ಮಿಡಿಯಾದಲ್ಲೂ ಸಹ ಜೋರನ್ನು ಏರಿಸಿದ್ದಾರೆ.  ಈ ಹಾದಿಯಲ್ಲೇ ಐಶ್ವರ್ಯ ಲಕ್ಷ್ಮೀ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ.

ನಟಿ ಐಶ್ವರ್ಯ ಲಕ್ಷ್ಮೀ ಕಳೆದ 2014 ರಲ್ಲಿ ಮಾಡಲಿಂಗ್ ಮೂಲಕ ಕೆರಿಯರ್‍ ಆರಂಭಿಸಿದ್ದರು. ಬಳಿಕ ಮಲಯಾಳಂ ಸಿನೆಮಾಗಳಲ್ಲಿ ಅವಕಾಶ ಬಂದ ಹಿನ್ನೆಲೆಯಲ್ಲಿ ಆಕೆ ನಟಿಯಾಗಿ ಕೆರಿಯರ್‍ ಆರಂಭಿಸಿದ್ದರು. ಇದೀಗ ಐಶ್ವರ್ಯ ಲಕ್ಷ್ಮೀ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ಮಾದಕತೆಗೆ ಯುವಕರು ಫಿದಾ ಆಗಿದ್ದಾರೆ. ಈ ಹಿಂದೆ ಅಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳದೇ ಇರುತ್ತಿದ್ದ ಬ್ಯೂಟಿ ಇದೀಗ ತಾನೂ ಸಹ ಗ್ಲಾಮರ್‍ ಶೋ ಮಾಡಬಲ್ಲೆ ಎಂಬುದನ್ನು ತೋರಿಸಿದ್ದಾರೆ. ಒಪೆನ್ ಶೋಲ್ಡರ್‍ ಇರುವಂತಹ ಗೌನ್ ನಲ್ಲಿ ಎದೆಯ ಸೌಂದರ್ಯವನ್ನು ಶೋ ಮಾಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ.

ಇನ್ನೂ ಐಶ್ವರ್ಯ ಲಕ್ಷ್ಮೀ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ. ಅಭಿಮಾನಿಗಳು, ನೆಟ್ಟಿಗರು ಹಾಟ್ ಬೋಲ್ಡ್  ಕಾಮೆಂಟ್ ಗಳ ಜೊತೆಗೆ ಫೈರಿಂಗ್ ಎಮೋಜಿಗಳನ್ನು, ಲೈಕ್ ಗಳನ್ನು ಮಾಡುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡಿದ್ದಾರೆ. ಅದರಲ್ಲೂ ಐಶ್ವರ್ಯ ಲಕ್ಷ್ಮೀ ಗ್ಲಾಮರಸ್ ಪೊಟೋಗಳಿಗೆ ಮೃಣಾಲ್ ಠಾಕೂರ್‍, ಶ್ರದ್ದಾಶ್ರೀನಾಥ್, ಕೀರ್ತಿ ಸುರೇಶ್, ಅದಿತಿ ಶಂಕರ್‍ ಸ್ಟಾರ್‍ ನಟಿಯರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.