ಇಂಟರ್ ನೆಟ್ ಶೇಕ್ ಮಾಡುತ್ತಿವೆ ವರಣ್ ಲವ್ ಮದುವೆ ಪೊಟೋಸ್, ಮದುವೆ ವಸ್ತ್ರದಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ನವ ದಂಪತಿ……!

ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಸುಮಾರು ವರ್ಷಗಳಿಂದ ಪ್ರೀತಿಸಿ ಇದೀಗ ಸಪ್ತಪದಿ ತುಳಿಯುವ ಮೂಲಕ ಒಂದಾಗಿದ್ದಾರೆ. ನ.1 ರಂದು ಈ ಜೋಡಿಯ ಮದುವೆ ಇಟಲಿಯಲ್ಲಿ ಅದ್ದೂರಿಯಾಗಿ ನೆರವೇರಿದೆ. ಇದೀಗ…

ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಸುಮಾರು ವರ್ಷಗಳಿಂದ ಪ್ರೀತಿಸಿ ಇದೀಗ ಸಪ್ತಪದಿ ತುಳಿಯುವ ಮೂಲಕ ಒಂದಾಗಿದ್ದಾರೆ. ನ.1 ರಂದು ಈ ಜೋಡಿಯ ಮದುವೆ ಇಟಲಿಯಲ್ಲಿ ಅದ್ದೂರಿಯಾಗಿ ನೆರವೇರಿದೆ. ಇದೀಗ ಲಾವಣ್ಯ ಹಾಗೂ ವರುಣ್ ತೇಜ್ ಮದುವೆ ಪೊಟೋಗಳು ಹಾಗೂ ಮೆಗಾ ಫ್ಯಾಮಿಲಿಯ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.  ಇನ್ನೂ ಈ ಪೊಟೋಗಳಿಗೆ ಅಭಿಮಾನಿಗಳು VarunLav ಎಂಬ ಹ್ಯಾಷ್ ಟ್ಯಾಗ್ ಮೂಲಕ ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ನೂತನ ದಂಪತಿಯಾದ ವರುಣ್ ಹಾಗೂ ಲಾವಣ್ಯ ರವರುಗಳಿಗೆ ಶುಭಾಷಯಗಳನ್ನು ಹರಿಬಿಡುತ್ತಿದ್ದಾರೆ. ಈ ಮದುವೆ ಸಂಭ್ರಮದಲ್ಲಿ ಮೆಗಾಸ್ಟಾರ್‍ ಚಿರಂಜೀವಿ, ಪವನ್ ಕಲ್ಯಾಣ್, ನಾಗಬಾಬು, ಅಲ್ಲು ಅರ್ಜುನ್, ರಾಮಚ್ ಚರಣ್, ಸಾಯಿಧರಮ್ ತೇಜ್, ವೈಷ್ಣವ್, ಅಲ್ಲು ಶಿರಿಷ್ ಸೇರಿದಂತೆ ಮೆಗಾ ಕುಟುಂಬ ಹಾಗೂ ಅಲ್ಲು ಕುಟುಂಬದ ಸದಸ್ಯರು ಹಾಜರಿದ್ದರು. ಇಟಲಿಯಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಲ್ಲಿ ಮೆಗಾ ಫ್ಯಾಮಿಲಿ ಕುಟುಂಬಸ್ಥರು ಡ್ಯಾನ್ಸ್ ಸಹ ಮಾಡಿದ ದೃಶ್ಯಗಳು ಸಹ ವೈರಲ್ ಆಗುತ್ತಿವೆ. ಮೊದಲಿಗೆ ನಾಗಬಾಬು ಸೋಷಿಯಲ್ ಮಿಡಿಯಾದಲ್ಲಿ ಮದುವೆ ಪೊಟೋಗಳನ್ನು ಶೇರ್‍ ಮಾಡಿದ್ದರು. ವರುಣ್ ತೇಜ್ ಹಾಗೂ ಲಾವಣ್ಯ ಮದುವೆ ವಸ್ತ್ರಗಳಲ್ಲಿ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೈಕಿ ಒಂದು ಪೊಟೋ ಮಾತ್ರ ಇಂಟರ್‍ ನೆಟ್ ಶೇಕ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ವರುಣ್, ಲಾವಣ್ಯ ಮದುವೆ ಪೊಟೋಗಳ ಪೈಕಿ ಒಂದು ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನವ ದಂಪತಿ ಮುಂದೆ ಕುಳಿತಿದ್ದು, ಹಿಂದೆ ಮೆಗಾ ಹಿರೋಗಳೆಲ್ಲಾ ನಿಂತಿರುವ ಪೊಟೋ ಮೆಗಾ ಫ್ಯಾನ್ಸ್ ಗಳನ್ನು ಪುಲ್ ಖುಷಿಯಾಗುವಂತೆ ಮಾಡಿದೆ. ವರುಣ್ ಮದುವೆಯಲ್ಲಿ ಪವನ್ ಅಷ್ಟೊಂದು ಹೆಚ್ಚಾಗಿ ಕಾಣಿಸಿಕೊಳ್ಳದೇ ಇದ್ದರೂ ಸಹ ಈ ಪೊಟೋದಲ್ಲಿ ಫ್ಯಾಮಿಲಿ ಜೊತೆಗೆ ಪೋಸ್ ಕೊಟ್ಟಿದ್ದಾರೆ. ಸಂಪ್ರದಾಯಬದ್ದವಾಗಿ ಮೆಗಾ ಕುಟುಂಬದ ಸದಸ್ಯರು ಕಾಣಿಸಿಕೊಂಡಿದ್ದಾರೆ. ಆದರೆ ಪವನ್ ಕಲ್ಯಾಣ್ ಟಿ ಶರ್ಟ್ ಧರಿಸಿದ್ದಾರೆ. ಒಂದು ಕಡೆ ಚರಣ್ ಮತ್ತೊಂದು ಕಡೆ ಚಿರಂಜೀವಿ ಇದ್ದರೇ ಮಧ್ಯೆ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದಾರೆ. ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಮತ್ತೊಂದು ಪೊಟೋದಲ್ಲಿ ಚಿರು ಸುರೇಖಾ ದಂಪತಿ, ಪವನ್ ಅನ್ನಾ ಲೆಜಿನೋವಾ ದಂಪತಿ, ನಾಗಬಾಬು ಪದ್ಮಜ ದಂಪತಿ ಕಾಣಿಸಿಕೊಂಡಿದ್ದಾರೆ. ಈ ಪೊಟೋ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ನೂತನ ದಂಪತಿಗೆ ಮೆಗಾ ಫ್ಯಾನ್ಸ್ ಶುಭಾಷಯಗಳನ್ನು ಹರಿಬಿಡುತ್ತಿದ್ದಾರೆ.