ತೆಲುಗು ನಟನೊಂದಿಗೆ ಸಪ್ತಪದಿ ತುಳಿಯಲಿದ್ದಾರಂತೆ ಮಲ್ಲು ಬ್ಯೂಟಿ ಅನುಪಮಾ, ವೈರಲ್ ಆದ ರೂಮರ್……!

ಮಲಯಾಳಂ ಮೂಲದ ನಟಿ ಅನುಪಮಾ ಪರಮೇಶ್ವರನ್ ಪ್ರೇಮಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಕಡಿಮೆ ಸಮಯದಲ್ಲೇ ಬಹುಬೇಡಿಕೆಯನ್ನು ಸೃಷ್ಟಿಸಿಕೊಂಡರು. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು.…

ಮಲಯಾಳಂ ಮೂಲದ ನಟಿ ಅನುಪಮಾ ಪರಮೇಶ್ವರನ್ ಪ್ರೇಮಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಕಡಿಮೆ ಸಮಯದಲ್ಲೇ ಬಹುಬೇಡಿಕೆಯನ್ನು ಸೃಷ್ಟಿಸಿಕೊಂಡರು. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಇನ್ನೂ ಇತ್ತಿಚಿಗೆ ಆಕೆ ನಟಿಸಿದ ಬಹುತೇಕ ಎಲ್ಲಾ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಇದೀಗ ಅನುಪಮಾ ತೆಲುಗು ಸ್ಟಾರ್‍ ನಟರೊಬ್ಬರ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ ಎಂಬ ರೂಮರ್‍ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬಗ್ಗೆ ಅನುಪಮಾ ತಾಯಿ ಸಹ ರಿಯಾಕ್ಟ್ ಆಗಿದ್ದಾರೆ. ಅಷ್ಟಕ್ಕೂ ಆ ನಟ ಯಾರು, ಅನುಪಮಾ ತಾಯಿ ನೀಡಿದ ಕ್ಲಾರಿಟಿ ಏನು ಎಂಬ ವಿಚಾರಕ್ಕೆ ಬಂದರೇ,

ಮಲಯಾಳಂ ನಲ್ಲಿ ಪ್ರೇಮಂ ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ಅನುಪಮಾ ಹೆಚ್ಚಾಗಿ ಮಲಯಾಳಂ ಹಾಗೂ ತೆಲುಗು ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಆಕೆ ಅಭಿನಯದ ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾಗಳ ಒಳ್ಳೆಯ ಸಕ್ಸಸ್ ಕಂಡಿದೆ. ಬಳಿಕ ನಾನಿ ಅಭಿನಯದ ಅಂಟೆ ಸುಂದರಾನಿಕಿ ಸಿನೆಮಾದಲ್ಲೂ ಸಹ ಅತಿಥಿ ಪಾತ್ರದಲ್ಲಿ ನಟಿಸಿ ಒಳ್ಳೆಯ ಪ್ರಶಂಸೆ ಪಡೆದುಕೊಂಡರು. ಸದ್ಯ ಅನುಪಮಾ ತೆಲುಗಿನಲ್ಲಿ ಡಿಜೆ ಟಿಲ್ಲು ಸೀಕ್ವೆಲ್ ನಲ್ಲಿ ಹಾಗೂ ಮಲಯಾಳಂನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿರುವ ಅನುಪಮಾ ರವರ ಮದುವೆಯ ಬಗ್ಗೆ ಆಗಾಗ ಕೆಲವೊಂದು ರೂಮರ್‍ ಗಳು ಕೇಳಿಬರುತ್ತಿದೆ. ಇದೀಗ ಮತ್ತೊಮ್ಮೆ ಆಕೆಯ ಮದುವೆಯ ಬಗ್ಗೆ ಸುದ್ದಿಯೊಂದು ವೈರಲ್ ಆಗಿದೆ.

ಕ್ಯೂಟ್ ಬ್ಯೂಟಿ ಅನುಪಮಾ ಪರಮೇಶ್ವರನ್ ರವರ ಮದುವೆ ತೆಲುಗು ನಟನೊಂದಿಗೆ ನೆರವೇರಲಿದೆಯಂತೆ. ಅಷ್ಟಕ್ಕೂ ಆ ಯಂಗ್ ಹಿರೋ ಬೇರೆ ಯಾರೂ ಅಲ್ಲ ರಾಮ್ ಪೋತುನೇನಿ. ತೆಲುಗು ಸಿನಿರಂಗದ ಯಂಗ್ ನಟ ರಾಮ್ ಪೋತುನೇನಿ ಈಗಾಗಲೇ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಜೊತೆಗೆ ಈ ಜೋಡಿ ಎರಡು ಸಿನೆಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರಿಬ್ಬರೂ ಸಪ್ತಪದಿ ತುಳಿಯುವ ಮೂಲಕ ಒಂದಾಗಲಿದ್ದಾರೆ ಎಂಬ ರೂಮರ್‍ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ರಾಮ್ ಪೋತುನೇನಿ ಹಾಗೂ ಅನುಪಮಾ ಇಬ್ಬರೂ ಪ್ರೀತಿ ಮಾಡುತ್ತಿದ್ದು, ಮದುವೆಯಾಗಲು ಪೋಷಕರ ಒಪ್ಪಿಗೆ ಕೇಳಿದ್ದಾರಂತೆ. ಈ ಸಂಬಂಧ ಕೆಲವೊಂದು ಸುದ್ದಿ ಮಾದ್ಯಮಗಳಲ್ಲೂ ಸಹ ವಿಚಾರ ಪ್ರಸಾರವಾಗಿದೆ ಎನ್ನಲಾಗಿದೆ.

ಇನ್ನೂ ಈ ಬಗ್ಗೆ ಅನುಪಮಾ ತಾಯಿ ಸುನಿತಾ ರಿಯಾಕ್ಟ್ ಆಗಿದ್ದು ಇದೆಲ್ಲಾ ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದಾರೆ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಸುದ್ದಿಗಳನ್ನು ಯಾರೂ ನಂಬಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನೂ ರಾಮ್ ಪೋತುನೇನಿ ಹಾಗೂ ಅನುಪಮಾ ಕಾಂಬಿನೇಷನ್ ನಲ್ಲಿ ಹಲೋ ಗುರು ಪ್ರೇಮ ಕೋಸಮೇ ಹಾಗೂ ಉನ್ನದಿ ಒಕ್ಕಟೆ ಜಿಂದಗಿ ಎಂಬ ತೆಲುಗು ಸಿನೆಮಾಗಳಲ್ಲಿ ನಟಿಸಿದ್ದರು.