ಎನ್.ಟಿ.ಆರ್ ಮೇಲೆ ಕೋಪಗೊಂಡ ಬಾಲಯ್ಯ, ಎನ್.ಟಿ.ಆರ್ ಬಗ್ಗೆ ಕೇಳಿದ ಪ್ರಶ್ನೆಗೆ ಐ ಡೋಂಟ್ ಕೇರ್ ಎಂದ ಬಾಲಕೃಷ್ಣ…..!

ಆಂಧ್ರಪ್ರದೇಶದಲ್ಲಿ ಇನ್ನೇನು ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜಕೀಯ ರಂಗೇರುತ್ತಿದೆ. ದಿವಂಗತ ಸೀನಿಯರ್‍ ನಟ ನಂದಮೂರಿ ತಾರಕರಾಮಾರಾವ್ ರವರು ಕಾಂಗ್ರೇಸ್ ಪಕ್ಷವನ್ನು ಎದುರು ಹಾಕಿಕೊಂಡು ಸಿಎಂ ಆಗಿದ್ದರು. ತೆಲುಗು ದೇಶಂ ಪಾರ್ಟಿ ಕಟ್ಟಿ…

ಆಂಧ್ರಪ್ರದೇಶದಲ್ಲಿ ಇನ್ನೇನು ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜಕೀಯ ರಂಗೇರುತ್ತಿದೆ. ದಿವಂಗತ ಸೀನಿಯರ್‍ ನಟ ನಂದಮೂರಿ ತಾರಕರಾಮಾರಾವ್ ರವರು ಕಾಂಗ್ರೇಸ್ ಪಕ್ಷವನ್ನು ಎದುರು ಹಾಕಿಕೊಂಡು ಸಿಎಂ ಆಗಿದ್ದರು. ತೆಲುಗು ದೇಶಂ ಪಾರ್ಟಿ ಕಟ್ಟಿ ಅವಿಭಜಿತ ಆಂಧ್ರಪ್ರದೇಶವನ್ನು ಆಳಿದಂತಹ ಕುಟುಂಬ ಎನ್ನಿಸಿಕೊಂಡಿದೆ. ಇಂದಿಗೂ ತೆಲುಗು ರಾಷ್ಟ್ರಗಳಲ್ಲಿ ನಂದಮೂರಿ ಕುಟುಂಬ ತುಂಭಾನೆ ಪ್ರಾಬಲ್ಯ ಹೊಂದಿದೆ. ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ರವರನ್ನು ಹಗರಣವೊಂದರಲ್ಲಿ ಬಂಧಿಸಿದ್ದು, ಭಾರಿ ಸಂಚಲನ ಮೂಡಿಸಿದೆ.

ಇತ್ತೀಚಿಗೆ ನಂದಮೂರಿ ಕುಟುಂಬದಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ನಟ ನಂದಮೂರಿ ಬಾಲಕೃಷ್ಣ ಹಾಗೂ ಯಂಗ್ ಟೈಗರ್‍ ಎನ್.ಟಿ.ಆರ್‍ ನಡುವೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಬಾಲಕೃಷ್ಣ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ರವರು ಜೂನಿಯರ್‍ ಎನ್.ಟಿ.ಆರ್‍ ರವರನ್ನು ಕುಟುಂಬ ಹಾಗೂ ಪಕ್ಷದಿಂದ ದೂರ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಬಾಲಕೃಷ್ಣ, ಚಂದ್ರಬಾಬು ನಾಯ್ಡು ಹಾಗೂ ಜೂನಿಯರ್‍ ಎನ್.ಟಿ.ಆರ್‍ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಪದೇ ಪದೇ ಕೇಳಿಬರುತ್ತಿದೆ. ಇದೀಗ ಮತ್ತೊಮ್ಮೆ ಈ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ಹಗರಣವೊಂದರಲ್ಲಿ ಚಂದ್ರಬಾಬು ನಾಯ್ಡು ರವರನ್ನು ಬಂಧಿಸಿ ಜೈಲಿನಲ್ಲಿದ್ದಾರೆ. ಆದರೆ ಜೂನಿಯರ್‍ ಎನ್.ಟಿ.ಆರ್‍ ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಾಗಲೀ ಅಥವಾ ಬಹಿರಂಗ ಹೇಳಿಕೆಯನ್ನಾಗಲಿ ನೀಡಿಲ್ಲ. ಅಷ್ಟೇಅಲ್ಲದೇ ಕುಟುಂಬದೊಂದಿಗೆ ವಿದೇಶ ಪ್ರವಾಸಕ್ಕೆ ಹೋಗಿ ಬಂದರು. ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ವಿವಿಧ ರೀತಿಯ ಚರ್ಚೆಗಳೂ ಸಹ ನಡೆದಿದೆ.

ಚಂದ್ರಬಾಬು ನಾಯ್ಡು ರವರ ಬಂಧನದ ಬಗ್ಗೆ ಅನೇಕ ರಾಜಕೀಯ ಗಣ್ಯರು, ಸಿನೆಮಾ ಸೆಲೆಬ್ರೆಟಿಗಳೂ ಸಹ ಬೆಂಬಲ ಸೂಚಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸದ್ಯ ತೆಲುಗು ದೇಶಂ ಪಾರ್ಟಿಯನ್ನು ನಂದಮೂರಿ ಬಾಲಕೃಷ್ಣ ಮುನ್ನೆಡೆಸುತ್ತಿದ್ದಾರೆ. ಇತ್ತೀಚಿಗೆ ನಂದಮೂರಿ ಬಾಲಕೃಷ್ಣರವರಿಗೆ ಪತ್ರಕರ್ತರು ಜೂನಿಯರ್‍ ಎನ್.ಟಿ.ಆರ್‍ ಬಗ್ಗೆ ಕೇಳಿದ ಪ್ರಶ್ನೆಗೆ ಗರಂ ಆಗಿ ಉತ್ತರಿಸಿದ್ದಾರೆ. ಜೂನಿಯರ್‍ ಎನ್.ಟಿ.ಆರ್‍ ಚಂದ್ರಬಾಬು ನಾಯ್ಡು ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಏಕೆ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಬಾಲಯ್ಯ ಸಿನಿಮೀಯ ಶೈಲಿಯಲ್ಲಿಯೇ ಉತ್ತರಿಸಿದ್ದಾರೆ. ಐ ಡೋಂಟ್ ಕೇರ್‍ ಎಂದು ಹೇಳಿದ್ದಾರೆ. ಬ್ರೋ ಐ ಡೋಂಟ್ ಕೇರ್‍ ಇದು ನನ್ನ ಮುಂದಿನ ಸಿನೆಮಾದ ಹೆಸರು, ಸಿನೆಮಾದಲ್ಲಿ ಮಾತ್ರವಲ್ಲ ಸಿನೆಮಾದ ಹೊರತಾಗಿಯೂ ಐ ಡೋಂಟ್ ಕೇರ್‍ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇನ್ನೂ ಚಂದ್ರಬಾಬು ರವರೇ ಜೂನಿಯರ್‍ ಎನ್.ಟಿ.ಆರ್‍ ರವರನ್ನು ಪಕ್ಷದಿಂದ ದೂರ ಇಟ್ಟಿದ್ದಾರಂತೆ. ಟಿಡಿಪಿ ಪಕ್ಷ ಹಾಗೂ ನಂದಮೂರಿ ಕುಟುಂಬದ ವತಿಯಿಂದ ಹಮ್ಮಿಕೊಂಡಿದ್ದ ಎನ್.ಟಿ.ಆರ್‍ ಜನ್ಮ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಜೂ. ಎನ್.ಟಿ.ಆರ್‍ ರವರಿಗೆ ಆಹ್ವಾನ ಇರಲಿಲ್ಲ. ಜೂನಿಯರ್‍ ಎನ್.ಟಿ.ಆರ್‍ ರವರ ಪೋಸ್ಟರ್‍ ಸಹ ಎಲ್ಲಿಯೂ ಹಾಕಿರಲಿಲ್ಲ. ಜೂನಿಯರ್‍ ಎನ್.ಟಿ.ಆರ್‍ ಪೋಸ್ಟರ್‍ ತಂದ ಅಭಿಮಾನಿಗಳನ್ನು ಸಹ ಹೊರಗೆ ಕಳುಹಿಸಲಾಗಿತ್ತು. ಈ ಎಲ್ಲಾ ಕಾರಣಗಳಿಂದ ನಂದಮೂರಿ ಕುಟುಂಬದಲ್ಲಿ ಮುನಿಸು ಹೆಚ್ಚಾಗಿದೆ ಎನ್ನಲಾಗುತ್ತಿದೆ.