Film News

ಫ್ರಂಟ್ ಅಂಡ್ ಬ್ಯಾಕ್ ಸೌಂದರ್ಯದ ಮೂಲದ ಮಾದಕ ನೋಟ ಬೀರಿದ ರಾಶಿ ಖನ್ನಾ, ವೈರಲ್ ಆದ ಪೊಟೋಸ್…!

ಸೌತ್ ಸಿನಿರಂಗದ ನಟಿ ರಾಶಿ ಖನ್ನಾ ತೆಲುಗಿನ ಊಹಲು ಗುಸಗುಸಲಾಡೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾದ ಮೂಲಕವೇ ಆಕೆ ಅನೇಕರ ಯುವಕರ ಕನಸಿನ ರಾಣಿಯಾದರು. ಒಳ್ಳೆಯ ಕ್ರೇಜ್ ಪಡದುಕೊಂಡ ಈಕೆಗೆ ಇತ್ತೀಚಿಗೆ ಕೊಂಚ ಅವಕಾಶಗಳೂ ಸಹ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಸಖತ್ ಹವಾ ಕ್ರಿಯೇಟ್ ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ದೆಹಲಿ ಮೂಲದ ನಟಿ ರಾಶಿ ಖನ್ನಾ ಫಾರ್ಜಿ ಎಂಬ ಸಿರೀಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿರೀಸ್ ನಲ್ಲಿ ಷಾಹಿದ್ ಕಪೂರ್‍, ವಿಜಯ್ ಸೇತುಪತಿ, ಕೆ.ಕೆ. ಮಿನನ್ ಮೊದಲಾದವರ ಜೊತೆಗೆ ರಾಶಿಖನ್ನಾ ಸಹ ಬಣ್ಣ ಹಚ್ಚಿದ್ದಾರೆ. ಇನ್ನೂ ಈ ಸೀರಿಸ್ ನ ಟ್ರೈಲರ್‍ ರಿಲೀಸ್ ಈವೆಂಟ್ ನಲ್ಲಿ ರಾಶಿ ಆಲ್ಟ್ರಾ ಸ್ಟೈಲಿಷ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಫ್ರಂಟ್ ನಲ್ಲಿ ಕ್ಲೀವೇಜ್ ಸೌಂದರ್ಯ ಹಾಗೂ ಬ್ಯಾಕ್ ಸೌಂದರ್ಯವನ್ನು ಶೋ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಆಕೆ ನೆವರ್‍ ಬಿಪೋರ್‍ ಅನ್ನೋ ತರಹ ಈ ಪೋಸ್ ಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ವಿರಹ ವೇದನೆಯನ್ನು ಮುಖದಲ್ಲಿ ಸ್ಪಷ್ಟವಾಗಿ ಕಾಣುವಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳು, ಫೈರಿಂಗ್ ಎಮೋಜಿಗಳು, ಲೈಕ್ ಗಳ ಮೂಲಕ ವೈರಲ್ ಮಾಡುತ್ತಿದ್ದಾರೆ.

ಇನ್ನೂ ರಾಶಿ ಖನ್ನಾ ರವರಿಗೆ ಟಾಲಿವುಡ್ ನಲ್ಲಿ ಕೊಂಚ ಹಿನ್ನೆಡೆಯಾದ ಕಾರಣದಿಂದ ಆಕೆ ಬಾಲಿವುಡ್ ಮೇಲೆ ಪೋಕಸ್ ಇಟ್ಟರು. ಈ ಕಾರಣದಿಂದಲೇ ಆಕೆ ಸೆಕ್ಸಿಯಾಗಿ ಮತಷ್ಟು ಪೋಕಸ್ ಮಾಡಲು ಶುರು ಮಾಡಿದ್ದಾರೆ. ಇನ್ನೂ ಆಕೆ ಅಭಿನಯದ ಫಾರ್ಜಿ ಸಿರೀಸ್ ಫೆಬ್ರವರಿ 10 ರಿಂದ ಅಮೇಜಾನ್ ಪ್ರೈಂ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ ರಾಶಿ ಖನ್ನಾ ರುದ್ರ ಎಂಬ ಟೈಟಲ್ ನ ಸಿರೀಸ್ ನಲ್ಲೂ ಸಹ ಕಾಣಿಸಿಕೊಂಡಿದ್ದರು. ಫಾರ್ಜಿ ರಾಶಿ ಖನ್ನಾ ನಟಿಸುತ್ತಿರುವ ಎರಡನೇ ಸಿರೀಸ್ ಆಗಿದೆ. ಇದರ ಜೊತೆಗೆ ರಾಶಿ ಖನ್ನಾ ಬಾಲಿವುಡ್ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಸಿದ್ದಾರ್ಥ್ ಮೆಲ್ಹೋತ್ರಾ ರವರ ಯೋಧ ಸಿನೆಮಾದಲ್ಲಿ ರಾಶಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾ ಜುಲೈ 7 ರಂದು ರಿಲೀಸ್ ಆಗಲಿದೆ. ಇನ್ನೂ ಈ ಸಿನೆಮಾದ ಮೇಲೆ ರಾಶಿ ಖನ್ನಾ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಇನ್ನೂ ರಾಶಿ ಖನ್ನಾಗೆ ತೆಲುಗಿನಲ್ಲಿ ಅವಕಾಶಗಳು ಬರುತ್ತಲೇ ಇಲ್ಲ. ಕಳೆದ ವರ್ಷ ತೆರೆಕಂಡ ಪಕ್ಕಾ ಕಮರ್ಷಿಯಲ್, ಥಾಂಕ್ಯೂ ಸಿನೆಮಾಗಳಲ್ಲಿ ರಾಶಿ ಖನ್ನಾ ನಟಿಸಿದ್ದರು. ಆದರೆ ಈ ಎರಡೂ ಸಿನೆಮಾಗಳೂ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಈ ಕಾರಣದಿಂದ ಆಕೆಗೆ ಟಾಲಿವುಡ್ ನಲ್ಲಿ ಅವಕಾಶಗಳು ನಿಂತು ಹೋಯಿತು ಎಂದು ಕೊಳ್ಳಲಾಗಿತ್ತು. ಆದರೆ ಆಕೆಗೆ ಸರ್ದಾರ್‍ ಸಿನೆಮಾ ಮತ್ತೇ ಆಕೆಗೆ ಹುರುಪು ತಂದುಕೊಟ್ಟಿತ್ತು. ಇದೀಗ ಆಕೆ  ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಹಾಟ್ ಪೊಟೋಶೂಟ್ಸ್ ಮೂಲಕ ನಿರ್ಮಾಪಕರು ಹಾಗೂ ನಿರ್ದೆಶಕರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ.

Most Popular

To Top