Film News

ಆಡಿಷನ್ ಗೆ ಕರೆದು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ, ಖಾಸಗಿ ಅಂಗ ಮುಟ್ಟಿಕೊಂಡ ಎಂದು ಕಾಸ್ಟಿಂಗ್ ಕೌಚ್ ಬಗ್ಗೆ ಮಾಳವಿಕಾ ಕಾಮೆಂಟ್ಸ್….!

ಸಿನಿರಂಗದಲ್ಲಿ ನಟಿಯಾಗಲು ಬಂದ ಅನೇಕರು ಕಾಸ್ಟಿಂಗ್ ಕೌಚ್ ಅನುಭವವನ್ನು ಎದುರಿಸುತ್ತಿರುತ್ತಾರೆ. ಅದರಲ್ಲೂ ಮಿಟೂ ಅಭಿಯಾನ ಬಂದ ಬಳಿಕ ಇಂತಹ ಅನೇಕ ಘಟನೆಗಳು ಹೊರಬಂದಿದೆ. ಅವಕಾಶ ಕೊಡುತ್ತೇನೆ ಮಂಚಕ್ಕೆ ಬಾ ಎಂದು ಅನೇಕ ನಟಿಯರನ್ನು ಕರೆದಿದ್ದಾಗಿ ಕೆಲವೊಂದು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಸೌತ್ ನ ನಟಿ ಮಾಳವಿಕಾ ಶ್ರೀನಾಥ್ ಸಹ ಕಾಸ್ಟಿಂಗ್ ಕೌಚ್ ಗೆ ಗುರಿಯಾಗಿದ್ದಾಗಿ, ಆಡಿಷನ್ ಕರೆದು ಖಾಸಗಿ ಅಂಗ ಮುಟ್ಟಿಕೊಂಡು ಅಸಭ್ಯವಾಗಿ ವರ್ತಿಸಿದ್ದಾಗಿ ಆಕೆ ಸಂದರ್ಶನವೊಂದರಲ್ಲಿ ತಾವು ಎದುರಿಸಿದ ಕಹಿ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

ಸಿನಿರಂಗದಲ್ಲಿ ಬೆಳೆಯಬೇಕು, ಹೆಸರು ಮಾಡಬೇಕೆಂದು ಅನೇಕ ಕಲಾವಿದರು ಅವಕಾಶಗಳಿಗಾಗಿ ಕಾಯುತ್ತಿರುತ್ತಾರೆ. ಆದರೆ ಅದನ್ನು ಕೆಲವರು ಬಂಡವಾಳ ಮಾಡಿಕೊಂಡು ಅವರೊಂದಿಗೆ ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ಇದರ ವಿರುದ್ದವಾಗಿ ಮಿಟೂ ಅಭಿಯಾನ ಸಹ ಆರಂಭವಾಗಿದ್ದು, ಮಿಟೂ ಬಳಿಕವೇ ಕಾಸ್ಟಿಂಗ್ ಕೌಚ್ ಮೂಲಕ ಸಮಸ್ಯೆ ಅನುಭವಿಸಿದವರು ಒಪೆನ್ ಆಗಿ ಹೇಳಿಕೊಂಡಿದ್ದಾರೆ. ಇನ್ನೂ ಈಗಾಗಲೇ ಅನೇಕ ನಟಿಯರು ಈ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ಅಂತಹ ಕೆಟ್ಟ ಪದ್ದತಿ ದೂರವಾಗಬೇಕೆಂದು ಸಹ ಹೋರಾಟಗಳನ್ನು ಮಾಡಿದ್ದಾರೆ. ಆದರೆ ಕೆಲವು ನಟಿಯರು ಕಾಸ್ಟಿಂಗ್ ಕೌಚ್ ಎಂಬುದು ಇಲ್ಲ. ಪ್ರತಿಭೆ ಇದ್ದರೇ ಏನಾದರೂ ಸಾಧನೆ ಮಾಡಬಹುದು ಎಂದೂ ಹೇಳಿದ ಉದಾಹರಣೆಗಳೂ ಸಹ ಇದೆ.

ಕೇರಳ ಮೂಲದ ನಟಿ ಮಾಳವಿಕಾ ಶ್ರೀನಾಥ್ ಸಹ ಕಾಸ್ಟಿಂಗ್ ಕೌಚ್ ನಿಂದ ಕಿರುಕುಳ ಅನುಭವಿಸಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಆಡಿಷನ್ ಗಾಗಿ ನಾನು ಹೋಗಿದ್ದೆ. ಮಲಯಾಳಂ ಸ್ಟಾರ್‍ ನಟಿ ಮಂಜು ವಾರಿಯರ್‍ ರವರ ಮಗಳ ಪಾತ್ರದ ಆಯ್ಕೆ ಅದಾಗಿತ್ತು. ಮಂಜು ವಾರಿಯರ್‍ ರವರ ಜೊತೆಗೆ ನಟಿಸುವುದು ಎಂದರೇ ತುಂಬಾ ಅದೃಷ್ಟ ಎಂದು ನಾನು ಸಹ ಹೋಗಿದ್ದೆ. ನನಗೆ ಸಿನಿರಂಗದಲ್ಲಿ ಯಾವುದೇ ಸಂಪರ್ಕಗಳು ಇರಲಿಲ್ಲ. ಆದರೆ ಅದು ನಿಜವಾದ ಆಡಿಷನ್ ಅಥವಾ ಫೇಕ್ ಆಡಿಷನ್ ಎಂಬುದು ನನಗೆ ತಿಳಿದಿರಲಿಲ್ಲ. ಆಗ ನಾನು ಚಿಕ್ಕವಳಾಗಿದ್ದೆ. ಆಡಿಷನ್ ವೇಳೆ ನನ್ನ ತಾಯಿ ಹಾಗೂ ಸಹೋದರಿಯನ್ನು ಹೊರಗೆ ಇರಲು ಹೇಳಿದರು. ನಾನು ಆಡಿಷನ್ ಗಾಗಿ ಒಳಗೆ ಹೋಗಿದ್ದೆ. ಆತ ನನ್ನ ಬಳಿ ಬಂದು ಅಸಭ್ಯವಾಗಿ ವರ್ತಿಸಿದ. ಆತನನ್ನು ದೂರ ತಳ್ಳಲು ಪ್ರಯತ್ನ ಮಾಡಿದೆ. ನನಗೆ ಆಗಲಿಲ್ಲ. ಜೋರಾಗಿ ಅತ್ತುಬಿಟ್ಟೆ. ಕ್ಯಾಮೆರಾ ಕೆಡವಲು ಪ್ರಯತ್ನ ಮಾಡಿದೆ. ಕೊನೆಗೆ ಆತನ ಗಮನ ಬೇರೆ ಕಡೆಗೆ ಹೋಗುವಂತೆ ಮಾಡಿ ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದೆ ಎಂದು ಮಾಳವಿಕ ಶ್ರೀನಾಥ್ ತಮಗಾದ ಕೆಟ್ಟ ಅನುಭವ ಬಿಚ್ಚಿಟ್ಟಿದ್ದಾರೆ.

ಆದರೆ ಆ ವ್ಯಕ್ತಿ ಯಾರು ಎಂಬುದನ್ನು ಮಾತ್ರ ಮಾಳವಿಕಾ ಹೇಳಿಲ್ಲ. ಈ ವಿಚಾರವನ್ನು ಆಕೆ ಭಯದಿಂದ ಯಾರೊಂದಿಗೂ ಸಹ ಹೇಳಿಲ್ಲವಂತೆ. ಸದ್ಯ ಸಿನಿರಂಗದಲ್ಲಿ ಆಕೆಗೆ ಒಳ್ಳೆಯ ಸ್ಥಾನ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಅದನ್ನು ಧೈರ್ಯದಿಂದ ಹೇಳಿರುವುದಾಗಿ ಮಾಳವಿಕಾ ಸಂದರ್ಶನದಲ್ಲಿ ಹೇಳಿದ್ದಾರೆ. ಮಾಳವಿಕಾ ಮಧುರಂ, ಸಾಟರ್‍ ಡೇ ನೈಟ್ ಸಿನೆಮಾಗಳ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ.

Most Popular

To Top